ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್
ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತ ಕೊಲೆ ನಡೆದಿದೆ. ಇಲ್ಲಿ ಎಫ್ಎಸ್ಎಲ್ ಅಧಿಕಾರಿಗಳೇ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು ತನಿಖೆಯಲ್ಲಿ ಬಯಲಾಗಿದೆ. ಹೌದು...ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯ ಮಾಜಿ ಸೈನಿಕ ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಸುಮಾ, ತನ್ನ ಪತಿ ಮಾಜಿ ಸೈನಿಕನಾಗಿದ್ದ ಸಂದೀಪ್ ಮಂಜರಗಿಯನ್ನ ಹತ್ಯೆಗೈದು ಬಳಿಕ ಆಡಿದ್ದ ನೌಟಂಕಿ ಆಟ ಬಟಾಬಯಲಾಗಿದೆ.
ಬೆಳಗಾವಿ, ಜೂನ್ 15): ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತ ಕೊಲೆ ನಡೆದಿದೆ. ಇಲ್ಲಿ ಎಫ್ಎಸ್ಎಲ್ ಅಧಿಕಾರಿಗಳೇ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು ತನಿಖೆಯಲ್ಲಿ ಬಯಲಾಗಿದೆ. ಹೌದು…ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯ ಮಾಜಿ ಸೈನಿಕ ( Ex Serviceman) ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಸುಮಾ, ತನ್ನ ಪತಿ ಮಾಜಿ ಸೈನಿಕನಾಗಿದ್ದ ಸಂದೀಪ್ ಮಂಜರಗಿಯನ್ನ ಹತ್ಯೆಗೈದು ಬಳಿಕ ಆಡಿದ್ದ ನೌಟಂಕಿ ಆಟ ಬಟಾಬಯಲಾಗಿದೆ. ಪ್ರಿಯಕರನ ತೆಕ್ಕೆಗಾಗಿ, 2 ಕೋಟಿ ರೂಪಾಯಿ ಇನ್ಶುರೆನ್ಸ್ ಹಣಕ್ಕಾಗಿ ಗಂಡನನ್ನೇ ಕೊಂದಿದ್ದ ಹಂತಕಿ ಇವಳು. ಪತಿ ಹತ್ಯೆಗಾಗಿ ಈಕೆ ಮಾಡಿದ್ದ ಮಸಲತ್ತು, ಕೊಲೆ ಸಾಕ್ಷ್ಯಗಳನ್ನ ಮುಚ್ಚಾಕಲು ಈಕೆ ಬಳಸಿದ್ದ ತಂತ್ರ ಕಂಡು ಪೊಲೀಸರು ಶಾಕ್ ಆಗಿದ್ದಾರೆ.. ಯಾಕಂದ್ರೆ, ಸಿನಿಮಾಗಳನ್ನೂ ಮೀರಿಸವಂತೆ ಸಂಚು ರೂಪಿಸಿದ್ದಾಳೆ.
2 ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣವನ್ನು ಜಿಲ್ಲೆಯ ಯಮಕನಮರಡಿ ಠಾಣೆ ಪೊಲೀಸರು ಭೇದಿಸಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಹಣ ಪಡೆದು, ಎಫ್ಎಸ್ಎಲ್ ಪ್ರಯೋಗಾಲಯದ ಸಿಬ್ಬಂದಿ ಸಹಾಯದಿಂದ ಆರೋಪಿಗಳು ವರದಿಯನ್ನೇ ಬದಲಿಸಿರುವುದು ರಾಜ್ಯದಲ್ಲೇ ಮೊದಲ ಪ್ರಕರಣ .
Published on: Jun 15, 2026 08:47 PM
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ

