ತಂಗಿನ ನೋಡೋಕೆ ಹೋದ್ರೆ ಯಾವನ್ ಜೊತೆ ಮಲಗೋಕೆ ಹೋಗಿದ್ದೆ ಅಂತಾರೆ: ಪತಿ ಮೇಲೆ ಪತ್ನಿ ಆರೋಪ
ಗಂಡನ ಮನೆಯವರಿಂದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಜ ನಾರಾಯಣಪುರದಲ್ಲಿ ನಡೆದಿದೆ. ಶ್ರೀಲಜಾ(32) ಹಲ್ಲೆಗೊಳಗಾದ ಮಹಿಳೆ. ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಸಂಬಂಧಿಗಳಾದ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮೀ, ಚೌಡಪ್ಪ ವಿರುದ್ಧ ಮಾರಣಾಂತಿಕ ಹಲ್ಲ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೇಕಲ್, (ಸೆಪ್ಟೆಂಬರ್ 29): ಗಂಡನ ಮನೆಯವರಿಂದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಜ ನಾರಾಯಣಪುರದಲ್ಲಿ ನಡೆದಿದೆ. ಶ್ರೀಲಜಾ(32) ಹಲ್ಲೆಗೊಳಗಾದ ಮಹಿಳೆ. ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಸಂಬಂಧಿಗಳಾದ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮೀ, ಚೌಡಪ್ಪ ವಿರುದ್ಧ ಮಾರಣಾಂತಿಕ ಹಲ್ಲ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸ್ವತಃ ಹಲ್ಲೆಗೊಳಗಾದ ಮಹಿಳೆ ಶ್ರೀಲಜಾ ಪ್ರತಿಕ್ರಿಯಿಸಿದ್ದು, ತಂಗಿಗೆ ಹುಷಾರಿಲ್ಲ ಎಂದು ನೋಡಿಕೊಂಡು ಬರಲು ಹೋಗಿದೆ. ಆದ್ರೆ, ಯಾರ ಜೊತೆ ಮಲಗಲು ಹೋಗಿದ್ದೆ ಎಂದು ಮನೆಗೆ ಸೇರಿಸದೆ ರಸ್ತೆಯಲ್ಲೇ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Published on: Sep 29, 2025 03:42 PM
Latest Videos
