ಮೋದಿ ಉದ್ಘಾಟಿಸಲಿರುವ ಚೆನಾಬ್ ರೈಲ್ವೆ ಸೇತುವೆ ಐಫೆಲ್ ಟವರ್​​ಗಿಂತ ಎತ್ತರವಿದೆ!

Updated on: Jun 03, 2025 | 7:50 PM

ಜೂನ್ 6ರಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೆ ಸಿದ್ಧವಾಗಿರುವ ಚೆನಾಬ್ ಮೇಲೆ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ಈ ಸೇತುವೆಯು ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳಲು ಮತ್ತು ಗಮನಾರ್ಹವಾದ ಸಾಗಣೆ ಸವಾಲುಗಳನ್ನು ನಿವಾರಿಸಲು ನಿರ್ಮಿಸಲಾದ ಎಂಜಿನಿಯರಿಂಗ್ ಅದ್ಭುತವಾಗಿದೆ.

ನವದೆಹಲಿ, ಜೂನ್ 3: ಭಾರತೀಯ ಸಂಪರ್ಕಕ್ಕೆ ಒಂದು ಮಹತ್ವದ ಹೆಜ್ಜೆಯಾಗಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯನ್ನು (Chenab Railway Bridge) ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಕೇಂದ್ರ ಬಾಹ್ಯಾಕಾಶ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಸೇತುವೆಯ ಮಹತ್ವವನ್ನು ಒತ್ತಿ ಹೇಳಿ ಈ ಮಹತ್ವದ ಕಾರ್ಯಕ್ರಮವನ್ನು ಘೋಷಿಸಿದರು. ಜಮ್ಮು ಮತ್ತು ಕಾಶ್ಮೀರದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ಯೋಜನೆಯ ಪ್ರಮುಖ ಅಂಶವೆಂದರೆ ಈ ಸೇತುವೆ ಎಂದು ಅವರು ಎತ್ತಿ ತೋರಿಸಿದರು. ಇದು ಬಹು ಮುಖ್ಯವಾಗಿ ಕಾಶ್ಮೀರ ಕಣಿವೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ನೇರವಾಗಿ ಸಂಪರ್ಕಿಸುತ್ತದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸವಾಲಿನ ಭೂಪ್ರದೇಶದಲ್ಲಿ ನೆಲೆಗೊಂಡಿರುವ ಐಕಾನಿಕ್ ಚೆನಾಬ್ ರೈಲ್ವೆ ಸೇತುವೆಯು ಎಂಜಿನಿಯರಿಂಗ್ ಅದ್ಭುತವಾಗಿದ್ದು, ನದಿಪಾತ್ರದಿಂದ 359 ಮೀಟರ್ (1,177 ಅಡಿಗಳಿಗಿಂತ ಹೆಚ್ಚು) ಎತ್ತರಕ್ಕೆ ಏರುತ್ತದೆ. ಇದು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗಿಂತ ಎತ್ತರವಾಗಿದೆ ಎಂಬುದು ಹೆಮ್ಮೆಯ ಸಂಗತಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More