ಯಥರ್ವ್​ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ರಾಧಿಕಾ ಪಂಡಿತ್ ಹಂಚಿಕೊಂಡ ವಿಡಿಯೋ ನೋಡಿ..

Updated on: Nov 10, 2024 | 5:55 PM

ಇತ್ತೀಚೆಗೆ ಯಥರ್ವ್​ ಯಶ್ ಹುಟ್ಟುಹಬ್ಬದ ಸಲುವಾಗಿ ಅದ್ದೂರಿಯಾಗಿ ಪಾರ್ಟಿ ಮಾಡಲಾಯಿತು. ಮಗನ ಬರ್ತ್​ಡೇ ಪಾರ್ಟಿಯನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರು ಅದ್ದೂರಿಯಾಗಿ ಆಯೋಜಿಸಿದರು. ಕುಟುಂಬದವರು ಮತ್ತು ಸ್ನೇಹಿತರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವಿಡಿಯೋವನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳಲ್ಲಿ ಅವರು ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಫ್ಯಾಮಿಲಿಗೆ ಸಮಯ ನೀಡುವುದನ್ನು ತಪ್ಪಿಸಲ್ಲ. ಕೆಲವೇ ದಿನಗಳ ಹಿಂದೆ ಅವರು ಪುತ್ರನ ಜನ್ಮದಿನಕ್ಕಾಗಿ ಅದ್ದೂರಿ ಪಾರ್ಟಿ ಆಯೋಜಿಸಿದರು. ರಾಧಿಕಾ ಪಂಡಿತ್ ಹಾಗೂ ಯಶ್ ಪುತ್ರ ಯಥರ್ವ್​ ಯಶ್ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ಆಪ್ತರ ಜೊತೆ ಪಾರ್ಟಿ ಮಾಡಲಾಗಿದೆ. ಆ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.