ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ

Edited By:

Updated on: May 26, 2026 | 5:47 PM

ನಟ ಯಶ್ ಅವರ ತಾಯಿ ಪುಷ್ಪಾ ಅರುಣ್​ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಪ್ರತಿಕ್ರಿಯೆ ಮಾಡಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ’ ಎಂದಿದ್ದಾರೆ.

ನಟ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್​ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ (DGP) ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಸನ ಸೈಟ್ ವಿಚಾರವಾಗಿ ಭೇಟಿಯಾಗಿದ್ದೆ. ಕೋರ್ಟ್​ನಲ್ಲಿ ಒಂದು ರಿಪೋರ್ಟ್ ಕೇಳಿದ್ದರು. ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಸ್ಪಂದಿಸಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ. ಇಲ್ಲಿಂದ ಎಸ್​ಪಿಯವರಿಗೆ ರೆಫರ್ ಮಾಡಿದ್ದಾರೆ. ಅಲ್ಲಿನ ಅಧಿಕಾರಿ ಆ ಕೆಲಸ ಮಾಡಬೇಕಿತ್ತು. ಅವರು ಮಾಡಿಲ್ಲ. ನಾನು ಈಗ ಬೆಂಗಳೂರಿನಲ್ಲಿ ಇದ್ದೆ. ಹಾಗಾಗಿ ಡಿಜಿಪಿಯವರನ್ನ ಭೇಟಿ ಮಾಡಿ ಕೇಳಿದ್ದೇನೆ. ಈಗ ಹಾಸನ ಎಸ್​ಪಿ ಅವರಿಗೆ ತಿಳಿಸಿದ್ದಾರೆ’ ಎಂದು ಡಿಜಿ ಕಚೇರಿಯಲ್ಲಿ ಯಶ್ ತಾಯಿ ಪುಷ್ಪಾ (Pushpa Arun Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
shivaprasad.hs