ಕಾಂಗ್ರೆಸ್ ನೀಡಿರಬಹುದಾದ ಆಫರ್ ಬಗ್ಗೆ ಏನನ್ನೂ ಹೇಳದೆ ಹಾರಿಕೆ ಉತ್ತರ ನೀಡಿದ ಯೋಗೇಶ್ವರ್
ಚನ್ನಪಟ್ಟಣ ಡಿಕೆ ಶಿವಕುಮಾರ್ಗೆ ಪ್ರತಿಷ್ಠೆಯ ಕಣವಾಗಿದೆ, ಜೆಡಿಎಸ್/ಎನ್ಡಿಎ ಅಭ್ಯರ್ಥಿಯನ್ನು ಸೋಲಿಸಲೇಬೇಕೆಂಬ ಛಲ ಅವರಲ್ಲಿದೆ. ಹಾಗಾಗೇ, ಕಾಂಗ್ರೆಸ್ ಪಕ್ಷದಿಂದ ಯೋಗೇಶ್ವರ್ ಅವರನ್ನು ಸ್ಪರ್ಧೆಗಿಳಿಸುವ ಯೋಚನೆ ಶಿವಕುಮಾರ್ಗಿದೆ. ಯೋಗೇಶ್ವರ್ ಗೆದ್ದರೆ ಮಂತ್ರಿ ಮಾಡುವ ಆಫರ್ ಕೊಟ್ಟಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಮನಗರ: ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಪಿ ಯೋಗೇಶ್ವರ್, ಇಲ್ಲೂ ಅದನ್ನೇ ಹೇಳಿದರು. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಜವಾದರೂ ಕಾಂಗ್ರೆಸ್ನಿಂದ ಬರಬಹುದಾದ ಆಫರ್ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವಂತಿದೆ. ಕಾಂಗ್ರೆಸ್ ನಾಯಕರ ಜೊತೆ ನಡೆದಿರಬಹುದಾದ ಮಾತುಕತೆಯ ಬಗ್ಗೆ ಅವರು ಏನನ್ನೂ ಹೇಳದೆ ಗೌಪ್ಯತೆ ಕಾಪಾಡಿದರು. ಚುನಾವಣೆ ಎಂದ ಮೇಲೆ ಎಲ್ಲ ಪಕ್ಷಗಳ ಆಫರ್ ಇದ್ದೇ ಇರುತ್ತದೆ ಎಂದಷ್ಟೇ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಯೋಗೇಶ್ವರ್ರಿಂದ ಗುರುವಾರ ನಾಮಪತ್ರ ಸಲ್ಲಿಕೆ