ಯೋಗೇಶ್ವರ್ ನಿರ್ಗಮನ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲ್ಲ: ಬಿವೈ ವಿಜಯೇಂದ್ರ

|

Updated on: Oct 23, 2024 | 6:40 PM

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗಾಗಿ ಕೇವಲ ಯೋಗೇಶ್ವರ್ ಅವರನ್ನು ನೆಚ್ಚಿಕೊಂಡಿರಲಿಲ್ಲ, ಆ ಭಾಗದಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ ಎಂದ ವಿಜಯೇಂದ್ರ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಹೆಚ್ ಡಿ ಕುಮಾರಸ್ವಾಮಿ ಅವರು ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಎನ್​ಡಿಎ ಒಕ್ಕೂಟ ಶ್ರಮಸಲಿದೆ ಎಂದರು.

ಬೆಂಗಳೂರು: ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು ತಮ್ಮ ಪಕ್ಷಕ್ಕೆ ಅನಿರೀಕ್ಷಿತವೇನಲ್ಲ, ಇಂಥದೊಂದು ತೀರ್ಮಾನ ಅವರು ತೆಗೆದುಕೊಳ್ಳುವ ಬಗ್ಗೆ ತಮಗೆ ಅನುಮಾನ ಮತ್ತು ನಿರೀಕ್ಷೆಯಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ತಮ್ಮ ನಿರ್ಣಯ ಸರಿಯೋ ತಪ್ಪೋ ಅನ್ನೋದು ಯೋಗೇಶ್ವರ್ ಅವರಿಗೆ ಮುಂದೆ ಗೊತ್ತಾಗಲಿದೆ, ಅವರು ಹೋಗಿದ್ದರಿಂದ ಪಕ್ಷಕ್ಕೆ ನಷ್ಟವೇನೂ ಇಲ್ಲ ಎಂದು, ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಬಯಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡ: ಭೈರತಿ ಸುರೇಶ್​ ಆರೋಪಕ್ಕೆ ವಿಜಯೇಂದ್ರ ಆಕ್ರೋಶ