ಮಂಡ್ಯ ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ ಅಬ್ಬರಕ್ಕೆ ಮೈದಣಿಯ ಕುಣಿದ ಯುವಕರು, ಸಾಥ್ ನೀಡಿದ ಯುವತಿಯರು

Updated on: Apr 12, 2025 | 6:20 PM

ಬಿಗಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗುತ್ತಿದೆ. ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರ ದಾಹ ತಣಿಸಲು ರಸ್ತೆಗಳಲ್ಲಿ ನೀರು ಮತ್ತು ಶರಬತ್ತುಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ವರದಿಯಾಗಿರುವಂತೆ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ, ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ, ದುರ್ಗಾವಾಹಿನಿ ಸಂಘಟನೆಗಳು ಶೋಭಾಯಾತ್ರೆಯನ್ನು ಆಯೋಜಿಸಿವೆ.

ಮಂಡ್ಯ, ಏಪ್ರಿಲ್ 12: ನಗರದಲ್ಲಿ ಹಿಂದೂ ಸಂಘಟನೆಗಳು ಹನುಮ ಜಯಂತಿ (Hanuma Jayanti) ನಿಮಿತ್ತ ಆಯೋಜಿಸಿರುವ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಡಿಜೆ ಸೌಂಡ್​​ನ ಅಬ್ಬರ ದೂದೂರದವರೆಗೆ ಕೇಳಿಸುತ್ತಿದೆ. ಉರಿಬಿಸಿಲಲ್ಲೂ ಡಿಜೆ ಮ್ಯೂಸಿಕ್​ಗೆ ಯುವಕರು ಮೈ ಮರೆತು ಕುಣಿಯುತ್ತಿದ್ದಾರೆ, ಅನೇಕರ ಕೈಗಳಲ್ಲಿ ಭಗ್ವಾಗಳಿವೆ. ಯುವಕರ ಕುಣಿತ ಮತ್ತು ಡಿಜೆ ಮ್ಯೂಸಿಕ್ ನಿಂದ ಪ್ರೇರಿತರಾಗಿರುವ ಮಹಿಳೆಯರು ಸಹ ಕುಣಿಯುತ್ತಿದ್ದಾರೆ. ಪ್ರತ್ಯೇಕವಾಗಿ ಕುಣಿಯುತ್ತಿದ ಮಹಿಳೆಯರಿಗೆ ಮುಂದೆ ಕರೆದು ಡ್ಯಾನ್ಸ್ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಯುವತಿಯರು ಯುವಕರಿಗೆ ಕಮ್ಮಿಯಿಲ್ಲದಂತೆ ಕುಣಿದರು.

ಇದನ್ನೂ ಓದಿ:  ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಜನಸಾಗರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ