ಜಿಬೂಟಿ ಕರಾವಳಿಯಲ್ಲಿ ಬೋಟ್ ಮುಳುಗಿ 15 ಮಕ್ಕಳು ಸೇರಿ 109 ವಲಸಿಗರ ಭೀಕರ ಸಾವು

ಪೂರ್ವ ಆಫ್ರಿಕಾದ ಜಿಬೂಟಿ ಕರಾವಳಿಯಲ್ಲಿ 305 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮುಳುಗಡೆಯಾಗಿದ್ದು, ಈ ಭೀಕರ ದುರಂತದಲ್ಲಿ 15 ಮಕ್ಕಳು ಸೇರಿದಂತೆ 109 ವಲಸಿಗರು ಮೃತಪಟ್ಟಿದ್ದಾರೆ. ಜಿಬೂಟಿಯಿಂದ ಯೆಮೆನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮೃತರ ಪೈಕಿ 52 ಪುರುಷರು, 42 ಮಹಿಳೆಯರು ಹಾಗೂ 15 ಮಕ್ಕಳು ಸೇರಿದ್ದಾರೆ. ಈ ದುರಂತದಲ್ಲಿ 80ಕ್ಕೂ ಹೆಚ್ಚು ಜನರು ಬದುಕುಳಿದಿದ್ದಾರೆ. ಆಫ್ರಿಕಾದ ಹಾರ್ನ್ ಪ್ರದೇಶದ ಹತ್ತಾರು ಸಾವಿರ ವಲಸಿಗರು ಆರ್ಥಿಕ ಅವಕಾಶಗಳು ಮತ್ತು ಭದ್ರತೆ ಅರಸಿ ಜಿಬೂಟಿ ಹಾಗೂ 'ಬಾಬ್ ಎಲ್-ಮಂಡೆಬ್' ಜಲಸಂಧಿಯ ಮೂಲಕ ಗಲ್ಫ್ ದೇಶಗಳತ್ತ ಪ್ರಯಾಣಿಸುತ್ತಾರೆ. 

ಜಿಬೂಟಿ ಕರಾವಳಿಯಲ್ಲಿ ಬೋಟ್ ಮುಳುಗಿ 15 ಮಕ್ಕಳು ಸೇರಿ 109 ವಲಸಿಗರ ಭೀಕರ ಸಾವು
Boat Accident In Djibouti

Updated on: Oct 11, 2026 | 6:13 PM

ಜಿಬೂಟಿ, ಅಕ್ಟೋಬರ್ 11: ಜಿಬೂಟಿಯಿಂದ ಯೆಮೆನ್‌ಗೆ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಆಫ್ರಿಕಾ ಖಂಡದ ಹಾರ್ನ್ ಆಫ್ ಆಫ್ರಿಕಾ ಕರಾವಳಿ ಸಮೀಪ ಸಮುದ್ರದಲ್ಲಿ ಮುಳುಗಿ 15 ಮಕ್ಕಳು ಸೇರಿದಂತೆ ಕನಿಷ್ಠ 109 ವಲಸಿಗರು ದುರಂತವಾಗಿ ಸಾವನ್ನಪ್ಪಿದ್ದಾರೆ. ಸುಮಾರು 150ಕ್ಕೂ ಹೆಚ್ಚು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಈ ಬೋಟ್ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಬೋಟ್​​ನಲ್ಲಿದ್ದ ಬಹುತೇಕರು ಆಫ್ರಿಕಾದ ಹಾರ್ನ್ ಪ್ರದೇಶದ ನಿವಾಸಿಗಳು (ಮುಖ್ಯವಾಗಿ ಇಥಿಯೋಪಿಯಾ ಮತ್ತು ಸೊಮಾಲಿಯಾದಿಂದ ಬಂದವರು) ಎಂದು ತಿಳಿದುಬಂದಿದೆ.

ಈ ದುರಂತದಲ್ಲಿ 80ಕ್ಕೂ ಹೆಚ್ಚು ಜನರು ಬದುಕುಳಿದಿದ್ದಾರೆ. ಆಫ್ರಿಕಾದ ಹಾರ್ನ್ ಪ್ರದೇಶದ ಹತ್ತಾರು ಸಾವಿರ ವಲಸಿಗರು ಆರ್ಥಿಕ ಅವಕಾಶಗಳು ಮತ್ತು ಭದ್ರತೆ ಅರಸಿ ಜಿಬೂಟಿ ಹಾಗೂ ‘ಬಾಬ್ ಎಲ್-ಮಂಡೆಬ್’ ಜಲಸಂಧಿಯ ಮೂಲಕ ಗಲ್ಫ್ ದೇಶಗಳತ್ತ ಪ್ರಯಾಣಿಸುತ್ತಾರೆ. ಯೆಮೆನ್‌ನಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದರೂ ಈ ಅಪಾಯಕಾರಿ ಪ್ರಯಾಣ ಮುಂದುವರಿದಿದೆ.

ಇದನ್ನೂ ಓದಿ: ಸೌದಿ ಮೇಲೆ ಹೌತಿ ದಾಳಿ; ಅ. 10ರವರೆಗೆ ರಿಯಾದ್​ಗೆ ತೆರಳುವ ಏರ್ ಇಂಡಿಯಾ, ಇಂಡಿಗೋ ವಿಮಾನ ಸಂಚಾರ ರದ್ದು

ಇನ್ನೊಂದೆಡೆ, ಯುದ್ಧಪೀಡಿತ ಯೆಮೆನ್‌ನಿಂದ ಪಲಾಯನ ಮಾಡುತ್ತಿರುವ ಸಾವಿರಾರು ಜನರು ಕೆಂಪು ಸಮುದ್ರವನ್ನು ದಾಟಿ ಜಿಬೂಟಿಗೆ ತಲುಪುತ್ತಿದ್ದಾರೆ. ಪ್ರಸ್ತುತ 2,000ಕ್ಕೂ ಹೆಚ್ಚು ಯೆಮೆನ್‌ ನಿವಾಸಿಗಳು ಜಿಬೂಟಿಯಲ್ಲಿದ್ದು, ಅವರಿಗೆ ಜಿಬೂಟಿ ಸರ್ಕಾರ ಹಾಗೂ ಐಒಎಂ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತಿದೆ. ಯೆಮೆನ್‌ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರ ಮತ್ತು ಸೌದಿ ಅರೇಬಿಯಾ ಮೈತ್ರಿಕೂಟವು ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಕಳೆದ 12 ವರ್ಷಗಳಿಂದ ಯುದ್ಧ ನಡೆಸುತ್ತಿವೆ.

ಸ್ಥಳೀಯ ಕರಾವಳಿ ಕಾವಲು ಪಡೆ ಮತ್ತು ವಿಶ್ವಸಂಸ್ಥೆಯ ರಕ್ಷಣಾ ತಂಡಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಕೆಲವು ವಲಸಿಗರನ್ನು ಜೀವಂತವಾಗಿ ರಕ್ಷಿಸಿವೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಜಿಬೂಟಿಯ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ‘ಮನೆಯೊಳಗೇ ಇರಿ, ವಿಡಿಯೋ ಹಂಚಿಕೊಳ್ಳಬೇಡಿ’; ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆ

ಯೆಮೆನ್‌ನ ಪಶ್ಚಿಮ ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಎಲ್-ಮಂಡೆಬ್ ಜಲಸಂಧಿಯ ಸುತ್ತಮುತ್ತ ಸುಮಾರು ಒಂದು ತಿಂಗಳ ಹಿಂದೆ ಹೌತಿಗಳು ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಮರುಪಡೆಯಲು ಸೌದಿ ಅರೇಬಿಯಾ ಮತ್ತು ಮಿತ್ರಪಡೆಗಳು ವಾರಾಂತ್ಯದಲ್ಲಿ ಬೃಹತ್ ಭೂ ಮತ್ತು ವಾಯು ಕಾರ್ಯಾಚರಣೆಯನ್ನು ಆರಂಭಿಸಿವೆ.

ಜುಲೈನಿಂದ ಸೌದಿ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹೌತಿಗಳ ಸಂಘರ್ಷದಿಂದಾಗಿ ಯೆಮೆನ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಳೆದ ತಿಂಗಳು ಹೌತಿಗಳು ಇಡೀ ಪಶ್ಚಿಮ ಕರಾವಳಿಯನ್ನು ವಶಪಡಿಸಿಕೊಂಡಿದ್ದರು. ಸೌದಿ ಅರೇಬಿಯಾ ಅಮೆರಿಕದ ನೆರವು ಕೋರಿತ್ತಾದರೂ, ಅಮೆರಿಕದ ಆಸ್ತಿಗಳ ಮೇಲೆ ದಾಳಿ ಮಾಡುವುದಿಲ್ಲ ಎಂಬ ಹೌತಿಗಳ ಭರವಸೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌತಿಗಳ ವಿರುದ್ಧ ನೇರ ದಾಳಿ ನಡೆಸಲು ನಿರಾಕರಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us