ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಡ್ರೋನ್ ದಾಳಿ; 11 ಜನ ಸಾವು

|

Updated on: Mar 29, 2025 | 9:06 PM

ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ 3 ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನಿ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಉತ್ತರ ಪಾಕಿಸ್ತಾನದಲ್ಲಿ ಇಂದು (ಶನಿವಾರ) ಸೇನೆಯು ನಡೆಸಿದ ಡ್ರೋನ್ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ತಾಲಿಬಾನ್ ಈ ಮೊದಲು ಪಾಕಿಸ್ತಾನದ 7 ಸೈನಿಕರನ್ನು ಕೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಡ್ರೋನ್ ದಾಳಿ; 11 ಜನ ಸಾವು
Pakistan Army
Follow us on

ಪೇಶಾವರ, ಮಾರ್ಚ್ 29: ಅಫ್ಘಾನಿಸ್ತಾನದ ಗಡಿಯಲ್ಲಿರುವ ಉತ್ತರ ಪ್ರಾಂತ್ಯದ ಖೈಬರ್ ಪಖ್ತುಂಖ್ವಾದಲ್ಲಿ ತಾಲಿಬಾನ್ ವಿರುದ್ಧ ಪಾಕಿಸ್ತಾನಿ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ (Drone Attack) 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನಿ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ರಾತ್ರಿ 3 ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. “ಇಂದು ಬೆಳಿಗ್ಗೆ ಡ್ರೋನ್ ದಾಳಿಗೆ ಬಲಿಯಾದವರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ನಮಗೆ ತಿಳಿದುಬಂದಿತು” ಎಂದು ಪಾಕಿಸ್ತಾನದ ಪೊಲೀಸರು ತಿಳಿಸಿದ್ದಾರೆ.

ಉತ್ತರ ಪಾಕಿಸ್ತಾನದಲ್ಲಿ ಇಂದು ಪಾಕ್ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಒಂದು ದಿನ ಮೊದಲು 7 ಸೈನಿಕರನ್ನು ಕೊಂದ ತಾಲಿಬಾನ್ ವಿರುದ್ಧ ಪಾಕಿಸ್ತಾನ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತಿಭಟನೆಯ ರೂಪದಲ್ಲಿ ಸ್ಥಳೀಯ ನಿವಾಸಿಗಳು ಬಲಿಪಶುಗಳ ಶವಗಳನ್ನು ರಸ್ತೆಯಲ್ಲಿ ಇಟ್ಟರು. ಅವರು ದಾಳಿಯಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರು ಎಂದು ಹೇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ಚಕಮಕಿ, ಸೇನಾ ನಾಯಕ ಸಾವು ಹಾಗೂ 10 ಉಗ್ರರ ಹತ್ಯೆ

ಇದನ್ನೂ ಓದಿ
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

“ದಾಳಿಯ ಸಮಯದಲ್ಲಿ ತಾಲಿಬಾನ್ ಹೋರಾಟಗಾರರು ನಿಜವಾಗಿಯೂ ಆ ಸ್ಥಳಗಳಲ್ಲಿದ್ದಾರೆಯೇ ಎಂದು ಸ್ಥಾಪಿಸಲು ತನಿಖೆ ನಡೆಯುತ್ತಿದೆ” ಎಂದು ಮತ್ತೊಂದು ಪೊಲೀಸ್ ಮೂಲ ತಿಳಿಸಿದೆ. ಪೀಡಿತ ಸ್ಥಳಗಳು ನಾಗರಿಕ ಪ್ರದೇಶಗಳೇ ಅಥವಾ ಅವು ತಾಲಿಬಾನ್‌ಗಳಿಗೆ ಆಶ್ರಯ ನೀಡುತ್ತಿವೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಖೈಬರ್-ಪಖ್ತುನ್ಖ್ವಾದಲ್ಲಿ ಸುಮಾರು 100 ದಾಳಿಗಳ ಜವಾಬ್ದಾರಿಯನ್ನು ಟಿಟಿಪಿ ಹೊತ್ತುಕೊಂಡಿದೆ. ಅದೇ ಪ್ರಾಂತ್ಯದಲ್ಲಿ ಮನೆಯೊಂದರಲ್ಲಿ ಅಡಗಿಕೊಂಡಿದ್ದ “ಸಶಸ್ತ್ರ ತಾಲಿಬಾನ್” ಹೋರಾಟಗಾರರು ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ 7 ಸೈನಿಕರನ್ನು ಗುಂಡು ಹಾರಿಸಿ ಕೊಂದರು ಎಂದು ಪೊಲೀಸ್ ಮೂಲವೊಂದು ಇಂದು ತಿಳಿಸಿದೆ. ಹಲವಾರು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಪಾಕ್ ಸೇನೆಯು ಹೆಲಿಕಾಪ್ಟರ್ ಗನ್ನು ನಿಯೋಜಿಸಿ ಎಂಟು ತಾಲಿಬಾನ್ಗಳನ್ನು ಕೊಂದಿತು ಮತ್ತು ಇತರ 6 ಸೈನಿಕರು ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ