AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಆಫ್ರಿಕಾದ ಬಾರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ; 11 ಜನ ಸಾವು

ದಕ್ಷಿಣ ಆಫ್ರಿಕಾದ ಬಾರ್​​ನಲ್ಲಿ ಸಾಮೂಹಿಕ ಶೂಟೌಟ್ ನಡೆದಿದೆ. ಈ ದಾಳಿಯಲ್ಲಿ 3 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ 11 ಜನರಲ್ಲಿ 3 ವರ್ಷದ ಬಾಲಕ, 12 ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ ಕೂಡ ಸೇರಿದ್ದಾರೆ. 14 ಜನರು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಬಾರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ; 11 ಜನ ಸಾವು
Shootout
ಸುಷ್ಮಾ ಚಕ್ರೆ
|

Updated on: Dec 06, 2025 | 7:14 PM

Share

ನವದೆಹಲಿ, ಡಿಸೆಂಬರ್ 6: ದಕ್ಷಿಣ ಆಫ್ರಿಕಾದ ಬಾರ್‌ನಲ್ಲಿ ಇಂದು (ಶನಿವಾರ) ದುರಂತ ಘಟನೆ ನಡೆದಿದೆ. ಇಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಆಫ್ರಿಕಾದ (South Africa) ಆಡಳಿತ ರಾಜಧಾನಿ ಪ್ರಿಟೋರಿಯಾ ಬಳಿಯ ಪಟ್ಟಣದಲ್ಲಿರುವ ಬಾರ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಂಡೇಟಿನಿಂದ ಇನ್ನೂ 14 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೆ, ಇದುವರೆಗೂ ಪೊಲೀಸರು ಗಾಯಾಳುಗಳ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಪ್ರಿಟೋರಿಯಾದ ಪಶ್ಚಿಮದಲ್ಲಿರುವ ಸೌಲ್ಸ್‌ವಿಲ್ಲೆ ಟೌನ್‌ಶಿಪ್‌ನಲ್ಲಿರುವ ಲೈಸೆನ್ಸ್ ಪಡೆಯದ ಬಾರ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಮೃತರಾದವರಲ್ಲಿ ಮೂವರು ಮಕ್ಕಳು ಕೂಡ ಸೇರಿದ್ದಾರೆ. 3 ವರ್ಷದ ಬಾಲಕ, 12 ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ

ಗಮನಿಸಬೇಕಾದ ವಿಷಯವೆಂದರೆ, ದಕ್ಷಿಣ ಆಫ್ರಿಕಾ ಜಗತ್ತಿನಲ್ಲೇ ಅತಿ ಹೆಚ್ಚು ನರಹತ್ಯೆ ದರಗಳನ್ನು ಹೊಂದಿದೆ. 2024ರಲ್ಲಿ 26,000ಕ್ಕೂ ಹೆಚ್ಚು ಕೊಲೆಗಳನ್ನು ದಾಖಲಿಸಿದೆ. ಇದು ದಿನಕ್ಕೆ ಸರಾಸರಿ 70ಕ್ಕಿಂತ ಹೆಚ್ಚು ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​