ಕಿಡ್ನ್ಯಾಪ್​ ಆಗಿದ್ದ 150 ಭಾರತೀಯರ ಪಾಸ್​ಪೋರ್ಟ್​ ಪರಿಶೀಲಿಸಿದ ತಾಲಿಬಾನಿಗಳು; ಎಲ್ಲರೂ ಏರ್​ಪೋರ್ಟ್​ ಬಳಿ ಗ್ಯಾರೇಜ್​​​ನಲ್ಲಿ ಸುರಕ್ಷಿತ

ಇದೀಗ ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಿಡ್ನ್ಯಾಪ್​ ಆಗಿದ್ದಾರೆ ಎನ್ನಲಾಗಿದ್ದ 150 ಮಂದಿ ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತೀಯರ ಪಾಸ್​ಪೋರ್ಟ್​ಗಳನ್ನು ತಾಲಿಬಾನ್ ಉಗ್ರರು ಪರಿಶೀಲಿಸಿದ್ದರಾದರೂ ಯಾವುದೇ ರೀತಿಯ ಜೀವಹಾನಿ ಮಾಡಿಲ್ಲ ಎಂದು ವರದಿಗಳು ತಿಳಿಸಿವೆ.

ಕಿಡ್ನ್ಯಾಪ್​ ಆಗಿದ್ದ 150 ಭಾರತೀಯರ ಪಾಸ್​ಪೋರ್ಟ್​ ಪರಿಶೀಲಿಸಿದ ತಾಲಿಬಾನಿಗಳು; ಎಲ್ಲರೂ ಏರ್​ಪೋರ್ಟ್​ ಬಳಿ ಗ್ಯಾರೇಜ್​​​ನಲ್ಲಿ ಸುರಕ್ಷಿತ
ತಾಲಿಬಾನ್ ಉಗ್ರರು
Follow us
TV9 Web
| Updated By: Skanda

Updated on: Aug 21, 2021 | 2:39 PM

ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​ನಿಂದ ಕಿಡ್ನ್ಯಾಪ್​ ಆಗಿದ್ದಾರೆ ಎನ್ನಲಾಗಿದ್ದ 150 ಭಾರತೀಯರು ಸುರಕ್ಷಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಭಾರತೀಯರ ಪಾಸ್​ಪೋರ್ಟ್ ಪರಿಶೀಲಿಸಿದ ತಾಲಿಬಾನಿಗಳು ಕಾಬೂಲ್ ಏರ್​​ಪೋರ್ಟ್ ಬಳಿ ವಾಪಸ್ ಬಿಡುವ ಭರವಸೆ ನೀಡಿದ್ದರು. ಸದ್ಯ ಅವರೆಲ್ಲರೂ ಸುರಕ್ಷಿತವಾಗಿದ್ದು ಕಾಬೂಲ್​ ವಿಮಾನ ನಿಲ್ದಾಣದ ಬಳಿ ಇರುವ ಗ್ಯಾರೇಜ್​ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

150 ಭಾರತೀಯರನ್ನು ಕಿಡ್ನ್ಯಾಪ್​ ಮಾಡಿರುವ ಬಗ್ಗೆ ಕಾಬೂಲ್​ನ ಭಾರತೀಯ ದೂತಾವಾಸದ ಸಿಬ್ಬಂದಿ ಕೆಲ ಗಂಟೆಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್​ನಿಂದ ಮಾಡಿರುವ ಟ್ವೀಟ್​ ಲಭ್ಯವಾಗಿತ್ತು. ಆದರೆ, ಭಾರತೀಯರ ಕಿಡ್ನ್ಯಾಪ್​ ಆಗಿರುವ ಬಗ್ಗೆ ಭಾರತ ಸರ್ಕಾರ ತಕ್ಷಣ ಯಾವುದೇ ಖಚಿತತೆ ನೀಡಿರಲಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿರಲಿಲ್ಲ. ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಬಿತ್ತರವಾದ ಮಾಹಿತಿ ಆಧರಿಸಿ ಘಟನೆಯ ಬಗ್ಗೆ ತಿಳಿದುಕೊಳ್ಳಲಾಗಿತ್ತು.

ಇದೀಗ ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಿಡ್ನ್ಯಾಪ್​ ಆಗಿದ್ದಾರೆ ಎನ್ನಲಾಗಿದ್ದ 150 ಮಂದಿ ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತೀಯರ ಪಾಸ್​ಪೋರ್ಟ್​ಗಳನ್ನು ತಾಲಿಬಾನ್ ಉಗ್ರರು ಪರಿಶೀಲಿಸಿದ್ದರಾದರೂ ಯಾವುದೇ ರೀತಿಯ ಜೀವಹಾನಿ ಮಾಡಿಲ್ಲ ಎಂದು ವರದಿಗಳು ತಿಳಿಸಿವೆ.

ಕಾಬೂಲ್​​ನಿಂದ ಈವರೆಗೆ ಸುಮಾರು 12 ಸಾವಿರ ವಿದೇಶಿಯರ ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲಾ ಏರ್​​​ಲಿಫ್ಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರನ್ನು ರಕ್ಷಣೆ ಮಾಡುತ್ತಿರುವ ಹೊತ್ತಿನಲ್ಲೇ ಭಾರತೀಯರು ಎನ್ನಲಾದ ಸುಮಾರು 150 ಮಂದಿ ನಾಪತ್ತೆಯಾಗಿರುವುದು ಆತಂಕ ಮೂಡಿಸಿತ್ತು. ಆದರೆ, ಈಗ ಬಂದಿರುವ ಮಾಹಿತಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಕನ್ನಡಿಗರ ರಕ್ಷಣೆಗೆ ಕ್ರಮ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ರಕ್ಷಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ನಮಗೆ ಇರುವ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಗೆ (ಎಂಇಎ) ಕೊಡುತ್ತಿದ್ದೇವೆ. ಆಫ್ಘನ್‌ನಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ಆಫ್ಘನ್‌ನಲ್ಲಿನ ಪರಿಸ್ಥಿತಿ ನೋಡಿಕೊಂಡು ಎಂಇಎ ಕ್ರಮಕೈಗೊಳ್ಳಲಿದೆ ಎಂದು ನೋಡಲ್ ಅಧಿಕಾರಿ ಉಮೇಶ್‌ ಕುಮಾರ್ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್​ಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡು ತಮ್ಮ ಪೋಷಕರನ್ನು ಭಾರತಕ್ಕೆ ಕರೆ ತರುವಂತೆ ಕೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಭಾರತಕ್ಕೆ ಬರಲು ಇಚ್ಛಿಸುವ ಆಫ್ಘನ್ ಪ್ರಜೆಗಳಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ತಾತ್ಕಾಲಿಕ ವೀಸಾ ಪಡೆಯಲು, ವೆಬ್ ಸೈಟ್ ಮೂಲಕ ಅಪ್ಲೈ ಮಾಡಿ ಎಂದು ಸಲಹೆ ನೀಡಿದ್ದಾರೆ.

(150 Indians captured by Taliban in Kabul airport are safe says report)

ಇದನ್ನೂ ಓದಿ: ಕಾಬೂಲ್​ ವಿಮಾನ ನಿಲ್ದಾಣದಿಂದ 150 ಭಾರತೀಯರು ಕಿಡ್ನ್ಯಾಪ್​ ಆಗಿರುವ ಸಾಧ್ಯತೆ: ವಿದೇಶಿ ಮಾಧ್ಯಮಗಳಲ್ಲಿ ಮಾಹಿತಿ 

ಕಾಬೂಲ್​ನಲ್ಲಿ ಸುರಕ್ಷಿತವಾಗಿದ್ದೇನೆ; ವಾಯ್ಸ್ ಮೆಸೇಜ್ ಮೂಲಕ ಭಾರತಕ್ಕೆ ತಿಳಿಸಿದ ಕನ್ನಡತಿ