ಆಸ್ಟ್ರೇಲಿಯಾದ ಆಕಾಶದಲ್ಲಿ 2 ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ; ನಾಲ್ವರು ಸಾವು
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಹೆಲಿಕಾಪ್ಟರ್ ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾದ ಸಮುದ್ರದ ತೀರದಲ್ಲಿ ಇಂದು (ಸೋಮವಾರ) 2 ಹೆಲಿಕಾಪ್ಟರ್‌ಗಳು (Helicopter Crash) ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದು, ವಿಮಾನದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಡಲ ತೀರದ ಬಳಿ ಎರಡು ಹೆಲಿಕಾಪ್ಟರ್ಗಳ ನಡುವೆ ಘರ್ಷಣೆ ಉಂಟಾದ ನಂತರ 1 ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಹೆಲಿಕಾಪ್ಟರ್ ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಬೀಚ್ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಬ್ರಿಸ್ಬೇನ್‌ನಿಂದ ದಕ್ಷಿಣಕ್ಕೆ 45 ಮೈಲುಗಳಷ್ಟು ದೂರದಲ್ಲಿ ಗೋಲ್ಡ್ ಕೋಸ್ಟ್ ಇದೆ. ಈ ಪ್ರದೇಶವು ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾರು-ಟ್ರಕ್ ಡಿಕ್ಕಿಹೊಡೆದು ಅಪಘಾತ: 5 ಮಂದಿ ಸಾವು
ಆಕಾಶದಲ್ಲಿ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದ ರೋಟರ್‌ಗಳಲ್ಲಿ 1 ಮರಳಿನ ದಂಡೆಯ ಮೇಲೆ ಬಿದ್ದಿರುವ ಫೋಟೋಗಳು ಹರಿದಾಡುತ್ತಿವೆ.
ಒಂದು ಹೆಲಿಕಾಪ್ಟರ್ ಸಮುದ್ರದ ತೀರದಿಂದ ಕೆಲವು ಅಡಿಗಳಷ್ಟು ದೂರದಲ್ಲಿ ಮರಳಿನ ಮೇಲೆ ಪಲ್ಟಿಯಾಗಿದೆ. ಇದರ ರೋಟರ್‌ಗಳು ಸ್ವಲ್ಪ ದೂರದಲ್ಲಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Mon, 2 January 23