AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಳು ಬಿರುಗಾಳಿಯಿಂದ ಅಲ್ಲೋಲಕಲ್ಲೋಲ; 20 ವಾಹನಗಳ ನಡುವೆ ಅಪಘಾತ, 7 ಮಂದಿ ಸಾವು

ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಅನೇಕ ವಾಹನಗಳು ಹೋಗುತ್ತಿದ್ದಾಗ..ಏಕಾಏಕಿ ಬೀಸಿದ ಮರಳು ಸಹಿತ ಬಿರುಗಾಳಿಯಿಂದ ಕಣ್ಣೆಲ್ಲ ಮಂಜಾಯಿತು. ಹೀಗಾಗಿ ಚಾಲಕರ ನಿಯಂತ್ರಣ ತಪ್ಪಿ ಸರಣಿ ಅಪಘಾತ ನಡೆದಿದೆ.

ಮರಳು ಬಿರುಗಾಳಿಯಿಂದ ಅಲ್ಲೋಲಕಲ್ಲೋಲ; 20 ವಾಹನಗಳ ನಡುವೆ ಅಪಘಾತ, 7 ಮಂದಿ ಸಾವು
ಯೂಟಾ ಹೆದ್ದಾರಿಯಲ್ಲಿ ವಾಹನಗಳ ಅಪಘಾತ
TV9 Web
| Updated By: Lakshmi Hegde|

Updated on:Jul 26, 2021 | 4:08 PM

Share

20 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಏಳು ಮಂದಿ ಮೃತಪಟ್ಟ ಘಟನೆ ಯುಎಸ್​ನ ಯೂಟಾ(Utah) ರಾಜ್ಯದಲ್ಲಿ ಭಾನುವಾರ ಸಂಜೆ ನಡೆದಿದೆ. ಇದಕ್ಕೆ ಕಾರಣ ಮರಳು, ಧೂಳು (Sandstorm) ಸಹಿತ ಬಿರುಗಾಳಿ. ಈ ಮರಳು ಬಿರುಗಾಳಿಯಿಂದಾಗಿ ವಾಹನ ಚಾಲಕರಿಗೆ ಕಣ್ಣು ಬಿಡದಂತಾಗಿದೆ. ಹೀಗಾಗಿ ವಾಹನಗಳು ಒಂದಕ್ಕೊಂದು ಗುದ್ದಿಕೊಂಡಿದ್ದು, ಏಳು ಮಂದಿಯ ಜೀವ ಹೋಗಿದೆ. ಅನೇಕರು ಗಂಭೀರವಾಗಿ ಗಾಯಗೊಂಡಿದೆ ಎಂದು ಯೂಟಾದ ಸಾರ್ವಜನಿಕ ಸೇವಾ ವಿಭಾಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಯೂಟಾದ ಕಾನೋಶ್​ ಬಳಿ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ನಿಖರವಾಗಿ ಎಷ್ಟು ಜನರು ಗಾಯಗೊಂಡಿದ್ದಾರೆಂದು ಸಾರ್ವಜನಿಕ ಸೇವಾ ವಿಭಾಗ ತಿಳಿಸಿಲ್ಲ. ಆದರೆ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಅನೇಕ ವಾಹನಗಳು ಹೋಗುತ್ತಿದ್ದಾಗ..ಏಕಾಏಕಿ ಬೀಸಿದ ಮರಳು ಸಹಿತ ಬಿರುಗಾಳಿಯಿಂದ ಕಣ್ಣೆಲ್ಲ ಮಂಜಾಯಿತು. ಹೀಗಾಗಿ ಚಾಲಕರ ನಿಯಂತ್ರಣ ತಪ್ಪಿ ಸರಣಿ ಅಪಘಾತ ನಡೆದಿದೆ. ಗಾಯಗೊಂಡವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಯೂಟಾ ಹೆದ್ದಾರಿ ಗಸ್ತು ಅಧಿಕಾರಿಗಳು ರಿಚ್​ಫೀಲ್ಡ್​ ಮತ್ತು ಬೀವರ್​​ನಲ್ಲಿರುವ ಯೋಧರನ್ನು ಸಹಾಯಕ್ಕಾಗಿ ಕರೆಸಿದರು. ನೆಲ ಆಂಬುಲೆನ್ಸ್​ ಮತ್ತು ಏರ್​ ಅಂಬುಲೆನ್ಸ್​ಗಳೂ ಸ್ಥಳಕ್ಕೆ ಧಾವಿಸಿದವು ಎಂದು ಯೂಟಾ ಸಾರ್ವಜನಿಕ ಸೇವಾ ವಿಭಾಗ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಟ್ರ್ಯಾಕ್ಟರ್​, ಕಾರುಗಳೆಲ್ಲ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡ ಫೋಟೋಗಳು ಕೂಡ ವೈರಲ್​ ಆಗಿವೆ.

ಭಾನುವಾರ ಸಂಜೆ 4.30ರ ಹೊತ್ತಿಗೆ ಆಗ್ನೇಯ ಕನೋಶ್​​ನಲ್ಲಿ ಪ್ರಬಲವಾದ ಗುಡುಗು ಉಂಟಾಯಿತು. ಹಾಗೇ ಸುಮಾರು 51 ಎಂಪಿಎಚ್​​ನಷ್ಟು ವೇಗವಾಗಿ ಗಾಳಿಯೂ ಬೀಸಿತು. ಈ ಗಾಳಿ ಮರಳು, ಧೂಳುಗಳಿಂದ ಕೂಡಿತ್ತು. ಇದರಿಂದ ಅನಾಹುತ ನಡೆದಿದೆ. ಮೃತರ ಹೆಸರುಗಳಿನ್ನೂ ಸರಿಯಾಗಿ ಗೊತ್ತಾಗಿಲ್ಲ ಎಂದೂ ಪಿಡಿಎಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಯಡಿಯೂರಪ್ಪ ಕೆಳಗಿಳಿಸುವಲ್ಲಿ ಯಶಸ್ಸು ಸಾಧಿಸಿದ ವಿರೋಧಿ ಬಣ; ಸ್ವಾತಂತ್ರ್ಯ ದಿನಕ್ಕೆ ಕರ್ನಾಟಕಕ್ಕೆ ಹೊಸ ಸಿಎಂ ಸಂಭ್ರಮ

Published On - 3:58 pm, Mon, 26 July 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ