AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಪ್ರಾಯದ ಮಗ ಬಾಲ ಸೈನಿಕನಾಗಿ ಐಸಿಸ್ ಸೇರದಂತೆ ತಡೆಯದ ತಾಯಿಗೆ ಸ್ವೀಡನ್ ಕೋರ್ಟೊಂದು ಜೈಲುಶಿಕ್ಷೆ ವಿಧಿಸಿದೆ!

Sweden: ಅವನನ್ನು ತಡೆಯುವ ಕ್ರಮಗಳ ಬಗ್ಗೆ ಆಕೆ ಯೋಚಿಸಲಿಲ್ಲ ಅಥವಾ ತಡೆಯುವ ಪ್ರಯತ್ನವನ್ನೇ ಮಾಡಲಿಲ್ಲ, ಆಕೆಯ ಸಮ್ಮತಿಯಿಂದಾಗೇ ಆ ಹುಡುಗ ಒಬ್ಬ ಬಾಲ ಸೈನಿಕನಾಗಿ ಐಸಿಸ್ ಸೇರಿದ ಅಂತ ಕೋರ್ಟ್ ಹೇಳಿದೆ.

ಚಿಕ್ಕಪ್ರಾಯದ ಮಗ ಬಾಲ ಸೈನಿಕನಾಗಿ ಐಸಿಸ್ ಸೇರದಂತೆ ತಡೆಯದ ತಾಯಿಗೆ ಸ್ವೀಡನ್ ಕೋರ್ಟೊಂದು ಜೈಲುಶಿಕ್ಷೆ ವಿಧಿಸಿದೆ!
ಸ್ಟಾಕ್​ಹೋಮ್ ಜಿಲ್ಲಾ ನ್ಯಾಯಾಲಯ
TV9 Web
| Updated By: shivaprasad.hs|

Updated on: Mar 05, 2022 | 7:53 AM

Share

ಸ್ಟಾಕ್ ಹೋಮ್, ಸ್ವೀಡನ್: ಸ್ವೀಡನ್ (Sweden) ಅಗ್ರಮಾನ್ಯ ಟೆನಿಸ್ ಆಟಗಾರರನ್ನು (Tennis players) ಸೃಷ್ಟಿಸುವುದಕ್ಕೆ ಹೆಸರುವಾಸಿಯಾಗಿದೆ. 70 ಮತ್ತು 80 ರ ದಶಕದಲ್ಲಿ ಟೆನಿಸ್ ವಿಶ್ವದ ಅನಭಿಷಿಕ್ತ ದೊರೆಯಾಗಿ ಮೆರೆದ ಬ್ಯೋರ್ನ್ ಬೋರ್ಗ್, ಸ್ಟೀಫನ್ ಎಡ್ಬರ್ಗ್, ಮ್ಯಾಟ್ಸ್ ವಿಲಾಂಡರ್, ಜೋನಾಸ್ ಜೋರ್ಕ್ ಮನ್, ರಾಬಿನ್ ಸೋಲ್ಡರ್ಲಿಂಗ್, ಥಾಮಸ್ ಜಾನ್ಸನ್, ಥಾಮಸ್ ಎನ್ಕ್ವಿಸ್ಟ್ …ಈ ಪಟ್ಟಿ ಹಾಗೇಯೇ ಮುಂದುವರಿಯುತ್ತದೆ. ಆದರೆ ಅಲ್ಲಿನ ವಾತಾವರಣ ಕಳೆದೊದಂದು ದಶಕದಲ್ಲಿ ಬಹಳ ಬದಲಾಗಿದ್ದು ಐಸಿಸ್ (ISIS) ಕರಾಳ ಛಾಯೆ ಈ ಸುಂದರ ದೇಶದ ಮೇಲೆ ಬಿದ್ದಿದೆ. ಶುಕ್ರವಾರ ಸ್ವಿಡನ್ನಿನ ಕೋರ್ಟೊಂದು ಮಗನಿಗೆ ಐಸಿಸ್ ಸಂಘಟನೆ ಸೇರದಂತೆ ತಡೆಯಲು ವಿಫಲಗೊಂಡ ಒಬ್ಬ ಮಹಿಳೆಗೆ ಕಾರಣ 6-ವರ್ಷ ಸೆರೆವಾಸದ ಶಿಕ್ಷೆ ಪ್ರಕಟಿಸದೆ ಹೋಗಿದ್ದರೆ, ಆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಾಯಶಃ ನಮ್ಮ ಗಮನಕ್ಕೆ ಬರುತ್ತಿರಲಿಲ್ಲ.

49-ವರ್ಷ ವಯಸ್ಸಿನ ಮಹಿಳೆಯು ತನ್ನ ಮಗ ಚಿಕ್ಕ ಪ್ರಾಯದವನಾಗಿದ್ದಾಗ ಸಿರಿಯಾ ದೇಶದಲ್ಲಿ ಐಸಿಸ್ ಗುಂಪನ್ನು ಒಬ್ಬ ಬಾಲ ಸೈನಿಕನಾಗಿ ಸೇರಲು ಅವಕಾಶ ನೀಡಿದ್ದಕ್ಕೆ ಶಿಕ್ಷೆಗೊಳಗಾಗಿದ್ದಾಳೆ.

ಯುದ್ಧ ಸಂಬಂಧಿತ ಅಪರಾಧಗಳನ್ನು ಹೆಚ್ಚಿಸಿದ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿದ ಮತ್ತು ಆಗ 12-15 ಪ್ರಾಯದವನಾಗಿದ್ದ ತನ್ನ ಮಗನನ್ನು ಯುದ್ಧಗ್ರಸ್ಥ ಸಿರಿಯಾ ದೇಶದಲ್ಲಿ ಐಸಿಸ್ ಗುಂಪಿಗೆ ಒಬ್ಬ ಬಾಲ ಸೈನಿಕನಾಗಿ ಸೇರದಂತೆ ತಡೆಯಲು ವಿಫಲಗೊಂಡ ಹಿನ್ನೆಲೆಯಲ್ಲಿ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ, ಎಂದು ಸ್ಟಾಕ್ ಹೋಮ್ ನ ಜಿಲ್ಲಾ ನ್ಯಾಯಾಲಯ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಮಹಿಳೆ ಮತ್ತು ಆಕೆಯ ಪತಿ ಆರಾಧ್ಯ-ಸ್ವರೂಪ ಇಸ್ಲಾಮಿಕ್ ಪರಿಸರದ ಭಾಗವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 2013 ರಲ್ಲಿ ಆಕೆ ತನ್ನ ಮಗನನ್ನು ಅದಾಗಲೇ ಐಸಿಸ್ ಗುಂಪಿನ ಸೈನಿಕರಾಗಿ ನಿಯುಕ್ತಿಗೊಂಡಿದ್ದ ತನ್ನ ಪತಿ ತಂದೆ ಮತ್ತು ಹಿರಿಯ ಮಗನನೊಂದಿಗೆ ಕಿರಿಮಗನನ್ನೂ ಸೇರಿಸಲು ಅವನನ್ನು ಸಿರಿಯಾಗೆ ಕರೆತಂದಳು.

ತನ್ನ ಮಗನನ್ನು ಐಸಿಸ್ ಒಬ್ಬ ಬಾಲ ಸೈನಿಕನಾಗಿ ಬಳಸುತ್ತದೆ ಎಂಬ ಅರಿವು ಮಹಿಳೆಗೆ ಇತ್ತು ಎಂದು ಕೋರ್ಟ್ ಹೇಳಿದೆ.

ಅವನನ್ನು ತಡೆಯುವ ಕ್ರಮಗಳ ಬಗ್ಗೆ ಆಕೆ ಯೋಚಿಸಲಿಲ್ಲ ಅಥವಾ ತಡೆಯುವ ಪ್ರಯತ್ನವನ್ನೇ ಮಾಡಲಿಲ್ಲ, ಆಕೆಯ ಸಮ್ಮತಿಯಿಂದಾಗೇ ಆ ಹುಡುಗ ಒಬ್ಬ ಬಾಲ ಸೈನಿಕನಾಗಿ ಐಸಿಸ್ ಸೇರಿದ ಅಂತ ಕೋರ್ಟ್ ಹೇಳಿದೆ.

ಜನವರಿಯಲ್ಲಿ ಆಕೆಯ ಮೇಲೆ ಆರೋಪ ಹೊರಿಸಿದಾಗ, ಪ್ರಾಸಿಕ್ಯೂಷನ್ ಪ್ರಾಧಿಕಾರವು ‘ಬಾಲ ಸೈನಿಕನನ್ನು ಬಳಸಿದ ಯುದ್ಧ ಅಪರಾಧಕ್ಕಾಗಿ ಸ್ವೀಡನ್‌ನಲ್ಲಿ ಮೊದಲ ಬಾರಿಗೆ ಅಂಥ ಆರೋಪಗಳನ್ನು ಮಾಡಲಾಗುತ್ತಿದೆ,’ ಎಂದು ಹೇಳಿತ್ತು. ಆಗಸ್ಟ್ 2013 ರಿಂದ ಮತ್ತು 2016 ರ ಮೇ ವರೆಗೆ ಹುಡುಗ ‘ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿದಂತೆ ಸಶಸ್ತ್ರ ಗುಂಪುಗಳು ನಡೆಸಿದ ಹಿಂಸಾಚಾರದಲ್ಲಿ’ ಭಾಗಿಯಾಗಿದ್ದಾನೆ ಎಂದು ಪ್ರಾಧಿಕಾರ ಹೇಳಿದೆ.

ಪ್ರಾಸಿಕ್ಯೂಷನ್ ಪ್ರಾಧಿಕಾರದ ಹೇಳಿಕೆಯ ಪ್ರಕಾರ ಆಕೆಯ ಮಗ 2017 ಮರಣಹೊಂದಿದ, ಅವನ ಸಾವಿನ ಕಾರಣ ಪತ್ತೆಯಾಗಿಲ್ಲ.

ಸ್ಯಾಪೊ ಇಂಟಲ್ಲಿಜೆನ್ಸ್ ಸರ್ವಿಸ್ ಮೂಲಗಳ ಪ್ರಕಾರ 2013 ಮತ್ತು 2014 ರಲ್ಲಿ ಸ್ವೀಡನ್ನಿನ ಸುಮಾರು 300 ಜನ-ಇವರಲ್ಲಿ ಕಾಲುಭಾಗಕ್ಕಿಂತ ಹೆಚ್ಚು ಮಹಿಳೆಯರು ಸಿರಿಯಾ ಮತ್ತು ಇರಾಕ್ ನಲ್ಲಿ ನೆಲೆಗೊಂಡಿರುವ ಐಸಿಸ್ ಗುಂಪುಗಳನ್ನು ಸೇರಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ಸದಸ್ಯತ್ವ ಹೊಂದಿರುವರನ್ನು ವಿಚಾರಣೆಗೊಳಪಡಿಸಲು ಅಥವಾ ಅವರಿಗೆ ಶಿಕ್ಷೆ ವಿಧಿಸಲು ಯಾವುದೇ ಶಾಸನ ಆಗ ಸ್ವೀಡನ್ ನಲ್ಲಿ ಅಸ್ತಿತ್ವದಲ್ಲಿರಲಿಲ್ಲ. ಹಾಗಾಗಿ, ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದವರ ವಿರುದ್ಧ ವಿಚಾರಣೆ ನಡೆಸುವುದು ಸಾಧ್ಯವಾಗಲು ಬೇರೆ ಅಪರಾಧಗಳನ್ನು ಹುಡುಕಿ ಅವುಗಳ ಆಧಾರದಲ್ಲಿ ಶಿಕ್ಷೆಗೊಳಪಡಿಸುವುದನ್ನು ಪ್ರಾಸಿಕ್ಯೂಟರ್​ಗಳು ಆರಂಭಿಸಿದರು.

ಇದನ್ನೂ ಓದಿ:  Viral Video: ಟೀ, ಊಟ ನೀಡಿ, ಅಮ್ಮನಿಗೆ ವಿಡಿಯೋ ಕಾಲ್ ಮಾಡಿಕೊಟ್ಟ ಉಕ್ರೇನಿಯನ್ನರು; ಕಣ್ಣೀರು ಹಾಕಿದ ರಷ್ಯನ್ ಸೈನಿಕರು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ