AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್ ಪ್ರಧಾನಿ ಹುದ್ದೆಗೇರಿ 45 ದಿನಗಳಲ್ಲಿ ರಾಜೀನಾಮೆ ನೀಡಿದ ಲಿಜ್ ಟ್ರಸ್; ಅಧಿಕಾರವಧಿಯಲ್ಲಿ ಏನೇನಾಯ್ತು?

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೆಚ್ಚುತ್ತಿರುವ ಬೆಲೆಗಳಿಗೆ ಪ್ರತಿಕ್ರಿಯೆಯಾಗಿ ಲಿಜ್ ಟ್ರಸ್ ಮೊದಲ ವಾರದಲ್ಲಿಯೇ ಮನೆಯ ವಿದ್ಯುತ್   ಬಿಲ್‌ಗಳನ್ನು...

ಬ್ರಿಟನ್ ಪ್ರಧಾನಿ ಹುದ್ದೆಗೇರಿ 45 ದಿನಗಳಲ್ಲಿ ರಾಜೀನಾಮೆ ನೀಡಿದ ಲಿಜ್ ಟ್ರಸ್; ಅಧಿಕಾರವಧಿಯಲ್ಲಿ ಏನೇನಾಯ್ತು?
ಲಿಜ್ ಟ್ರಸ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 20, 2022 | 8:26 PM

Share

ಲಂಡನ್: 45 ದಿನಗಳ ಅಧಿಕಾರ ನಡೆಸಿ ಬ್ರಿಟಿಷ್ ಪ್ರಧಾನಿ (British Prime Minister)  ಲಿಜ್ ಟ್ರಸ್ (Liz Truss) ರಾಜೀನಾಮೆ ನೀಡಿದ್ದಾರೆ. ರಾಣಿ ಎಲಿಜಬೆತ್ II  ಮರಣಕ್ಕೆ 10 ದಿನಗಳ ಶೋಕಾಚರಣೆ ಮಾಡಿ  ನಂತರ ರಾಜಕೀಯ ಕಾರ್ಯಕ್ರಮವನ್ನು ಟ್ರಸ್ ಆರಂಭಿಸಿದ್ದರು. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೆಚ್ಚುತ್ತಿರುವ ಬೆಲೆಗಳಿಗೆ ಪ್ರತಿಕ್ರಿಯೆಯಾಗಿ ಲಿಜ್ ಟ್ರಸ್ ಮೊದಲ ವಾರದಲ್ಲಿಯೇ ಮನೆಯ ವಿದ್ಯುತ್   ಬಿಲ್‌ಗಳನ್ನು ಮಿತಿಗೊಳಿಸುವ ದುಬಾರಿ ಯೋಜನೆಯನ್ನು ಜಾರಿಗೆ ತಂದರು. ಹೊಸ ಯುಕೆ ಕ್ಯಾಬಿನೆಟ್‌ನಲ್ಲಿ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಸೆಪ್ಟೆಂಬರ್‌ನಲ್ಲಿ “ಮಿನಿ-ಬಜೆಟ್” ಅನ್ನು ಘೋಷಿಸಿದರು, ಮುಂದಿನ ಆರು ತಿಂಗಳಲ್ಲಿ $67 ಶತಕೋಟಿ ಮೌಲ್ಯದ ಇಂಧನ ಯೋಜನೆಯ ಬೆಲೆಯನ್ನು ವಿವರಿಸುವ ಮಿನಿ ಬಜೆಟ್ ಇದಾಗಿದ್ದು, ನಿಧಿ ಸಂಗ್ರಹಿಸುವ ಕ್ರಮ ಅವರ ಬಳಿ ಇರಲಿಲ್ಲ. ಇದರ ಬದಲಿಗೆ ಅವರು ವ್ಯಾಪಕವಾದ ತೆರಿಗೆ ಕಡಿತಗಳಿಗೆ ಪಾವತಿಸಲು ಬೃಹತ್ ಹೊಸ ಸಾಲವನ್ನು ಘೋಷಿಸಿದರು. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಲಿಜ್ ಟ್ರಸ್, ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾ ಮಾಡಿದರು.

ಪ್ರಧಾನಿ ಹುದ್ದೆಯಿಂದ ರಾಜೀನಾಮೆ ವರೆಗೆ

ಸೆಪ್ಟೆಂಬರ್ 5

ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ರಿಷಿ ಸುನಕ್ ವಿರುದ್ಧ  ಕನ್ಸರ್ವೇಟಿವ್ ಪಕ್ಷದವರಾದ ಟ್ರಸ್ ಗೆಲವು.  ರಿಷಿ ಅವರಿಗೆ 60,399 ಮತಗಳು ಲಭಿಸಿದ್ದು ಟ್ರಸ್ ಅವರೆ 81,326 ಮತಗಳು ಲಭಿಸಿತ್ತು. ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷದ ಹೊಸ ನಾಯಕಿಯಾದ ಲಿಜ್ ಟ್ರಸ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದರು . ಮರುದಿನ ಮಹಾರಾಣಿ ಲಿಜ್ ಟ್ರಸ್ ಅವರನ್ನು ಪ್ರಧಾನ ಮಂತ್ರಿ ಎಂದು ದೃಢೀಕರಿಸಿದರು. ಸಮಾನ ಮನಸ್ಕ ಕ್ವಾಸಿ ಕ್ವಾರ್ಟೆಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಲಾಯಿತು

ಸೆಪ್ಟೆಂಬರ್ 8

ಉಕ್ರೇನ್‌ನ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ, ಮನೆಯ ವಿದ್ಯುತ್ ಬಿಲ್‌ಗಳನ್ನು ಮಿತಿಗೊಳಿಸಲು ಟ್ರಸ್ ದುಬಾರಿ ಯೋಜನೆಯನ್ನು ಅನಾವರಣಗೊಳಿಸಿದರು. ಆದರೆ ಮಹಾರಾಣಿಯ ಸಾವಿನಿಂದಾಗಿ ಎಲ್ಲಾ ಸರ್ಕಾರಿ ವ್ಯವಹಾರಗಳನ್ನು 10 ದಿನಗಳವರೆಗೆ ಸ್ಥಗಿತಗೊಳಿಸಬೇಕಾಗಿ ಬಂತು.

ಸೆಪ್ಟೆಂಬರ್ 23

ಕ್ವಾರ್ಟೆಂಗ್ “ಮಿನಿ-ಬಜೆಟ್” ಅನ್ನು ಘೋಷಿಸಿದರು. ಮುಂದಿನ ಆರು ತಿಂಗಳಲ್ಲಿ $67 ಶತಕೋಟಿ ಮೌಲ್ಯದ ಇಂಧನ ಯೋಜನೆಯ ಬೆಲೆಯನ್ನು ವಿವರಿಸುವ ಮಿನಿ ಬಜೆಟ್ ಇದಾಗಿದೆ.ಅಂದಹಾಗೆ ನಿಧಿ ಸಂಗ್ರಹಿಸುವ ಕ್ರಮ ಅವರ ಬಳಿ ಇರಲಿಲ್ಲ. ಇದರ ಬದಲಿಗೆ ಅವರು ವ್ಯಾಪಕವಾದ ತೆರಿಗೆ ಕಡಿತಗಳಿಗೆ ಪಾವತಿಸಲು ಬೃಹತ್ ಹೊಸ ಸಾಲ ಘೋಷಿಸಿದರು. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದಲ್ಲದೆ ಡಾಲರ್ ಮುಂದೆ ಪೌಂಡ್ ಕುಸಿಯಿತು ಎರಡು ದಿನಗಳ ನಂತರ, ಭಾನುವಾರದಂದು, ಕ್ವಾರ್ಟೆಂಗ್ ತೆರಿಗೆ ಕಡಿತ “ಇನ್ನಷ್ಟು ಬರಲಿದೆ” ಎಂದು ಹೇಳಿದ್ದು. ಮರುದಿನ, ಮಾರುಕಟ್ಟೆಗಳು ಪುನಃ ತೆರೆದಾಗ, ಪೌಂಡ್ ಮೌಲ್ಯ ಮತ್ತಷ್ಟು ಕುಸಿಯಿತು.

ಸೆಪ್ಟೆಂಬರ್ 28

ಬಾಂಡ್ ಮಾರುಕಟ್ಟೆಯ ಪ್ರಕ್ಷುಬ್ಧತೆಯು ಬ್ರಿಟಿಷ್ ಪಿಂಚಣಿ ನಿಧಿಗಳನ್ನು ಅಪಾಯದಲ್ಲಿ ಇರಿಸುವುದರೊಂದಿಗೆ, ಬ್ಯಾಂಕ್ ಆಫ್ ಇಂಗ್ಲೆಂಡ್ ದೀರ್ಘಾವಧಿಯ UK ಬಾಂಡ್‌ಗಳನ್ನು ಖರೀದಿಸಲು ಎರಡು ವಾರಗಳ ಕಾರ್ಯಕ್ರಮವನ್ನು ಘೋಷಿಸಿತು.

ಅಕ್ಟೋಬರ್ 3

ಕ್ವಾರ್ಟೆಂಗ್ ಮತ್ತು ಟ್ರಸ್ ಒತ್ತಡಕ್ಕೆ ಸಿಲುಕಿ ತಡರಾತ್ರಿಯ ಮಾತುಕತೆಗಳ ನಂತರ ಆದಾಯ ತೆರಿಗೆಯ ಉನ್ನತ ದರದಲ್ಲಿ ಯೋಜಿತ ಕಡಿತವನ್ನು ರದ್ದುಗೊಳಿಸಿದರು.

ಅಕ್ಟೋಬರ್ 10

ಕ್ವಾರ್ಟೆಂಗ್ ಅವರು ಸ್ವತಂತ್ರ ಬಜೆಟ್ ಮುನ್ಸೂಚನೆಗಳೊಂದಿಗೆ ಮಧ್ಯಮ-ಅವಧಿಯ ಹಣಕಾಸಿನ ಯೋಜನೆಯನ್ನು ಅಕ್ಟೋಬರ್ 31 ರಂದು ಪ್ರಕಟಿಸುವುದಾಗಿ ಘೋಷಿಸಿದರು

ಅಕ್ಟೋಬರ್ 14

ಟ್ರಸ್‌ನ ಮೇಲೆ ಒತ್ತಡ ಹೆಚ್ಚಿತ್ತು. ಯುಟರ್ನ್ ತೆಗೆದುಕೊಂಡ ಟ್ರಸ್ ಕೇವಲ 38 ದಿನಗಳ ನಂತರ ಕ್ವಾರ್ಟೆಂಗ್‌ನನ್ನು ವಜಾ ಮಾಡಿದರು. ಅವರ ಸ್ಥಾನದಲ್ಲಿ, ಅವರು ಮಾಜಿ ವಿದೇಶಾಂಗ ಸಚಿವ ಜೆರೆಮಿ ಹಂಟ್ ಅವರನ್ನು ನೇಮಕ ಮಾಡಲಾಯಿತು

ಅಕ್ಟೋಬರ್ 19

ವಲಸೆಯ ಕುರಿತು ಟ್ರಸ್ ಮತ್ತು ಹಂಟ್‌ನೊಂದಿಗಿನ ವಾಗ್ವಾದ ನಂತರ ಸುಯೆಲ್ಲಾ ಬ್ರಾವರ್‌ಮನ್ (Suella Braverman) ಗೃಹ ಕಾರ್ಯದರ್ಶಿ ಹುದ್ದೆಯನ್ನು ತೊರೆದರು.

ಅಕ್ಟೋಬರ್ 20

ಅನೇಕ ಸಂಸದರು ಬಂಡಾಯವೆದ್ದಿದ್ದು ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜೀನಾಮೆ ನೀಡಿದರು.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ