AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅಫ್ಘಾನ್​ ಹೋರಾಟಗಾರರು; ಪರ್ಯಾಯ ಸರ್ಕಾರ ಘೋಷಣೆಗೆ ಸಿದ್ಧತೆ

ಈ ತಾಲಿಬಾನಿಗಳ ಸರ್ಕಾರಕ್ಕೆ ವಿಶ್ವಸಂಸ್ಥೆ, ಸಾರ್ಕ್ ಸೇರಿ ಯಾವುದೇ ಅಂತಾರಾಷ್ಟ್ರೀಯ ಸಂಘಟನೆಗಳು ಸಹಕಾರ ನೀಡಬಾರದು ಎಂದು ಸ್ಥಳೀಯ ಪ್ರತಿರೋಧ ಪಡೆ ಆಗ್ರಹಿಸಿದೆ.

ತಾಲಿಬಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅಫ್ಘಾನ್​ ಹೋರಾಟಗಾರರು; ಪರ್ಯಾಯ ಸರ್ಕಾರ ಘೋಷಣೆಗೆ ಸಿದ್ಧತೆ
ಸ್ಥಳೀಯ ಪ್ರತಿರೋಧಕ ಪಡೆಯ ಸಿಬ್ಬಂದಿ
TV9 Web
| Edited By: |

Updated on:Sep 08, 2021 | 4:27 PM

Share

ನಾವೀಗ ಇಡೀ ಅಫ್ಘಾನಿಸ್ತಾನ (Afghanistan)ವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿರುವ ತಾಲಿಬಾನಿ (Taliban)ಗಳು ನೂತನ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. ಪ್ರಧಾನಿ ಅಭ್ಯರ್ಥಿಯನ್ನೂ ಘೋಷಿಸಿದ್ದಾರೆ. ಆದರೆ ಇತ್ತ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧಕ ಪಡೆಯಾದ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್​ (NRF) ಮತ್ತೆ ತಿರುಗಿಬಿದ್ದಿದೆ. ತಾಲಿಬಾನಿಗಳ ಸರ್ಕಾರ ಕಾನೂನು ಬಾಹಿರವಾಗಿದ್ದಾಗಿದೆ. ಅದನ್ನು ನಾವು ಒಪ್ಪೋದಿಲ್ಲ. ತಾಲಿಬಾನ್​ ಸರ್ಕಾರಕ್ಕೆ ಸಮಾನಾಂತರವಾಗಿ ನಾವು ಮತ್ತೊಂದು ಸರ್ಕಾರವನ್ನು ರಚಿಸುತ್ತೇವೆ ಎಂದು ಎನ್​ಆರ್​ಎಫ್​ನ ಮುಖಂಡರಲ್ಲಿ ಒಬ್ಬರಾದ ಅಹ್ಮದ್ ಮಸೂದ್ (Ahmad Masoud)​ ತಿಳಿಸಿದ್ದಾರೆ. ಕೆಲವು ರಾಜಕಾರಣಿಗಳ ಜತೆ ಮಾತುಕತೆ, ಸಮಾಲೋಚನೆ ಬಳಿಕ ನಾವು ಹೊಸ ಸರ್ಕಾರ ಘೋಷಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ನಾವು ಪರಿವರ್ತನೆ, ಪ್ರಜಾಪ್ರಭುತ್ವ ಮತ್ತು ಕಾನೂನು ಬದ್ಧ ಸರ್ಕಾರ ರಚನೆ ಮಾಡುತ್ತೇವೆ. ನಾವು ಜನರ ಓಟುಗಳನ್ನು ಪಡೆದು, ಅಂತಾರಾಷ್ಟ್ರೀಯ ಸಮುದಾಯ ಒಪ್ಪಿ, ಸ್ವೀಕರಿಸುವಂಥ ಪರ್ಯಾಯ ಸರ್ಕಾರ ರಚಿಸುತ್ತೇವೆ’ ಎಂದು ರೆಸಿಸ್ಟೆನ್ಸ್​ ಪಡೆ ಹೇಳಿದ್ದಾಗಿ ವರದಿಯಾಗಿದೆ.  ಹಾಗೇ, ತಾಲಿಬಾನಿಗಳ ಕಾನೂನು ಬಾಹಿರ ಸರ್ಕಾರ ಅಫ್ಘಾನ್​ ಜನರ ವಿರುದ್ಧ ದ್ವೇಷ ಸಾದಿಸುವ ಗುಂಪಿನ ಸರ್ಕಾರ. ಇದು ಅಫ್ಘಾನಿಸ್ತಾನವಷ್ಟೇ ಅಲ್ಲ, ಇಡೀ ಜಗತ್ತಿನ ಸ್ಥಿರತೆ ಮತ್ತು ಭದ್ರತೆಗೆ ಮಾರಕವಾಗಲಿದೆ’ ಎಂದೂ ಎನ್​ಆರ್​ಎಫ್​ ಪಡೆಗಳು ಪ್ರತಿಪಾದಿಸಿವೆ. ಇನ್ನು ಈ ತಾಲಿಬಾನಿಗಳ ಸರ್ಕಾರಕ್ಕೆ ವಿಶ್ವಸಂಸ್ಥೆ, ಸಾರ್ಕ್ ಸೇರಿ ಯಾವುದೇ ಅಂತಾರಾಷ್ಟ್ರೀಯ ಸಂಘಟನೆಗಳು ಸಹಕಾರ ನೀಡಬಾರದು ಎಂದೂ ಕರೆ ಕೊಟ್ಟಿದ್ದಾರೆ.

ಈಗಾಗಲೇ ಸರ್ಕಾರ ರಚನೆಯ ಬಗ್ಗೆ ಘೋಷಿಸಿರುವ ತಾಲಿಬಾನಿಗಳು ಮೊಹಮ್ಮದ್ ಹಸನ್ ಅಕುಂದ್ ಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ.  ಮುಲ್ಲಾ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಮಂತ್ರಿಯಾಗಲಿದ್ದಾರೆ. ಅಬಾಸ್ ಸ್ಟಾನಿಕ್​ಜೈ ವಿದೇಶಾಂಗ ಖಾತೆಯ ಉಪ ಸಚಿವರಾಗಲಿದ್ದಾರೆ. ಅಮೀರ್ ಖಾನ್ ಮುತಾಖಿ ಅಫ್ಘಾನ್​ನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:  Shubhman Gill: ಟೀಂ ಇಂಡಿಯಾದ ಭವಿಷ್ಯದ ನಾಯಕ, ವಿಶ್ವ ವಿಜೇತ ಆಟಗಾರ ಶುಭ್​ಮನ್ ಗಿಲ್​ಗೆ ಇಂದು ಜನ್ಮದಿನ

ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್

(Resistance group will declare a parallel government against Taliban)

Published On - 3:54 pm, Wed, 8 September 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ