ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

ಕಾಬೂಲ್ ಗೆದ್ದು ಬೀಗುತ್ತಿರುವ ತಾಲಿಬಾನ್ ಉಗ್ರರು ಇದೀಗ ಪಂಜ್​ಶಿರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಭಾನುವಾರ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರನ್ನು ಅತ್ತ ಕಳಿಸಿದೆ.

ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು
ತಾಲಿಬಾನ್ ಹೋರಾಟಗಾರರು
Follow us
TV9 Web
| Updated By: Digi Tech Desk

Updated on:Aug 23, 2021 | 6:22 PM

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಉತ್ತರಕ್ಕಿರುವ ಪಂಜ್​ಶಿರ್​ ಕಣಿವೆ ಇನ್ನೂ ತಾಲಿಬಾನ್ ಉಗ್ರರ ತೆಕ್ಕೆಗೆ ಸಿಕ್ಕಿಲ್ಲ. ಸರ್ಕಾರಿ ಪಡೆಗಳು ಇತರ ಬುಡಕಟ್ಟುಗಳ ಹೋರಾಟಗಾರರು ಈ ಪ್ರದೇಶದಲ್ಲಿ ತಾಲಿಬಾನ್​ಗೆ ಪ್ರಬಲ ಪ್ರತಿರೋಧ ಒಡ್ಡಿದ್ದಾರೆ. ಕಾಬೂಲ್ ಗೆದ್ದು ಬೀಗುತ್ತಿರುವ ತಾಲಿಬಾನ್ ಉಗ್ರರು ಇದೀಗ ಪಂಜ್​ಶಿರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಭಾನುವಾರ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರನ್ನು ಅತ್ತ ಕಳಿಸಿದೆ.

‘ಇಸ್ಲಾಮಿಕ್ ಎಮಿರೇಟ್​ನ ನೂರಾರು ಮುಜಾಹಿದ್ದೀನ್​ಗಳು ಪಂಜ್​ಶಿರ್​ ಪ್ರಾಂತ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಅತ್ತ ಧಾವಿಸುತ್ತಿದ್ದಾರೆ. ಸ್ಥಳೀಯ ಸರ್ಕಾರಿ ಅಧಿಕಾರಿಗಳು ಶಾಂತಿಯುತವಾಗಿ ಪ್ರಾಂತ್ಯವನ್ನು ನಮಗೆ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಬೇಕಾಯಿತು’ ಎಂದು ಉಗ್ರರ ಟ್ವಿಟರ್ ಅಕೌಂಟ್​ನಲ್ಲಿ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ.

ತಾಲಿಬಾನಿಗಳು ಮಿಂಚಿನ ವೇಗದಲ್ಲಿ ಕಾಬೂಲ್ ವಶಪಡಿಸಿಕೊಂಡ ನಂತರ ಸಾವಿರಾರು ಜನರು ಪಂಜ್​ಶಿರ್​ ಕಣಿಗೆ ಧಾವಿಸಿ ಆಶ್ರಯ ಪಡೆದುಕೊಂಡಿದ್ದರು. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿರುವ ಮುಜಾಹಿದ್ದೀನ್​ ಕಮಾಂಡರ್ ಅಹ್ಮದ್​ ಶಾ ಮಸೂದ್​ರ ಅಹ್ಮದ್ 9000 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್​ಖೈದಾ ಉಗ್ರರು ಅಹ್ಮದ್ ಶಾ ಮಸೂದ್​ರನ್ನು ಕೊಂದುಹಾಕಿದ್ದರು.

ಎಎಫ್​ಪಿ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಹತ್ತಾರು ಮಂದಿ ಸೇನಾ ಕವಾಯತು ಮಾಡುತ್ತಿದ್ದುದು ಹಾಗೂ ಮಿಲಿಟರಿ ಸಶಸ್ತ್ರ ವಾಹನಗಳು ಸಂಚರಿಸುತ್ತಿದ್ದುದು ಕಂಡು ಬಂತು. ತಾಲಿಬಾನ್ ಪ್ರಣೀತ ಆಡಳಿತ ವ್ಯವಸ್ಥೆಯನ್ನು ಇವರು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಸಶಸ್ತ್ರ ಸಂಘರ್ಷಕ್ಕೂ ಸಜ್ಜಾಗಿದ್ದಾರೆ.

ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಿಂದ ಹಿಮ್ಮೆಟ್ಟಿದ ಅಮೆರಿಕದಿಂದ ತರಬೇತಿ ಪಡೆದ ಸರ್ಕಾರಿ ಪಡೆಗಳೂ ಪಂಜ್​ಶೀರ್ ಪ್ರಾಂತ್ಯದಲ್ಲಿ ಒಗ್ಗೂಡಿವೆ. ಈ ಪ್ರಾಂತ್ಯದಲ್ಲಿ ತಾಲಿಬಾನ್​ಗೆ ಜಯ ಸುಲಭದ ತುತ್ತಲ್ಲ. ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದು ಪಂಜ್​ಶಿರ್​ನ ಸೇನಾ ಕಮಾಂಡರ್ ಒಬ್ಬರ ಹೇಳಿಕೆಯನ್ನು ಅಲ್ ಅರೇಬಿಯಾ ವರದಿ ಮಾಡಿದೆ.

ಪಂಜ್​ಶಿರ್ ಕಣಿವೆ ಬಿಟ್ಟುಕೊಡಲ್ಲ: ಅಹ್ಮದ್ ಮಸೂದ್ ಅಫ್ಘಾನಿಸ್ತಾನದ ಪಂಜ್​ಶಿರ್ ಕಣಿವೆಯಲ್ಲಿ ಹಿಡಿತ ಸಾಧಿಸಿರುವ ವಿರೋಧಿ ಬಣದ ಕಮಾಂಡರ್ ಅಹ್ಮದ್ ಮಸೂದ್, ಕಣಿವೆಯನ್ನು ತಾಲಿಬಾನಿಗಳಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕಣಿವೆ ವಶಕ್ಕೆ ಯತ್ನಿಸಿದ್ರೆ ಪ್ರತಿರೋಧ ಎದುರಿಸಬೇಕಾಗುತ್ತದೆ. ಹಿಂದೆ ನಾವು ಸೋವಿಯತ್ ಒಕ್ಕೂಟವನ್ನು ಎದುರಿಸಿದ್ದೆವು. ಈಗ ತಾಲಿಬಾನಿಗಳನ್ನೂ ಎದುರಿಸುತ್ತೇವೆ. ನಮ್ಮ ನಿಯಂತ್ರಣದಲ್ಲಿನ ಪ್ರದೇಶ ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

(Afghanistan Taliban Militants move towards holdout Panjshir Valley)

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬಂದೀಖಾನೆಯ ಬಾಗಿಲು ತೆಗೆಯುತ್ತಿರುವ ತಾಲಿಬಾನಿಗಳು; ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದವರೂ ರಿಲೀಸ್

Published On - 11:42 pm, Sun, 22 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ