ಅಫ್ಘಾನಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಖರ ಭೂಮಿಯನ್ನು ಹಿಂದಿರುಗಿಸಲಿದೆ ತಾಲಿಬಾನ್
ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನ(Afghanistan)ವನ್ನು ಆಳುತ್ತಿರುವ ತಾಲಿಬಾನ್ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ತಾಲಿಬಾನ್ ಅಧಿಕಾರಿಗಳು ಅಫ್ಘಾನಿಸ್ತಾನ ಮೂಲದ ಹಿಂದೂ ಹಾಗೂ ಸಿಖ್ ಅಲ್ಪಸಂಖ್ಯಾತರಿಗೆ ತಮ್ಮ ಭೂಮಿಯನ್ನು ಹಿಂದಿರುಗಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನ(Afghanistan)ವನ್ನು ಆಳುತ್ತಿರುವ ತಾಲಿಬಾನ್ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ತಾಲಿಬಾನ್ ಅಧಿಕಾರಿಗಳು ಅಫ್ಘಾನಿಸ್ತಾನ ಮೂಲದ ಹಿಂದೂ ಹಾಗೂ ಸಿಖ್ ಅಲ್ಪಸಂಖ್ಯಾತರಿಗೆ ತಮ್ಮ ಭೂಮಿಯನ್ನು ಹಿಂದಿರುಗಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಬೆಂಬಲದೊಂದಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗಿತ್ತು.
ಈ ನಿರ್ಧಾರವು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಹೆಜ್ಜೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದವರೆಗೆ ಹಿಂದೂಗಳು ಮತ್ತು ಸಿಖ್ಖರು ಸ್ಥಳಾಂತರಗೊಂಡಿದ್ದಾರೆ ಅವರನ್ನು ಅಂಚಿಗೆ ತಳ್ಳಲಾಯಿತು.
ಹಿಂದೂ ಹಾಗೂ ಸಿಖ್ ಸಮುದಾಯಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯ ನರೇಂದ್ರ ಸಿಂಗ್ ಖಾಲ್ಸಾ ಇತ್ತೀಚೆಗೆ ಕೆನಡಾದಿಂದ ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ.
ವಿದೇಶಿ ನೆಲದಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರವು ಇತ್ತೇಚೆಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ.
ಈ ಕಾಯ್ದೆಯನ್ನು ಸಂಸತ್ತು ಬಹಳ ಹಿಂದೆಯೇ ಅಂಗೀಕರಿಸಿದೆ, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆ ಅದನ್ನು ಸ್ಥಗಿತಗೊಳಿಸಲಾಗಿತ್ತು, ಆದರೆ ಲೋಕಸಭಾ ಚುನಾವಣೆಗೂ ಮುನ್ನ ಜಾರಿಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ