ಆಗಸ್ಟ್​​ನಿಂದಲೂ ಇಲ್ಲ ವೇತನ; ಹುದ್ದೆಗೆ ರಾಜೀನಾಮೆ ನೀಡಿದ ಚೀನಾದ ಅಫ್ಘಾನಿಸ್ತಾನ ರಾಯಭಾರಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಬಂದಿದ್ದನ್ನು ಚೀನಾ ಸ್ವಾಗತಿಸಿದರೂ ಕೂಡ ಸದ್ಯ ಆ ಸರ್ಕಾರ ಅಧಿಕೃತವೆಂದು ಚೀನಾ ಆಗಲೀ, ಉಳಿದ ಅಂತಾರಾಷ್ಟ್ರೀಯ ಸರ್ಕಾರಗಳಾಗಲೀ ಒಪ್ಪಿಕೊಂಡಿಲ್ಲ. ತಾಲಿಬಾನ್​ ಸರ್ಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿಲ್ಲ.

ಆಗಸ್ಟ್​​ನಿಂದಲೂ ಇಲ್ಲ ವೇತನ; ಹುದ್ದೆಗೆ ರಾಜೀನಾಮೆ ನೀಡಿದ ಚೀನಾದ ಅಫ್ಘಾನಿಸ್ತಾನ ರಾಯಭಾರಿ
ಉದ್ಯೋಗ ತೊರೆದ ಚೀನಾ ರಾಯಭಾರಿ
Follow us
TV9 Web
| Updated By: Lakshmi Hegde

Updated on: Jan 12, 2022 | 12:53 PM

ಚೀನಾದಲ್ಲಿರುವ ಅಫ್ಘಾನಿಸ್ತಾನದ (Afghanistan) ರಾಯಭಾರಿ ಜಾವಿದ್​ ಅಹ್ಮದ್ ಕ್ವಾಮ್​​ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚೀನಾದಿಂದ ವಾಪಸ್ ಬಂದಿದ್ದಾರೆ. ಕ್ವಾಮ್​ ತಮ್ಮ ಹುದ್ದೆಯನ್ನು ಜನವರಿ ಪ್ರಾರಂಭದಲ್ಲೇ ಬಿಟ್ಟಿದ್ದು, ಟ್ವೀಟ್ ಮಾಡಿದ್ದಾರೆ. ನನ್ನ ಗೌರವಾನ್ವಿತ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇಷ್ಟುದಿನ ಚಿನಾದಲ್ಲಿ ಅಫ್ಘಾನಿಸ್ತಾನ ರಾಯಭಾರಿಯಾಗಿದ್ದ ನನಗೆ ನನ್ನ ಕೆಲಸದ ಬಗ್ಗೆ ಗೌರವ ಇದೆ. ಆದರೆ ಈಗ ಹುದ್ದೆ ಬಿಡುತ್ತಿರಲು ಹಲವು ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿತ ಕಾರಣಗಳಿವೆ. ಆದರೆ ಅವುಗಳನ್ನೆಲ್ಲ ಇಲ್ಲಿ ಹೇಳುವುದಿಲ್ಲ. ನಾನು ನನ್ನ ಅಧಿಕಾರವನ್ನು ಹಸ್ತಾಂತರ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.   ಆದರೆ ಮೂಲಗಳ ಪ್ರಕಾರ ಇವರು ಇದೀಗ ಹುದ್ದೆ ಬಿಟ್ಟಿರುವುದಕ್ಕೆ ಕಾರಣ ವೇತನ ಸಿಗದೆ ಇರುವುದು. ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದಾಗಿನಿಂದಲೂ ಇವರಿಗೆ ನಯಾಪೈಸೆ ವೇತನ ಸಿಕ್ಕಿಲ್ಲ. ಕೇವಲ ಇವರಷ್ಟೇ ಅಲ್ಲ, ವಿವಿಧ ದೇಶಗಳಲ್ಲಿರುವ ಇನ್ನೂ ಹಲವು ರಾಯಭಾರಿಗಳಿಗೆ ಸಂಬಳ ಇಲ್ಲ. ಅವರಲ್ಲಿ ಒಂದಷ್ಟು ಮಂದಿ ಕೆಲಸ ತೊರೆದಿದ್ದಾರೆ ಎಂದೂ ಹೇಳಲಾಗಿದೆ.

ಚೀನಾ ದೇಶ ಅಫ್ಘಾನಿಸ್ತಾದೊಂದಿಗೆ ಸಣ್ಣ ಗಡಿಯನ್ನು ಹಂಚಿಕೊಂಡಿದೆ. ಹಾಗೇ, ತಾಲಿಬಾನ್ ಆಡಳಿತ ವಾಪಸ್​ ಬಂದಿದ್ದನ್ನು ಸ್ವಾಗತಿಸಿದ ದೇಶಗಳಲ್ಲಿ ಅದೂ ಒಂದು. ಆಗಸ್ಟ್​​ನಲ್ಲಿ ಅಫ್ಘಾನ್​​ನಲ್ಲಿ ಉಂಟಾದ ಅಸ್ಥಿರತೆ ವೇಳೆ, ಚೀನಾ ಮಾನವೀಯತೆಯ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಅಫ್ಘಾನಿಸ್ತಾನಕ್ಕೆ ಪೂರೈಕೆ ಮಾಡಿದೆ.  ಇದೀಗ ಕ್ವಾಮ್​​ ಸ್ಥಾನಕ್ಕೆ ಇನ್ನೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದ್ದರೂ, ಅಫ್ಘಾನಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.  ಈ ಮಧ್ಯೆ ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಕೂಡ, ಅಫ್ಘಾನಿಸ್ತಾನದ ರಾಯಭಾರಿ ಕ್ವಾಮ್​ ಅವರು ರಾಜೀನಾಮೆ ನೀಡಿದ್ದನ್ನು ತಿಳಿಸಿದ್ದಾರೆ. ಆದರೆ ಅವರು ಯಾಕೆ ಬಿಟ್ಟಿದ್ದಾರೆ, ನಂತರ ಎಲ್ಲಿಗೆ ಹೋದರು ಎಂಬುದನ್ನು ಅವರೂ ಹೇಳಿಲ್ಲ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಬಂದಿದ್ದನ್ನು ಚೀನಾ ಸ್ವಾಗತಿಸಿದರೂ ಕೂಡ ಸದ್ಯ ಆ ಸರ್ಕಾರ ಅಧಿಕೃತವೆಂದು ಚೀನಾ ಆಗಲೀ, ಉಳಿದ ಅಂತಾರಾಷ್ಟ್ರೀಯ ಸರ್ಕಾರಗಳಾಗಲೀ ಒಪ್ಪಿಕೊಂಡಿಲ್ಲ. ತಾಲಿಬಾನ್​ ಸರ್ಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇರಲಾದ ಕಠಿಣ ನಿರ್ಬಂಧಗಳಿಂದಾಗಿ ಅಫ್ಘಾನ್​​ಗೆ ಹಣಕಾಸಿನ ನೆರವು ಬರುತ್ತಿಲ್ಲ. ಹೀಗಾಗಿ ಈ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಈ ಮಧ್ಯೆ ಹಿಂದಿನ ಅಫ್ಘಾನ್ ಸರ್ಕಾರವಿದ್ದಾಗ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ಜೀವಭಯದಿಂದಲೇ ಪರಾರಿಯಾಗಿದ್ದಾರೆ.  ಅಫ್ಘಾನಿಸ್ತಾನದ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಕೊನೆಯಾಗಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶಕ್ಕೆ ಆರ್ಥಿಕ ನೆರವು ನೀಡುವಂತೆ ಬೀಜಿಂಗ್​ ಕರೆ ನೀಡಿದೆ.

ಇದನ್ನೂ ಓದಿ: 50 ಆರೋಗ್ಯ ಕೇಂದ್ರಗಳಲ್ಲಿ 40 ಕಡೆ ಆಂಬುಲೆನ್ಸ್ ಇಲ್ಲ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?