ತುರ್ತು ಭೂಸ್ಪರ್ಶ ಮಾಡಿದ ಅಲಾಸ್ಕಾ ಏರ್‌ಲೈನ್ಸ್ ; ವಿಮಾನ ರನ್ ವೇಗೆ ಇಳಿಯುತ್ತಿದ್ದಂತೆ ನೆಲಕ್ಕೆ ಅಪ್ಪಳಿಸಿದ ರೆಕ್ಕೆ; ವೈರಲ್ ವಿಡಿಯೊ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ  ಅಲಾಸ್ಕಾ ಏರ್‌ಲೈನ್ಸ್ ಬೋಯಿಂಗ್ 737-800 ವಿಮಾನವು ಜಾನ್ ವೇನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವುದನ್ನುತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊ ನೋಡಿದರೆ ಕೆಟ್ಟ ಹವಾಮಾನದ ನಡುವೆ ಒದ್ದೆಯಾದ ಟಾರ್ಮ್ಯಾಕ್ ಕಾಣಬಹುದು

ತುರ್ತು ಭೂಸ್ಪರ್ಶ ಮಾಡಿದ ಅಲಾಸ್ಕಾ ಏರ್‌ಲೈನ್ಸ್ ; ವಿಮಾನ ರನ್ ವೇಗೆ ಇಳಿಯುತ್ತಿದ್ದಂತೆ ನೆಲಕ್ಕೆ ಅಪ್ಪಳಿಸಿದ ರೆಕ್ಕೆ; ವೈರಲ್ ವಿಡಿಯೊ
ಅಲಸ್ಕಾ ಏರ್​​ಲೈನ್ಸ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 23, 2023 | 1:30 PM

ಕ್ಯಾಲಿಫೋರ್ನಿಯಾ ಆಗಸ್ಟ್ 23: ಅಲಾಸ್ಕಾ ಏರ್‌ಲೈನ್ಸ್ (Alaska Airlines) ವಿಮಾನ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ (Southern California) ಜಾನ್ ವೇನ್ (John Wayne Airport) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  ಉಷ್ಣವಲಯದ ಚಂಡಮಾರುತ ಹಿಲರಿ ಬೆದರಿಕೆಯೊಡ್ಡುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ. ಪ್ರಸ್ತುತ ವಿಮಾನವು ಸಿಯಾಟಲ್‌ನಿಂದ ಸಾಂಟಾ ಅನಾಕ್ಕೆ ಹಾರುವಾಗ ಈ ಘಟನೆ ಸಂಭವಿಸಿದ್ದು ವಿಮಾನಕ್ಕೆ ಹಾನಿಯಾಗಿದೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು ಈ ವಿಡಿಯೊವನ್ನು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ  ಅಲಾಸ್ಕಾ ಏರ್‌ಲೈನ್ಸ್ ಬೋಯಿಂಗ್ 737-800 ವಿಮಾನವು ಜಾನ್ ವೇನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವುದನ್ನುತೋರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊ ನೋಡಿದರೆ ಕೆಟ್ಟ ಹವಾಮಾನದ ನಡುವೆ ಒದ್ದೆಯಾದ ಟಾರ್ಮ್ಯಾಕ್ ಕಾಣಬಹುದು. ಕೆಲವು ಸೆಕೆಂಡುಗಳಲ್ಲಿ, ಟಚ್‌ಡೌನ್ ವಿಮಾನವನ್ನು ಅಸ್ಥಿರಗೊಳಿಸುತ್ತದೆ. ವಿಮಾನದ ಎಡ ರೆಕ್ಕೆಯು ಟಾರ್ಮ್ಯಾಕ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಕಿಡಿಗಳು ಮತ್ತು ಹೊಗೆ ಕಾಣಿಸಿಕೊಂಡಿದೆ. ಇದಲ್ಲದೆ, ಘಟನೆಯ ನಂತರದ ವಿಮಾನದ ಚಿತ್ರಗಳು ಎಡಭಾಗದಿಂದ ಉಂಟಾದ ಹಾನಿಯನ್ನು ತೋರಿಸುತ್ತವೆ.

ಲ್ಯಾಂಡಿಂಗ್ ಸಮಯದಲ್ಲಿ, ವಿಡಿಯೊದಲ್ಲಿ ವ್ಯಕ್ತಿಯೊಬ್ಬರು, “ನಾವು ಏಕೆ ವೇಗವಾಗಿ ಹೋಗುತ್ತಿದ್ದೇವೆ?” ಎಂದು ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ತನ್ನ ಸಹ-ಪ್ರಯಾಣಿಕರಿಗೆ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುವುದನ್ನು ಕೇಳಿಸಿಕೊಳ್ಳಬಹುದು, ವಿಮಾನವು ವೇಗವಾಗಿ ಕೆಳಗಿಳಿಯುತ್ತಿದ್ದಂತೆ ಜೋರಾಗಿ ಕಿರಿಚುತ್ತಿರುವ ಸದ್ದು ಕೇಳಿಸುತ್ತದೆ.ಈ ವೇಳೆ ವಿಮಾನವು ಟಾರ್ಮ್ಯಾಕ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಈ ಕೂಗು ಹೆಚ್ಚಾಗುತ್ತದೆ. ಆಘಾತಕ್ಕೊಳಗಾದ ಪ್ರಯಾಣಿಕರೊಬ್ಬರು ಹೊರಗೆ ಕಿಡಿ ಕಾಣಿಸುತ್ತಿದೆ ಯಾಕೆ ಎಂದು ಕೇಳುತ್ತಿದ್ದಾರೆ.

ಚಂಡಮಾರುತದ ಸಮಯದಲ್ಲಿ “ವಿಮಾನವು ಲ್ಯಾಂಡಿಂಗ್ ಆದ ಕೂಡಲೇ ಸಮಸ್ಯೆ ಅನುಭವಿಸಿತು”. “ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದಾಗಿ ವಿಮಾನವು ಸರಿಯಾಗಿ ಇಳಿಯಲು ಸಾಧ್ಯವಾಗಿಲ್ಲ ಬೋಯಿಂಗ್ 737 ಕ್ರಾಫ್ಟ್ ಅನ್ನು ಟ್ಯಾಕ್ಸಿವೇಯಲ್ಲಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಹೊರಟ ಬಸ್, ಕಂಬಕ್ಕೆ ತಲೆ ತಗುಲಿ ಬಾಲಕಿ ಸಾವು

ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 106 ಪ್ರಯಾಣಿಕರಿದ್ದರು. ವರದಿಗಳ ಪ್ರಕಾರ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ವಿಮಾನಯಾನ ಸಂಸ್ಥೆಯು, “ನಮ್ಮ ಗಮನವು ವಿಮಾನದಲ್ಲಿದ್ದ ನಮ್ಮ ಅತಿಥಿಗಳನ್ನು ಅವರ ಚೆಕ್ ಮಾಡಿದ ಬ್ಯಾಗ್‌ಗಳನ್ನು ಹಿಂಪಡೆಯುವುದು ಸೇರಿದಂತೆ ಕಾಳಜಿ ವಹಿಸುತ್ತಿದೆ.”ನಮ್ಮ ಅತಿಥಿಗಳು ಮತ್ತು ಉದ್ಯೋಗಿಗಳ ಸುರಕ್ಷತೆಯು ಯಾವಾಗಲೂ ನಮ್ಮ ಪ್ರಾಥಮಿಕ ಆದ್ಯತೆಯಾಗಿದೆ. ಈ ಘಟನೆಯು ಅಪರೂಪದ ಘಟನೆಯಾಗಿದ್ದರೂ, ನಮ್ಮ ವಿಮಾನ ಸಿಬ್ಬಂದಿಗಳು ಅನೇಕ ಸನ್ನಿವೇಶಗಳ ಮೂಲಕ ಸುರಕ್ಷಿತವಾಗಿ ನಿರ್ವಹಿಸಿದ್ದಾರೆ ಎಂದು ವಿಮಾನ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು
‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು
ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಸುಖಾಸುಮ್ಮನೆ ಮನೇಲಿ ಕೂರುವ ಸಂಸದರು ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ!
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
ಮಾಜಿ ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತಿಯಲ್ಲಿ ನಡೆದ ಅಯ್ಕೆ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
HTT 40 ಟ್ರೈನಿ ಏರ್ ಕ್ರಾಫ್ಟ್​ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿದ ಬೆಂಕಿ ಪಕ್ಕದ ಕಟ್ಟಡಕ್ಕೆ ಪಸರಿಸಿದೆ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ