ವಿಚಿತ್ರ ಘಟನೆ: ತಾಯಿಯ ಶಿರಚ್ಛೇದ ಮಾಡಿ, ಆಕೆಯ ದೇಹದ ಮೇಲೆ ಬೆತ್ತಲಾಗಿ ಮಲಗಿದ್ದ ಮಗ

ತಾಯಿಯನ್ನು ಕೊಂದು ಶಿರಚ್ಛೇದ ಮಾಡಿದ ಆರೋಪದ ಮೇಲೆ ನ್ಯೂಜರ್ಸಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಂದಿರುವುದಾಗಿ ಆ ವ್ಯಕ್ತಿ ಮಾಹಿತಿ ನೀಡಿದ್ದ. ಸುರ್ಜೆಂಟ್ ತನ್ನ ತಾಯಿ ಅಲೆಕ್ಸಾಂಡ್ರಿಯಾವನ್ನು ಕೊಲ್ಲಲು ಚಾಕು ಬಳಕೆ ಮಾಡಿದ್ದ.

ವಿಚಿತ್ರ ಘಟನೆ: ತಾಯಿಯ ಶಿರಚ್ಛೇದ ಮಾಡಿ, ಆಕೆಯ ದೇಹದ ಮೇಲೆ ಬೆತ್ತಲಾಗಿ ಮಲಗಿದ್ದ ಮಗ
ಮಹಿಳೆ
Image Credit source: NDTV

Updated on: Dec 15, 2023 | 3:27 PM

ತಾಯಿಯನ್ನು ಕೊಂದು ಶಿರಚ್ಛೇದ ಮಾಡಿದ ಆರೋಪದ ಮೇಲೆ ನ್ಯೂಜರ್ಸಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಂದಿರುವುದಾಗಿ ಆ ವ್ಯಕ್ತಿ ಮಾಹಿತಿ ನೀಡಿದ್ದ. ಸುರ್ಜೆಂಟ್ ತನ್ನ ತಾಯಿ ಅಲೆಕ್ಸಾಂಡ್ರಿಯಾವನ್ನು ಕೊಲ್ಲಲು ಚಾಕು ಬಳಕೆ ಮಾಡಿದ್ದ.

ತನ್ನ ತಾಯಿಯನ್ನು ಕೊಂದಿದ್ದಕ್ಕಾಗಿ ಸುರ್ಜೆಂಟ್ ಪದೇ ಪದೇ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾನೆ ಎಂಬುದು ತಿಳಿದುಬಂದಿದೆ. ಪೊಲೀಸರು ಓಷನ್ ಸಿಟಿಯ ಮನೆಗೆ ಪ್ರವೇಶಿಸಿದಾಗ ಸರ್ಜೆಂಟ್​ ಬೆತ್ತಲೆಯಾಗಿ ತಲೆ ಇಲ್ಲದ ತಾಯಿಯ ಶರೀರದ ಮೇಲೆ ಮಲಗಿರುವುದು ಕಾಣಿಸಿದೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಆರೋಪ: ನನಗೇನಾಗಿದೆ ತನಿಖೆ ನಡೆಸಿ ಎಂದು ದೂರು ನೀಡಿದ ಟೆಕ್ಕಿ

ಇದನ್ನು ನೋಡಿ ನೆರೆಹೊರೆಯವರು ಕೂಡ ಆಘಾತಕ್ಕೊಳಗಾಗಿದ್ದಾರೆ. ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸಲು ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳ ದೃಶ್ಯವನ್ನು ವೀಕ್ಷಿಸಿದ್ದಾರೆ. ಯಾವ ಕಾರಣಗಳಿಗಾಗಿ ಕೊಲೆ ಮಾಡಿದ್ದಾನೆ, ಮಾನಸಿಕ ಸಮಸ್ಯೆಯಿಂದ ಆತ ಬಳಲುತ್ತಿದ್ದನೇ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:27 pm, Fri, 15 December 23