ಅಮೆರಿಕಾದಲ್ಲಿ ಒಬ್ಬರಿಗೆ ಒಂದೇ ಇಂಜೆಕ್ಷನ್.. ಹೆಚ್ಚು ಜನರಿಗೆ ಲಸಿಕೆ ಹಂಚುವ ‘ದೊಡ್ಡ’ಣ್ಣನ ತಂತ್ರ
ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಈಗ ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ.
ಇರುವ ಸೌಲಭ್ಯದಲ್ಲೇ ಹೆಚ್ಚು ಜನರನ್ನು ತಲುಪುವ ಸಲುವಾಗಿ ಅಮೆರಿಕಾ ಸರ್ಕಾರ ಪ್ರತಿಯೊಬ್ಬರಿಗೂ ಈಗ ನಿಗದಿಪಡಿಸಿರುವುದರ ಅರ್ಧದಷ್ಟು ಡೋಸ್ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ. ಈ ಕುರಿತು ಆಪರೇಷನ್ ವಾರ್ಪ್ ಸ್ಪೀಡ್ ವಿಭಾಗದ ಮುಖ್ಯಸ್ಥ ಮೌನ್ಸೆಫ್ ಸ್ಲಾಯ್ ಮಾಹಿತಿ ನೀಡಿದ್ದು, ಅರ್ಧ ಡೋಸ್ ಲಸಿಕೆ ವಿತರಣೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಸದ್ಯ ಅಮೆರಿಕಾದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಈಗ ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಅನುಮತಿ ಗಿಟ್ಟಿಸಿಕೊಂಡಿರುವ ಮಾಡೆರ್ನಾ ಸಂಸ್ಥೆ ಮತ್ತು ಅಲ್ಲಿನ ಆಹಾರ ಮತ್ತು ಔಷಧ ನಿಯಂತ್ರಣಾ ಮಂಡಳಿ ಜೊತೆ ಚರ್ಚೆಯೂ ನಡೆಯುತ್ತಿದೆ.
18 ರಿಂದ 55 ವಯೋಮಾನದವರಿಗೆ ಅರ್ಧದಷ್ಟು ಕೊರೊನಾ ಲಸಿಕೆ ಕೊಟ್ಟರೆ ಈಗ ಲಭ್ಯವಿರುವ ಲಸಿಕೆಯನ್ನು ದುಪ್ಪಟ್ಟು ಜನರಿಗೆ ಹಂಚಬಹುದು. ಅರ್ಧದಷ್ಟು ಲಸಿಕೆ ನೀಡಿದರೂ ಅದು ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಪಡಿಸುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿ, ಯಾವುದೇ ರೀತಿಯ ಸಮಸ್ಯೆ ಆಗಲಾರದು ಎನ್ನುವುದು ಮೌನ್ಸೆಫ್ ಸ್ಲಾಯ್ ಅವರ ಅಭಿಮತ.
ಅಮೆರಿಕಾ ಸರ್ಕಾರ ಮಾಡೆರ್ನಾ ಲಸಿಕೆಯ ಜೊತೆಜೊತೆಗೆ ಫೈಜರ್ ಸಂಸ್ಥೆಯ ಕೊರೊನಾ ಲಸಿಕೆಗೂ ಅನುಮತಿ ನೀಡಿದೆ. ಫೈಜರ್ ಸಂಸ್ಥೆಯೂ ಒಬ್ಬ ವ್ಯಕ್ತಿಗೆ 2 ಡೋಸ್ ನೀಡಲು ಸೂಚಿಸಿತ್ತು. ಆದರೆ, ಹೆಚ್ಚು ಜನರಿಗೆ ಲಸಿಕೆ ವಿತರಿಸುವ ದೃಷ್ಟಿಯಿಂದ ಈ ನಿಯಮವನ್ನು ಬದಲಾಯಿಸಿ ಅದನ್ನೂ ಅರ್ಧದಷ್ಟು ನೀಡಿದರೆ ಅಚ್ಚರಿಯಿಲ್ಲ.
ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?
Published On - 3:47 pm, Mon, 4 January 21