ಅಮೆರಿಕ ಸೇನಾ ಪ್ರಧಾನ ಕಚೇರಿ ಪೆಂಟಗನ್ ಸಮೀಪ ಗುಂಡು ಹಾರಾಟ: ಕಟ್ಟಡದತ್ತ ಧಾವಿಸಿದ ಭದ್ರತಾ ಸಿಬ್ಬಂದಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 03, 2021 | 10:08 PM

ವಿಶ್ವದ ಹಲವು ದೇಶಗಳಲ್ಲಿ ಅಮೆರಿಕ ಸೇನೆಯ ಕಾರ್ಯಾಚರಣೆಯನ್ನು ನಿರ್ವಹಿಸುವ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಸಮೀಪ ಮಂಗಳವಾರ ಮುಂಜಾನೆ ಗುಂಡು ಹಾರಾಟ ನಡೆದಿದೆ.

ಅಮೆರಿಕ ಸೇನಾ ಪ್ರಧಾನ ಕಚೇರಿ ಪೆಂಟಗನ್ ಸಮೀಪ ಗುಂಡು ಹಾರಾಟ: ಕಟ್ಟಡದತ್ತ ಧಾವಿಸಿದ ಭದ್ರತಾ ಸಿಬ್ಬಂದಿ
ಅಮೆರಿಕದ ಸೇನಾ ಪ್ರಧಾನ ಕಚೇರಿ ಪೆಂಟಗನ್ ಕಟ್ಟಡ
Follow us on

ವಾಷಿಂಗ್​ಟನ್: ವಿಶ್ವದ ಹಲವು ದೇಶಗಳಲ್ಲಿ ಅಮೆರಿಕ ಸೇನೆಯ ಕಾರ್ಯಾಚರಣೆಯನ್ನು ನಿರ್ವಹಿಸುವ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಸಮೀಪ ಮಂಗಳವಾರ ಮುಂಜಾನೆ ಗುಂಡು ಹಾರಾಟ ನಡೆದಿದೆ. ಕನಿಷ್ಠ ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಆತನ ವಿವರ ಮತ್ತು ಸದ್ಯದ ಪರಿಸ್ಥಿತಿಯ ಮಾಹಿತಿ ತಿಳಿದಿಲ್ಲ ಎಂದು ಘಟನೆಯ ಇಬ್ಬರು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಪೆಂಟಗನ್ ಟ್ರಾನ್ಸಿಟ್​ ಸೆಂಟರ್​ನ ಭಾಗವಾಗಿರುವ ಮೆಟ್ರೊ ಬಸ್ ಪ್ಲಾಟ್​ಫಾರ್ಮ್​ನಲ್ಲಿ ಈ ಘಟನೆ ನಡೆದಿದೆ ಎಂದು ಪೆಂಟಗನ್ ರಕ್ಷಣಾ ದಳ ಟ್ವೀಟ್ ಮಾಡಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಮೆಟ್ರೊ ಸಬ್​ವೇ ರೈಲುಗಳಿಗೂ ಪೆಂಟಗನ್ ನಿಲ್ದಾಣದಲ್ಲಿ ನಿಲುಗಡೆ ನಿಷೇಧಿಸಲಾಗಿದೆ. ತನಿಖೆ ಚುರುಕಾಗಿದೆ.

ಪೆಂಟಗನ್ ಸಮೀಪವೇ ಇದ್ದ ಅಸೋಸಿಯೇಟೆಡ್​ ಪ್ರೆಸ್​ (ಎಪಿ) ಸುದ್ದಿಸಂಸ್ಥೆಯ ವರದಿಗಾರ ಸಹ ಗುಂಡುಗಳ ಹಾರಾಟದ ಧ್ವನಿ ಕೇಳಿಸಿದ್ದನ್ನು ದೃಢಪಡಿಸಿದ್ದಾರೆ.

ಕಟ್ಟಡದಲ್ಲಿರುವ ಎಲ್ಲ ಸಿಬ್ಬಂದಿಗೂ ಸುರಕ್ಷಿತ ಸ್ಥಳದಲ್ಲಿ ಭದ್ರತೆ ಒದಗಿಸಲಾಗಿದೆ. ಸ್ಥಳೀಯ ಸುದ್ದಿವಾಹಿನಿಗಳು ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ವಾಹನಗಳು ಪೆಂಟಗನ್​ನತ್ತ ಧಾವಿಸುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿವೆ.

(American Defense Headquarters Pentagon on lockdown after gunshots fired near Metro)

ಇದನ್ನೂ ಓದಿ: ಸದ್ಯಕ್ಕಂತೂ ಪಾಕಿಸ್ತಾನಕ್ಕೆ ಭದ್ರತಾ ನೆರವು ನೀಡೋದಿಲ್ಲವೆಂದ ಯುಎಸ್​; ಟ್ರಂಪ್​ ನೀತಿಯನ್ನೇ ಮುಂದುವರಿಸಲು ಬೈಡನ್​ ನಿರ್ಧಾರ

ಇದನ್ನೂ ಓದಿ: ಅಮೆರಿಕದ ವೈಮಾನಿಕ ದಾಳಿಯ ನೆರವಿನಿಂದ ತಾಲಿಬಾನ್​​ನ್ನು ಹಿಮ್ಮೆಟ್ಟಿಸಿದ ಅಫ್ಘಾನ್ ಭದ್ರತಾ ಪಡೆ

Published On - 10:04 pm, Tue, 3 August 21