Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangla Murder: ಬಾಂಗ್ಲಾದಲ್ಲೂ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಕೊಲೆ, ಶ್ರದ್ಧಾ ಕೊಲೆ ಆರೋಪಿ ಕೂಡ ಬಾಂಗ್ಲಾದವನೇ

ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತಿದೆ. ಇದೀಗ ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ.

Bangla Murder: ಬಾಂಗ್ಲಾದಲ್ಲೂ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಕೊಲೆ, ಶ್ರದ್ಧಾ ಕೊಲೆ ಆರೋಪಿ ಕೂಡ ಬಾಂಗ್ಲಾದವನೇ
Abu BakarImage Credit source: First Spot
Follow us
TV9 Web
| Updated By: ನಯನಾ ರಾಜೀವ್

Updated on:Nov 18, 2022 | 11:12 AM

ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತಿದೆ. ಇದೀಗ ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಬಾಂಗ್ಲಾದೇಶದವನು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಇದರ ಬೆನ್ನಲ್ಲೇ ಶ್ರದ್ಧಾ ಹತ್ಯೆ ಮಾದರಿಯ ಮತ್ತೊಂದು ಕೊಲೆ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದಲ್ಲಿ ಮುಸ್ಲಿಂ ಯುವಕ ಅಬೂಬಕರ್ ಎಂಬಾತ ಹಿಂದೂ ಯುವತಿಯ ಶಿರಚ್ಛೇದ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನವೆಂಬರ್ 7 ರಂದು ಬಾಂಗ್ಲಾದೇಶದ ಸೋನದಂಗಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಅಬೂಬಕರ್ ಕವಿತಾ ರಾಣಿ ಎಂಬಾಕೆಯನ್ನು ಹತ್ಯೆ ಮಾಡಿದ್ದ, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.

ಮತ್ತಷ್ಟು ಓದಿ: Shraddha Walker Murder Case: ಶಿಕ್ಷಿತ ಹೆಣ್ಣು ಮಕ್ಕಳು ಈ ಘಟನೆಯಿಂದ ಪಾಠ ಕಲಿಯಬೇಕಿದೆ: ಕೇಂದ್ರ ಸಚಿವ ಕೌಶಲ್

ವಾಯ್ಸ್​ ಆಫ್ ಬಾಂಗ್ಲಾದೇಶ್ ಹಾಕಿರುವ ಪೋಸ್ಟ್​ ಪ್ರಕಾರ, ಅಬೂಬಕರ್​ಗೆ ಈಗಾಗಲೇ ಮದುವೆಯಾಗಿದೆ ಎನ್ನುವ ವಿಷಯ ತಿಳಿದ ಬಳಿಕ ಕವಿತಾ ರಾಣಿ ಹಾಗೂ ಆತನ ಮಧ್ಯೆ ಜಗಳ ಶುರುವಾಗಿತ್ತು. ಆ ಜಗಳ ಕೊನೆಗೆ ಕವಿತಾ ಹತ್ಯೆಯಲ್ಲಿ ಅಂತ್ಯಗೊಂಡಿತ್ತು ಆತ ಆಕೆಯ ಶಿರಚ್ಛೇದ ಮಾಡಿ, ಆಕೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಕವರ್​ನಲ್ಲಿ ತುಂಬಿ ಚರಂಡಿಗೆ ಎಸೆದಿದ್ದ.

ಇದು ದೆಹಲಿಯ ಶ್ರದ್ಧಾ ವಾಕರ್ ಹತ್ಯೆಗಿಂತ ತುಂಬಾ ಭಿನ್ನವಾಗಿಲ್ಲ ಅಫ್ತಾಬ್ ಪೂನಾವಾಲಾ ಎಂಬಾತ ಶ್ರದ್ಧಾ ವಾಕರ್ ಎಂಬಾಕೆಯ ಜತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ, ಆಕೆ ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸಿದಾಗ ಅವರ ಮಧ್ಯೆ ಕಲಹ ಉಂಟಾಗಿತ್ತು. ಆ ಸಮಯದಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿ ಬಳಿಕ 35 ತುಂಡುಗಳಾಗಿ ದೇಹವನ್ನು ಕತ್ತರಿಸಿ ನಗರದ ವಿವಿಧೆಡೆ ದೇಹದ ಭಾಗಗಳನ್ನು ಎಸೆದಿದ್ದ. ಹಾಗೆಯೇ ದೇಹವನ್ನು ಕತ್ತರಿಸಲು ಎಂತಹ ಚಾಕುವನ್ನು ಬಳಕೆ ಮಾಡುತ್ತಾರೆ ಎಂಬುದರ ಬಗ್ಗೆಯೂ ಆತ ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡಿ ಖರೀದಿಸಿದ್ದ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Fri, 18 November 22

ಕುಟಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ ಶಶಿಕುಮಾರ್
ಕುಟಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ ಶಶಿಕುಮಾರ್
ಮೊರಾದಾಬಾದ್​ನಲ್ಲಿ ಅತ್ತಿಗೆ ಮೇಲೆ ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಹಲ್ಲೆ
ಮೊರಾದಾಬಾದ್​ನಲ್ಲಿ ಅತ್ತಿಗೆ ಮೇಲೆ ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಹಲ್ಲೆ
ನಾಲ್ಕು ದಿನಗಳ ಹಿಂದೆ ಕೆರೆಗೆ ಹಾರಿದ್ದ ಶಿವಾನಂದ, ಇವತ್ತು ಪತ್ತೆಯಾದ ದೇಹ
ನಾಲ್ಕು ದಿನಗಳ ಹಿಂದೆ ಕೆರೆಗೆ ಹಾರಿದ್ದ ಶಿವಾನಂದ, ಇವತ್ತು ಪತ್ತೆಯಾದ ದೇಹ
‘ಡ್ಯೂಡ್’ ಸಿನಿಮಾ ಹಾಡು ಬಿಡುಗಡೆ, ದೊಡ್ಮನೆಯ ಕೊಂಡಾಡಿದ ನಟ ತೇಜ್
‘ಡ್ಯೂಡ್’ ಸಿನಿಮಾ ಹಾಡು ಬಿಡುಗಡೆ, ದೊಡ್ಮನೆಯ ಕೊಂಡಾಡಿದ ನಟ ತೇಜ್
ಪ್ರಲ್ಹಾದ್ ಜೋಶಿಯವರು ರಾಜ್ಯಕ್ಕೆ ನೀಡಲು ಸಿದ್ಧರಾಗಿದ್ದಾರೆ: ಮುನಿಯಪ್ಪ
ಪ್ರಲ್ಹಾದ್ ಜೋಶಿಯವರು ರಾಜ್ಯಕ್ಕೆ ನೀಡಲು ಸಿದ್ಧರಾಗಿದ್ದಾರೆ: ಮುನಿಯಪ್ಪ
18ರ ಯುವತಿಯನ್ನ ಮದ್ವೆಯಾಗಿದ್ದ 50 ವರ್ಷದ ಅಂಕಲ್ ಅರೆಸ್ಟ್!
18ರ ಯುವತಿಯನ್ನ ಮದ್ವೆಯಾಗಿದ್ದ 50 ವರ್ಷದ ಅಂಕಲ್ ಅರೆಸ್ಟ್!
ಸಿದ್ದರಾಮಯ್ಯ ರಾಜ್ಯ ತಾಲಿಬಾನೀ ಸರ್ಕಾರದ ಮುಖ್ಯಸ್ಥರಾಗಿದ್ದಾರೆ: ಪ್ರತಾಪ್
ಸಿದ್ದರಾಮಯ್ಯ ರಾಜ್ಯ ತಾಲಿಬಾನೀ ಸರ್ಕಾರದ ಮುಖ್ಯಸ್ಥರಾಗಿದ್ದಾರೆ: ಪ್ರತಾಪ್
ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!
ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!
ನಾನು ಖರೀದಿಸಿರುವ ಜಮೀನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ: ಕುಮಾರಸ್ವಾಮಿ
ನಾನು ಖರೀದಿಸಿರುವ ಜಮೀನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ: ಕುಮಾರಸ್ವಾಮಿ
ಮೆಟ್ರೋ ದರ ಏರಿಕೆಗೆ: ರಹಸ್ಯ ಬಹಿರಂಗಪಡಿಸಿದ ಶೋಭಾ ಕರಂದ್ಲಾಜೆ
ಮೆಟ್ರೋ ದರ ಏರಿಕೆಗೆ: ರಹಸ್ಯ ಬಹಿರಂಗಪಡಿಸಿದ ಶೋಭಾ ಕರಂದ್ಲಾಜೆ