ಹೆಣ್ಮಕ್ಳೇ ನಿಮಗೊಂದು ಗುಡ್ನ್ಯೂಸ್, ಕೊರೊನಾ ರಣಕೇಕೆ ನಡುವೆಯೂ ಬ್ಯೂಟಿ ಪಾರ್ಲರ್ಗಳು ಓಪನ್ ಆದ್ವು
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇದ್ರ ಮಧ್ಯೆಯೇ ಡೊನಾಲ್ಡ್ ಟ್ರಂಪ್ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಿದ್ದಾರೆ. ಹೀಗಾಗಿ, ಸಲೂನ್, ಬ್ಯೂಟಿ ಪಾರ್ಲರ್ಗಳು ಪುನಾರಂಭವಾಗಿವೆ.. ಜನರು ಮಾಸ್ಕ್ ಹಾಕಿಕೊಂಡು ಕಟಿಂಗ್ ಶಾಪ್ಗೆ ಎಂಟ್ರಿ ಕೊಡ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸುತ್ತಿದ್ದಾರೆ. 3ಲಕ್ಷಕ್ಕೂ ಅಧಿಕ ಜನ ಬಲಿ: ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಈಗಾಗಲೇ ವಿಶ್ವದಾದ್ಯಂತ 3 ಲಕ್ಷ 13 ಸಾವಿರದ 200ಕ್ಕೂ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ದೆ, 47 […]
ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇದ್ರ ಮಧ್ಯೆಯೇ ಡೊನಾಲ್ಡ್ ಟ್ರಂಪ್ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಿದ್ದಾರೆ. ಹೀಗಾಗಿ, ಸಲೂನ್, ಬ್ಯೂಟಿ ಪಾರ್ಲರ್ಗಳು ಪುನಾರಂಭವಾಗಿವೆ.. ಜನರು ಮಾಸ್ಕ್ ಹಾಕಿಕೊಂಡು ಕಟಿಂಗ್ ಶಾಪ್ಗೆ ಎಂಟ್ರಿ ಕೊಡ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸುತ್ತಿದ್ದಾರೆ.
3ಲಕ್ಷಕ್ಕೂ ಅಧಿಕ ಜನ ಬಲಿ: ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಈಗಾಗಲೇ ವಿಶ್ವದಾದ್ಯಂತ 3 ಲಕ್ಷ 13 ಸಾವಿರದ 200ಕ್ಕೂ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ದೆ, 47 ಲಕ್ಷದ 22 ಸಾವಿರದ 200ಕ್ಕೂ ಹೆಚ್ಚು ಜನರಿಗೆ ಹೆಮ್ಮಾರಿ ತಗುಲಿದೆ.. ಇದುವರೆಗೆ 18 ಲಕ್ಷದ 13 ಸಾವಿರಕ್ಕೂ ಹೆಚ್ಚು ಜನರು ಸೋಂಕು ಗೆದ್ದು ಬಂದಿದ್ದಾರೆ.
ರೆಸ್ಟೋರೆಂಟ್ ಮಾಲೀಕರ ಪ್ರತಿಭಟನೆ: ಇಟಲಿಯಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿದಿರೋದನ್ನು ವಿರೋಧಿಸಿ ರೆಸ್ಟೋರೆಂಟ್ ಮಾಲೀಕರು ರೋಮ್ನಲ್ಲಿ ಪ್ರತಿಭಟನೆ ನಡೆಸಿದ್ರು. ಸರ್ಕಾರದ ಅರ್ಥಿಕ ನೀತಿ ವಿರುದ್ಧ ಬೀದಿಗಿಳಿದ ರೆಸ್ಟೋರೆಂಟ್ ಮಾಲೀಕರು, ನಮಗಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಅಂತಾ ಪ್ರಶ್ನಿಸಿದ್ರು. ಸುದೀರ್ಘ ಕಾಲದ ಲಾಕ್ಡೌನ್ನಿಂದಾಗಿ ಹೋಟೆಲ್ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ.
ಜೂನ್ 3ರಿಂದ ವಿಮಾನಯಾನ ಶುರು: ಕೊರೊನಾ ಕ್ರೌರ್ಯವನ್ನು ಹತೋಟಿಗೆ ತಂದಿರೋ ಇಟಲಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜೂನ್ 3ರಿಂದ ವಿಮಾನಯಾನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ವಿದೇಶಗಳಿಗೆ ಹೋಗುವ ಮತ್ತು ವಿದೇಶಗಳಿಂದ ಹೊರಬರುವ ಎಲ್ಲ ವಿಮಾನಗಳಿಗೆ ಅವಕಾಶ ನೀಡುವ ಪ್ರಸ್ತಾವಕ್ಕೆ ಅಂಗೀಕಾರ ನೀಡಿದೆ. ಜೂನ್ ಮೂರರಂದು ಇಟಲಿಯಾದ್ಯಂತ ಮುಕ್ತ ಸಂಚಾರಕ್ಕೂ ಸರ್ಕಾರ ಅನುಮತಿ ನೀಡಲಿದೆ.
ಮೆಕ್ಸಿಕೋಗೆ ಕೊರೊನಾ ಮರ್ಮಾಘಾತ: ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮೆರೀತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2 ಸಾವಿರದ 409 ಮಂದಿಗೆ ಕೊರೊನಾ ಅಟ್ಯಾಕ್ ಆಗಿದೆ. ಇದೇ ಮೊದಲ ಬಾರಿಗೆ ಮೆಕ್ಸಿಕೋದಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ 2ಸಾವಿರದ ಗಡಿ ದಾಟಿದೆ. ಈ ಮೂಲಕ ಮೆಕ್ಸಿಕೋದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 40 ಸಾವಿರಕ್ಕೇರಿಕೆಯಾಗಿದೆ.
ಅಮೆಜಾನ್ನಲ್ಲಿ ಕೊವಿಡ್ ಆಸ್ಪತ್ರೆ: ಅಮೆಜಾನ್ ಸಿಟಿಯಲ್ಲಿ ಕೊವಿಡ್ ಆಸ್ಪತ್ರೆ ನಿರ್ಮಿಸಲು ಪೆರು ಸರ್ಕಾರ ಮುಂದಾಗಿದೆ. ಮುಂದಿನ 3 ವಾರಗಳಲ್ಲಿ 100 ಬೆಡ್ಗಳ ಕೊವಿಡ್ ಆಸ್ಪತ್ರೆ ನಿರ್ಮಿಸಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ 220 ಆರೋಗ್ಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಪೆರು ದೇಶದಲ್ಲಿ 2250ಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾಗಿದ್ರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪಾಕಿಸ್ತಾನದಲ್ಲಿ ವಿಮಾನ ಸಂಚಾರ: ಕೊರೊನಾ ಹೊಡೆತಕ್ಕೆ ನಲುಗಿರೋ ಪಾಕಿಸ್ತಾನ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಸಡಿಲಿಕೆ ಮಾಡಿದೆ. ಹೀಗಾಗಿ, ನಿನ್ನೆಯಿಂದ ದೇಶಿ ವಿಮಾನಗಳು ಹಾರಾಟ ಆರಂಭಿಸಿವೆ. ಸೀಮಿತ ಪ್ರದೇಶದಲ್ಲಿ ವಿಮಾನಗಳು ಕಾರ್ಯಾರಂಭ ಮಾಡಿದ್ದು, ಹಂತ ಹಂತವಾಗಿ ಎಲ್ಲ ಪ್ರದೇಶಗಳಲ್ಲಿ ವಿಮಾನಯಾನ ಶುರು ಮಾಡಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.
Published On - 2:33 pm, Sun, 17 May 20