Bhutan Award to PM Modi: ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

| Updated By: Digi Tech Desk

Updated on: Dec 17, 2021 | 11:25 AM

Ngadag Pel gi Khorlo: ಭಾರತದ ಪ್ರದಾನಿ ನರೇಂದ್ರ ಮೋದಿಯವರಿಗೆ ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆಯಾಗಿದೆ. ಈ ಕುರಿತು ಭೂತಾನ್ ಅಧಿಕೃತ ಆದೇಶ ಹೊರಡಿಸಿದೆ.

Bhutan Award to PM Modi: ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ
ಪ್ರಧಾನಿ ಮೋದಿ ಮತ್ತು ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್, ಭೂತಾನ್ ಸಾಮ್ರಾಜ್ಯದ ರಾಜ್ಯ ಮುಖ್ಯಸ್ಥರು (ಸಂಗ್ರಹ ಚಿತ್ರ)
Follow us on

Bhutan Award to PM Modi | ಭೂತಾನ್ ದೇಶವು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಾಗ್ ಪೆಲ್ ಗಿ ಖೋರ್ಲೋವನ್ನು (Ngadag Pel gi Khorlo) ಘೋಷಿಸಿದೆ. ದೇಶದ ಮುಖ್ಯಸ್ಥರಾದ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ (Jigme Khesar Namgyel Wangchuck) ಅವರು ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಮೋದಿಯವರ ಹೆಸರನ್ನು ಘೋಷಿಸಿದರು. ಭಾರತದ ಪ್ರಧಾನಿ ಮೋದಿಯವರು ಕೊರೊನಾ ಸಾಂಕ್ರಮಿಕ ಸಮಯದಲ್ಲಿ ನೀಡಿದ ಬೇಷರತ್ ಬೆಂಬಲ ಹಾಗೂ ಸ್ನೇಹದ ಗೌರವಾರ್ಥ ಈ ಪ್ರಶಸ್ತಿಗೆ ಮೋದಿ ಅರ್ಹರು ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಅಭಿನಂದನೆ ಸಲ್ಲಿಸಿದೆ.

ಭೂತಾನ್ ಪ್ರಧಾನಿ ಈ ಕುರಿತು ಘೋಷಿಸಿರುವ ಟ್ವೀಟ್:

ಭೂತಾನ್​ನ ಪ್ರಧಾನಿ ಕಾರ್ಯಾಲಯವು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದು, ‘ಬಹಳ ಅರ್ಹ’ ಎಂದು ಬರೆದಿದೆ. ಭಾರತವು ಎಲ್ಲಾ ಸಂದರ್ಭದಲ್ಲಿ ಭೂತಾನ್​ಗೆ ಬೆಂಬಲವಾಗಿ ನಿಂತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ಆಪತ್ಕಾಲದಲ್ಲಿ ಭೂತಾನ್​ಗೆ ಆಪದ್ಭಾಂದವನಾಗಿ ಭಾರತ ನಿಂತಿದೆ. ಮೋದಿಯವರು ಅದ್ಭುತ ವ್ಯಕ್ತಿ. ಈ ಪ್ರಶಸ್ತಿಯ ಸಂಭ್ರಮಾಚರಣೆಗೆ ಎದುರು ನೋಡುತ್ತಿದ್ದೇವೆ’’ ಎಂದು ಭೂತಾನ್ ಪ್ರಧಾನಿ ಕಾರ್ಯಾಲಯ ಬರೆದಿದ್ದನ್ನು ಉಲ್ಲೇಖಿಸಿ ಎಎನ್​ಐ ಟ್ವೀಟ್ ಮಾಡಿದೆ.

ಭಾರತವು ಭೂತಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ಇದಲ್ಲದೇ ದ್ವಿಪಕ್ಷೀಯ ಸಂಬಂಧಗಳಲ್ಲಿ ಭಾರತವು ಭೂತಾನ್‌ನ ಅತಿದೊಡ್ಡ ವ್ಯಾಪಾರ ಮತ್ತು ಅಭಿವೃದ್ಧಿ ಪಾಲುದಾರನಾಗಿ ಮುಂದುವರೆದಿದೆ. ವಾಸ್ತವವಾಗಿ, ನರೇಂದ್ರ ಮೋದಿ ಆಡಳಿತದ ಕೋವಿಡ್ -19 ಲಸಿಕೆಗಳ ಉಡುಗೊರೆಯನ್ನು ಸ್ವೀಕರಿಸಿದ ಮೊದಲ ದೇಶ ಭೂತಾನ್ ಆಗಿದೆ. ಆ ಲಸಿಕೆಗಳನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಯಾರಿಸಿತ್ತು. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೇಶವು ಭಾರತದಿಂದ 1.5 ಲಕ್ಷ ಡೋಸ್‌ಗಳ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸಿದೆ.

ನಂತರ, ಭೂತಾನ್ ಭಾರತದಿಂದ ಹೆಚ್ಚುವರಿ 4,00,000 ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿತು. ಹೀಗಾಗಿ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವ್ಯಾಪಿ ಲಸಿಕಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಭೂತಾನ್​ಗೆ ಸಾಧ್ಯವಾಯಿತು. ಭೂತಾನ್‌ನ ಪ್ರಧಾನಿ ಲೋಟೆ ತ್ಶೆರಿಂಗ್, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು.

ಕಳೆದ ವರ್ಷ, ಪ್ರಧಾನಿ ಮೋದಿ ಅವರು ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಮತ್ತು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸಲು ಭೂತಾನ್‌ಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?

ಆನ್​ಲೈನ್​ನಲ್ಲಿ ಅನಧಿಕೃತ ಸಾಲ ನೀಡುವ ಆ್ಯಪ್​ಗಳನ್ನು ಇನ್ಸ್ಟಾಲ್ ಮಾಡಿದ್ದೀರಾ? ನಿಮ್ಮ ಅಮೂಲ್ಯ ಡೇಟಾ ಕಳವಾಗಬಹುದು, ಎಚ್ಚರ!

Published On - 11:01 am, Fri, 17 December 21