ಓರ್ಲ್ಯಾಂಡೋ ಡಿಸ್ನಿವರ್ಲ್ಡ್ನಲ್ಲಿ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಭೀಕರ ಜಗಳ, ಹೊಡೆದಾಟ-ಬಡಿದಾಟ
ಸಾಲಿನಲ್ಲಿ ನಿಂತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್ ತಂದುಕೊಳ್ಳಲು ಸಾಲಿನಿಂದ ಆಚೆ ನಡೆದು ವಾಪಸ್ಸು ಬಂದು ತನ್ನ ಸ್ಥಾನದಲ್ಲಿ ನಿಂತುಕೊಳ್ಳುತ್ತಿದ್ದಾಗ, ಮತ್ತೊಂದು ಕುಟುಂಬದ ಸದಸ್ಯರು ಆಕೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಇತ್ತೀಚಿಗೆ ಫ್ಲೋರಿಡಾದ ಓರ್ಲ್ಯಾಂಡೋನಲ್ಲಿರುವ (Orlando) ಡಿಸ್ನಿವರ್ಲ್ಡ್ ನಲ್ಲಿ (Disneyworld) ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿ ಹೊಡೆದಾಟ ಬಡಿದಾಟ ಜರುಗಿದ್ದನ್ನು ಜನ ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ (social media) ಪೋಸ್ಟ್ ಮಾಡಿದ್ದಾರೆ. ಟಿಕ್ ಟಾಕ್ ಌಪ್ ನಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋವನ್ನು ಸ್ವಲ್ಪ ಸಮಯದ ಬಳಿಕ ಡಿಲೀಟ್ ಮಾಡಿದರೂ ಅದು ಟ್ವಿಟರ್ ಮತ್ತು ಫೇಸ್ಬುಕ್ ಗಳಲ್ಲಿ ಹರಿದಾಡುತ್ತಿದೆ.
ನಿಮಗಿಲ್ಲಿ ಕಾಣುತ್ತಿರುವ ವಿಡಿಯೋನಲ್ಲಿ ಭಾರೀ ಪ್ರಮಾಣದ ಗಲಾಟೆ ನಡೆಯುತ್ತಿದ್ದು ಕನಿಷ್ಟ 10 ಜನ ಪರಸ್ಪರ ಬೈದಾಡುತ್ತಿದ್ದಾರೆ. ಚಿಕ್ಕ ಮಕ್ಳಳು ಗಾಬರಿಗೊಂಡು ಅಳುತ್ತಿವೆ. ಅಲ್ಲಿರುವ ಜನ ಆತಂಕದಿಂದ ಸೆಕ್ಯುರಿಟಿ ಗಾರ್ಡ್ ಗಳ ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿಸುತ್ತದೆ. ಜಗಳದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಬರಿಗಾಲಲ್ಲಿ ಆಚೆ ನಡೆದು ಹೋಗುತ್ತಿರುವುದು ಹಾಗೂ ಮತ್ತೊಬ್ಬನ ಟಿ ಶರ್ಟ್ ಸಂಪೂರ್ಣವಾಗಿ ಹರಿದು ಹೋಗಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ.
Massive brawl at Disney world In Orlando Florida ? pic.twitter.com/vgKIRE0csq
— Shannon sharpes burner (@shannonsharpeee) July 21, 2022
ವರದಿಗಳ ಪ್ರಕಾರ ಸೆಕ್ಯೂರಿಟಿ ಗಾರ್ಡ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಡೆದಾಟಕ್ಕಿಳಿದಿದ್ದ ಎರಡು ಗುಂಪುಗಳನ್ನು ಬೇರ್ಪಡಿಸಿದ್ದಾರೆ. ಆಮೇಲೆ ಅವರೆಲ್ಲರನ್ನು ಪಾರ್ಕಿನ ಭದ್ರತಾ ಕೋಣೆಯಲ್ಲಿ ಕೂಡಿಹಾಕಲಾಗಿದೆ. ಕನಿಷ್ಟ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ವರದಿಗಳು ತಿಳಿಸುತ್ತವೆ. ವರದಿಗಳ ಪ್ರಕಾರ ಎರಡು ಕುಟುಂಬಗಳ ಸದಸ್ಯರು ಓರ್ಲ್ಯಾಂಡೋನಲ್ಲಿರುವ ಮ್ಯಾಜಿಕ್ ಕಿಂಗ್ಡಮ್ ಥೀಮ್ ಪಾರ್ಕ್ ಬಳಿ ಫಿಲ್ಹಾರ್ ಮ್ಯಾಜಿಕ್ ಥೇಟರ್ ನಲ್ಲಿ ಮಿಕ್ಕಿಯ ಪ್ರದರ್ಶನ ವೀಕ್ಷಿಸಲು ಸಾಲಿನಲ್ಲಿ ನಿಂತಿದ್ದಾಗ ಜಗಳ ಶುರುವಿಟ್ಟುಕೊಂಡಿದೆ.
ಸಾಲಿನಲ್ಲಿ ನಿಂತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್ ತಂದುಕೊಳ್ಳಲು ಸಾಲಿನಿಂದ ಆಚೆ ನಡೆದು ವಾಪಸ್ಸು ಬಂದು ತನ್ನ ಸ್ಥಾನದಲ್ಲಿ ನಿಂತುಕೊಳ್ಳುತ್ತಿದ್ದಾಗ, ಮತ್ತೊಂದು ಕುಟುಂಬದ ಸದಸ್ಯರು ಆಕೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಅದೇ ಕಾರಣಕ್ಕೆ ಎರಡು ಕುಟುಂಬಗಳ ಸದಸ್ಯರ ನಡುವೆ ಥೇಟರ್ ನ ನಿರ್ಗಮನ ದ್ವಾರದ ಬಳಿ ಜಗಳ ಶುರುವಾಗಿದೆ. ಆ ಯುವತಿ ಕುಟುಂಬದ ಸದಸ್ಯರು ಬೇರೆ ಕುಟುಂಬದ ಸದಸ್ಯರಿಗೆ, ‘ನೀವು ಮಾಡಿದ್ದು ಸರಿಯಲ್ಲ, ನಮ್ಮ ಚಿಕ್ಕ ತಂಗಿಯನ್ನು ತಳ್ಳಿದ್ದು ಸರಿಯಲ್ಲ,’ ಅಂತ ಹೇಳುತ್ತಾರೆ. ಎಲ್ಲರೂ ಕೆಂಪು ಮತ್ತು ಬಿಳಿ ಬಣ್ಣದ ಟಿ ಶರ್ಟ್ ಗಳನ್ನು ಧರಿಸಿರುವ ಮತ್ತೊಂದು ಕುಟುಂಬದ ಸದಸ್ಯರಿಗೆ ಅವರ ಮಾತಿನಿಂದ ರೇಗುತ್ತದೆ.
ಆಗಲೇ ಅವರ ನಡುವೆ ಪರಸ್ಪರ ಬೈದಾಡುವುದು ಶುರುವಾಗುತ್ತದೆ. ಆಮೇಲೆ ಅವರು ಕ್ರಮೇಣ ಮುಖಾಮುಖಿಯಾಗತ್ತಾರೆ. ಅಂತಿಮವಾಗಿ ಅವರು ಹೊಡೆದಾಡಲು ಆರಂಭಿಸುತ್ತಾರೆ ಮತ್ತು ಹೊಡೆದಾಡುತ್ತಲೇ ಥೇಟರ್ ನಿಂದ ಹೊರಬಿದ್ದು ಬೀದಿಗೆ ಬರುತ್ತಾರೆ.
ಮೂಲಗಳ ಪ್ರಕಾರ ಕೊರೊನಾ ಪಿಡುಗಿನ ದಿನಗಳಲ್ಲಿ ಓರ್ಲ್ಯಾಂಡೋದ ಡಿಸ್ನಿಲ್ಯಾಂಡ್ ನಲ್ಲಿ ಜಗಳಗಳು ಹೆಚ್ಚಾಗಿವೆ.