ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ (No Confidence Vote) ವಿಶ್ವಾಸಮತ ಗೆದ್ದು ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಬೋರಿಸ್ ಜಾನ್ಸನ್ (Boris Johnson) 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಗೆದ್ದರು. ಈ ಮೂಲಕ ಅವರು ಸಂಸತ್ನ ಶೇ. 59ರಷ್ಟು ಶಾಸಕರ ಬೆಂಬಲವನ್ನು ಪಡೆದರು. ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳನ್ನು ಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್ ಪಾರ್ಟಿ) 148 ಮಂದಿ ಸಂಸದರು ಬೋರಿಸ್ ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.
ಕೊವಿಡ್ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೊವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್ ಜಾನ್ಸನ್ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸೋಮವಾರ ಒಟ್ಟು 359 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 211 ಸಂಸದರು ಹಣದುಬ್ಬರ ಮತ್ತು ಪಾರ್ಟಿಗೇಟ್ ಹಗರಣದಿಂದ ತತ್ತರಿಸಿರುವ ಪಿಎಂ ಜಾನ್ಸನ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೋರಿಸ್ ಜಾನ್ಸನ್ ಅವರು ಜೂನ್ 6ರಂದು ಅವಿಶ್ವಾಸ ಮತವನ್ನು ಎದುರಿಸುವ ಮೂಲಕ ತಮ್ಮ ಪ್ರಧಾನಿ ಹುದ್ದೆಯ ಅತ್ಯಂತ ಕಠಿಣ ಪರೀಕ್ಷೆಯನ್ನು ಎದುರಿಸಿದರು. 40ಕ್ಕೂ ಹೆಚ್ಚು ಕನ್ಸರ್ವೇಟಿವ್ ಪಕ್ಷದ ಸಂಸದರು (ಬೋರಿಸ್ ಜಾನ್ಸನ್ ಅವರ ಸ್ವಂತ ಪಕ್ಷದ ಸದಸ್ಯರು) ಮತ್ತು ಅವರ ಸಿಬ್ಬಂದಿ ಕೊವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಪಾರ್ಟಿಗಳನ್ನು ನಡೆಸಿದ ನಂತರ ಪಿಎಂ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: Vote Of Confidence: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ರಿಂದ ಇಂದು ವಿಶ್ವಾಸಮತ ಯಾಚನೆ
‘ಪಾರ್ಟಿಗೇಟ್’ ಎಂದು ಕರೆಯಲ್ಪಡುವ ಹಗರಣವು ಪಿಎಂ ಜಾನ್ಸನ್ ಅವರ ಭಾರತ ಭೇಟಿಯ ಸಮಯದಲ್ಲಿಯೂ ಅವರ ಮೇಲೆ ಒತ್ತಡವನ್ನು ಹೆಚ್ಚಿಸಿತ್ತು. ಪಾರ್ಟಿಗೇಟ್ ಹಗರಣದ ಬಗ್ಗೆ ಟೀಕೆಗಳು ಮುಂದುವರೆದಂತೆ, ಕನ್ಸರ್ವೇಟಿವ್ ಪಕ್ಷದ 54 ಸಂಸದರು ಅವರ ರಾಜೀನಾಮೆಯನ್ನು ಕೋರಿದ್ದರು. ಹೀಗಾಗಿ, ಬ್ರಿಟನ್ ಪಿಎಂ ಬೋರಿಸ್ ಜಾನ್ಸನ್ ಅವರ ಭವಿಷ್ಯವನ್ನು ನಿರ್ಧರಿಸಲು ವಿಶ್ವಾಸಮತ ಯಾಚನೆ ನಡೆಸಲಾಯಿತು.
We need to come together as a party and focus on what this government is doing to help people with the cost of living, to clear the COVID backlogs and to make our streets safer.
We will continue to unite, level up and strengthen our economy. pic.twitter.com/vIWK81dDJC
— Boris Johnson (@BorisJohnson) June 6, 2022
ಅವಿಶ್ವಾಸ ಮತದಿಂದ ಪಾರಾಗಲು ಬೋರಿಸ್ ಜಾನ್ಸನ್‌ಗೆ 180 ಕನ್ಸರ್ವೇಟಿವ್ ಸಂಸದರ ಬೆಂಬಲ ಬೇಕಿತ್ತು. ಬ್ರಿಟಿಷ್ ಸಂಸತ್ತು ಹೌಸ್ ಆಫ್ ಕಾಮನ್ಸ್ ಒಟ್ಟು 359 ಸಂಸದರನ್ನು ಹೊಂದಿದೆ. ವಿಶ್ವಾಸ ಮತಯಾಚನೆ ವೇಳೆ ಬೋರಿಸ್ ಜಾನ್ಸನ್ 211 ಶಾಸಕರ ಬೆಂಬಲ ಪಡೆದಿದ್ದಾರೆ.
2019ರಲ್ಲಿ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನು ಗಳಿಸಿದ ಬೋರಿಸ್ ಜಾನ್ಸನ್, COVID-19 ಕಾರಣದಿಂದಾಗಿ ಬ್ರಿಟನ್ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಲ್ಲಿದ್ದಾಗ ಅವರು ಮತ್ತು ಸಿಬ್ಬಂದಿ ತಮ್ಮ ಡೌನಿಂಗ್ ಸ್ಟ್ರೀಟ್ ಕಚೇರಿ ಮತ್ತು ನಿವಾಸದಲ್ಲಿ ಆಲ್ಕೋಹಾಲ್ ಪಾರ್ಟಿಗಳನ್ನು ನಡೆಸಿದ ನಂತರ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:22 am, Tue, 7 June 22