Video: ಬ್ರೆಜಿಲ್​ನಲ್ಲಿ ನಾಗರಿಕರನ್ನು ಒತ್ತೆಯಾಳುಗಳಂತೆ ಕಾರಿಗೆ ಕಟ್ಟಿ ರಸ್ತೆಯಲ್ಲಿ ಸಾಗಿದ ದರೋಡೆಕೋರರು; 3 ಸಾವು

ಪತ್ರಕರ್ತರಾದ ಯೂರಿ ಮ್ಯಾಕ್ರಿ ಅವರು ದೃಶ್ಯದ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮೊದಲನೇಯ ಕಾರಿನ ಮೇಲೆ ಮಾನವರನ್ನು ಕಟ್ಟಿಹಾಕಲಾಗಿರುವ ದೃಶ್ಯವನ್ನು ನೋಡಬಹುದು.

Video: ಬ್ರೆಜಿಲ್​ನಲ್ಲಿ ನಾಗರಿಕರನ್ನು ಒತ್ತೆಯಾಳುಗಳಂತೆ ಕಾರಿಗೆ ಕಟ್ಟಿ ರಸ್ತೆಯಲ್ಲಿ ಸಾಗಿದ ದರೋಡೆಕೋರರು; 3 ಸಾವು
ಬ್ರೆಜಿಲ್​ನಲ್ಲಿ ನಾಗರಿಕರನ್ನು ಒತ್ತೆಯಾಳುಗಳಂತೆ ಕಾರಿಗೆ ಕಟ್ಟಿ ರಸ್ತೆಯಲ್ಲಿ ಸಾಗಿದ ದರೋಡೆಕೋರರು; 3 ಸಾವು

ದರೋಡೆಕೋರರು ನಾಗರಿಕರರನ್ನು ಒತ್ತೆಯಾಳುಗಳಂತೆ ಕಂಡು ಕಾರಿನ ಹೊರಭಾಗಕ್ಕೆ ಕಟ್ಟಿಕೊಂಡು ರಸ್ತೆ ತುಂಬ ತಿರುಗಾಡಿದ್ದಾರೆ. ಘಟನೆ ಬ್ರೆಜಿಲ್​ನಲ್ಲಿ ನಡೆದಿದ್ದು ದರೋಡೆಕೋರರ ಕ್ರೌರ್ಯಕ್ಕೆ 3 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಗನ್, ಬಾಂಬ್ ಮತ್ತು ಡ್ರೋನ್​ಗಳೊಂದಿಗೆ ಶಸ್ತ್ರಸಜ್ಜಿತವಾದ ಸುಮಾರು 20 ದರೋಡೆಕೋರರು ಬ್ಯಾಂಕ್​ ದರೋಡೆಗೆ ಮುಂದಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಸಾವೊ ಪಾಲೊದಿಂದ 290 ಮೈಲಿ ದೂರದಲ್ಲಿರುವ ಅರಸತುಬಾ ನಗರ ಕೇಂದ್ರದಲ್ಲಿರುವ ಮೂರು ಬ್ಯಾಂಕ್​ಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಸ್ಥಳೀಯ ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿದೆ. ಕಾರುಗಳಿಗೆ ಜನರನ್ನು ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದಾರೆ. ಪತ್ರಕರ್ತರಾದ ಯೂರಿ ಮ್ಯಾಕ್ರಿ ಅವರು ದೃಶ್ಯದ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮೊದಲನೇಯ ಕಾರಿನ ಮೇಲೆ ಮಾನವರನ್ನು ಕಟ್ಟಿಹಾಕಲಾಗಿರುವ ದೃಶ್ಯವನ್ನು ನೋಡಬಹುದು.

ಮತ್ತೋರ್ವ ಟ್ವೀಟರ್​ ಬಳಕೆದಾರರು ಸಿಸಿಟಿವಿ ಫೂಟೇಜ್ಅನ್ನು ಪೋಸ್ಟ್ ಮಾಡಿದ್ದಾರೆ. ಜನರನ್ನು ಚದುರಿಸಲು ಬಾಂಬ್ ಸ್ಟೋಟಗೊಳಿಸಲಾಗಿದೆ. ಇದರ ಪರಿಣಾಮ 25 ವರ್ಷದ ಸೈಕಲ್ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

Crime News: ಬುಡಕಟ್ಟು ವ್ಯಕ್ತಿಯನ್ನು ಲಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಜನರು; ಗಂಭೀರವಾಗಿ ಗಾಯಗೊಂಡಾತ ಸಾವು

Crime Story: ಸೆಕ್ಯುರಿಟಿ ಗಾರ್ಡ್​ನ ವಿಚಿತ್ರ ಲವ್: ‘ಲೇಡಿ ಆಫ್ ಸ್ಮೆಲ್’ ಮರ್ಡರ್ ಸ್ಟೋರಿ..!

Read Full Article

Click on your DTH Provider to Add TV9 Kannada