ಭಾರತದ ಮೇಲೆ ಕೆನಡಾ ‘ವಕ್ರ’ ದೃಷ್ಟಿ; ಉತ್ತರಕೊರಿಯಾ, ಇರಾನ್, ಚೀನಾ ಪಟ್ಟಿಗೆ ಭಾರತವನ್ನೂ ಸೇರಿಸಿದ ಕೆನಡಾ

India Canada relationship in deep threat: ಸರ್ಕಾರಿ ಪ್ರಾಯೋಜಿತ ಸೈಬರ್ ಯೋಜನೆಗಳ ಮೂಲಕ ಕೆನಡಾ ಸರ್ಕಾರಕ್ಕೆ ಅಪಾಯ ತರಬಲ್ಲ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಲಾಗಿದೆ. ಚೀನಾ, ರಷ್ಯಾ, ಉತ್ತರ ಕೊರಿಯಾ, ಇರಾನ್ ದೇಶಗಳ ಸಾಲಿಗೆ ಭಾರತವನ್ನೂ ನಿಲ್ಲಿಸಿದೆ ಕೆನಡಾ. ಕೆನಡಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬಳಸಿ ಭಾರತವು ಸೈಬರ್ ಅಪಾಯ ತರಬಹುದು ಎಂದು ಕೆನಡಾದ ವರದಿಯೊಂದು ಎಚ್ಚರಿಸಿದೆ.

ಭಾರತದ ಮೇಲೆ ಕೆನಡಾ ‘ವಕ್ರ’ ದೃಷ್ಟಿ; ಉತ್ತರಕೊರಿಯಾ, ಇರಾನ್, ಚೀನಾ ಪಟ್ಟಿಗೆ ಭಾರತವನ್ನೂ ಸೇರಿಸಿದ ಕೆನಡಾ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2024 | 12:22 PM

ಟೊರಾಂಟೋ, ಅಕ್ಟೋಬರ್ 31: ಭಾರತ ಮತ್ತು ಕೆನಡಾ ನಡುವಿನ ಭಿನ್ನಾಭಿಪ್ರಾಯ ಹೊಸ ಅತಿರೇಕ ಮಟ್ಟ ತಲುಪುತ್ತಿದೆ. ಕೆನಡಾ ದೇಶವು ಭಾರತವನ್ನು ಉತ್ತರಕೊರಿಯಾ, ಇರಾನ್, ಚೀನಾ, ರಷ್ಯಾ ದೇಶಗಳ ಪಟ್ಟಿಯೊಂದಕ್ಕೆ ಸೇರಿಸಿದೆ. ಕೆನಡಾದ ಸೈಬರ್ ಭದ್ರತೆಗೆ ಧಕ್ಕೆ ಒದಗಿಸುವ ದೇಶಗಳ ಪಟ್ಟಿ ಅದು. ಕೆನಡಾದ ಸೈಬರ್ ಸೆಕ್ಯೂರಿಟಿ ಸೆಂಟರ್​ನ ವಾರ್ಷಿಕ ವರದಿಯೊಂದರಲ್ಲಿ ಈ ಪಟ್ಟಿ ನೀಡಲಾಗಿದ್ದು ಇದರಲ್ಲಿ ಭಾರತದ ಹೆಸರು ಮೊದಲ ಬಾರಿಗೆ ನಮೂದಾಗಿದೆ. 2025-26ರ ವರ್ಷದಲ್ಲಿ ಸರ್ಕಾರಿ ಪ್ರಾಯೋಜಿತವಾಗಿಯೇ ಯಾವ್ಯಾವ ದೇಶಗಳು ಕೆನಡಾ ಭದ್ರತೆಗೆ ಅಪಾಯ ತರಬಹುದು ಎಂಬುದನ್ನು ಈ ವರದಿ ಹೇಳಿದೆ.

ಈ ವರದಿ ಪ್ರಕಾರ, ಕೆನಡಾಗೆ ಸರ್ಕಾರಿ ಪ್ರಾಯೋಜಿತ ಸೈಬರ್ ಅಪಾಯ ತರುವ ದೇಶಗಳೆಂದರೆ ಚೀನಾ, ರಷ್ಯಾ, ಇರಾನ್, ಉತ್ತರ ಕೊರಿಯಾ ಮತ್ತು ಭಾರತ. ಇದು ಭಾರತ ಮತ್ತು ಕೆನಡಾ ನಡುವಿನ ವಿವಾದ ಹೊಸ ಅತಿರೇಕ ಮಟ್ಟಕ್ಕೆ ಹೋಗುತ್ತಿರುವುದರ ದ್ಯೋತಕವಾಗಿದೆ.

ಬೇಹುಗಾರಿಕೆ ಉದ್ದೇಶದಲ್ಲಿ ಭಾರತದ ಸರ್ಕಾರಿ ಪ್ರಾಯೋಜಿತವಾಗಿ ಕೆನಡಾ ಸರ್ಕಾರದ ಜಾಲಗಳ ವಿರುದ್ಧ ಸೈಬರ್ ಅಪಾಯ ಎದುರಾಗಬಹುದು ಎಂಬುದು ತಮ್ಮ ಅಂದಾಜು. ಕೆನಡಾ ಮತ್ತು ಭಾರತದ ನಡುವೆ ಇರುವ ಅಧಿಕೃತ ದ್ವಿಪಕ್ಷೀಯ ಸಂಬಂಧವು ಈ ಸೈಬರ್ ಅಪಾಯಕಾರಿ ಚಟುವಟಿಕೆಯನ್ನು ಹೆಚ್ಚಿಸಬಹುದು ಎಂದೂ ಈ ವರದಿ ಎಚ್ಚರಿಸಿದೆ.

ಇದನ್ನೂ ಓದಿ: ಇಸ್ರೇಲ್​ನಿಂದ ಹಸನ್ ನಸ್ರಲ್ಲಾ ಹತ್ಯೆಯ ನಂತರ ಹಿಜ್ಬುಲ್ಲಾ ಹೊಸ ನಾಯಕನಾಗಿ ನೈಮ್ ಕಾಸ್ಸೆಮ್ ಆಯ್ಕೆ

‘ಜಾಗತಿಕ ವ್ಯವಸ್ಥೆಯೊಳಗೆ ಹೊಸ ಪವರ್ ಸೆಂಟರ್​ಗಳಾಗಲು ಬಯಸುವ ಭಾರತದಂತಹ ದೇಶಗಳು ಕೆನಡಾಗೆ ವಿವಿಧ ಸ್ತರಗಳಲ್ಲಿ ಅಪಾಯ ತರಬಲ್ಲ ಸೈಬರ್ ಯೋಜನೆಗಳನ್ನು ನಿರ್ಮಿಸುತ್ತಿವೆ,’ ಎಂದು ತಿಳಿಸಿದೆ.

ಚೀನಾದಿಂದ ಅತಿಹೆಚ್ಚು ಅಪಾಯ

ಕೆನಡಾಗೆ ಅತಿದೊಡ್ಡ ಸೈಬರ್ ಅಪಾಯ ಇರುವುದು ಚೀನಾದಿಂದ ಎಂದು ಕೆನಡಾದ ಸೈಬರ್ ಸೆಕ್ಯೂರಿಟಿ ಸೆಂಟರ್​ನ ಈ ವರದಿಯಲ್ಲಿ ಹೇಳಲಾಗಿದೆ. ಚೀನಾದ ಆಕ್ರಮಣಕಾರಿಯಾದ ಮತ್ತು ವ್ಯಾಪಕವಾದ ಸೈಬರ್ ಪ್ರೋಗ್ರಾಮ್​ನಿಂದ ಕೆನಡಾಗೆ ಅತಿದೊಡ್ಡ ಸೈಬರ್ ಅಪಾಯ ಇದೆ ಎಂದು ಇದು ಅಭಿಪ್ರಾಯಪಟ್ಟಿದೆ.

ಹಳಸಿದ ಭಾರತ ಕೆನಡಾ ಸಂಬಂಧ

ಜಸ್ಟಿನ್ ಟ್ರುಡೋ ಪ್ರಧಾನಿಯಾದಾಗಿನಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಂತ ಹಂತವಾಗಿ ಹಳಸುತ್ತಾ ಬಂದಿದೆ. ಟ್ರುಡೋ ಅವರು ಖಲಿಸ್ತಾನೀ ಪ್ರತ್ಯೇಕತಾವಾದಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವ ಆರೋಪ ಇದೆ. ಕೆನಡಾ ನೆಲದಲ್ಲಿ ಖಲಿಸ್ತಾನೀ ಪ್ರತ್ಯೇಕತಾವಾದಿಗಳು ಭಾರತ ವಿರೋಧಿ ಚಟುವಟಿಕೆ ನಡೆಸಿದರೂ ಅವರ ವಿರುದ್ಧ ಕೆನಡಾ ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಭಾರತ ಸರ್ಕಾರ ವಿರುದ್ಧ ನಡೆದ ರೈತ ಪ್ರತಿಭಟನೆಗಳಿಗೆ ಕೆನಡಾ ಸರ್ಕಾರ ಬೆಂಬಲ ನೀಡಿದ್ದು ಹಳಸುತ್ತಿದ್ದ ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದಂತಾಗಿತ್ತು.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಉಕ್ರೇನ್ ಅಧ್ಯಕ್ಷ

2023ರಲ್ಲಿ ಖಲಿಸ್ತಾನೀ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೆನಡಾ ನೆಲದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಂದಿದ್ದರು. ಈ ಪ್ರಕರಣದಲ್ಲಿ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸುತ್ತಲೆ ಬಂದಿದೆ. ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಹಾಗು ರಾಜತಾಂತ್ರಿಕ ಅಧಿಕಾರಿಗಳನ್ನು ನೇರವಾಗಿ ಹೆಸರಿಸಿತ್ತು ಕೆನಡಾ. ಇದಾದ ಬಳಿಕ ಭಾರತವು ಈ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತು. ಈ ಹಂತದಲ್ಲೇ ಕೆನಡಾ ದೇಶವು ಭಾರತವನ್ನು ಉತ್ತರಕೊರಿಯಾ, ಇರಾನ್​ನಂತಹ ದೇಶಗಳ ಪಟ್ಟಿಗೆ ಸೇರಿಸುವ ಕೆಲಸ ಮಾಡಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ