Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಉಕ್ರೇನ್ ಅಧ್ಯಕ್ಷ

ಇದು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ. ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಭಾರತಕ್ಕೆ ಮಾತ್ರ. ನಾವು ಈ ವಿಚಾರವಾಗಿ ಭಾರತದ ಎದುರು ನೋಡುತ್ತಿದ್ದೇವೆ. ಈಗಾಗಲೇ ಮೋದಿ ಭೇಟಿ ನೀಡಿದ ನಂತರ ಉಕ್ರೇನ್​​​ ಸಂಘರ್ಷ ಕಡಿಮೆಯಾಗಿದೆ. ಒಂದು ವೇಳೆ ಭಾರತ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧ ಮಾಡಿದರೆ, ಅದನ್ನು ದೆಹಲಿಯಲ್ಲಿ ಮಾಡಲಿ. ನಾನು ಸಿದ್ಧ ಎಂಬಂತೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಉಕ್ರೇನ್ ಅಧ್ಯಕ್ಷ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 28, 2024 | 1:45 PM

ಮತ್ತೊಮ್ಮೆ ಭಾರತದ ತಾಕತ್ತು ಏನು ಎಂಬ ಬಗ್ಗೆ ಸಾಬೀತು ಆಗಿದೆ. ಈ ಕೆಲಸ ಭಾರತದಿಂದ ಮಾತ್ರ ಸಾಧ್ಯ. ಈ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಎಂಬ ಮಾತುಗಳನ್ನಾಡಿದ ಉಕ್ರೇನ್​​​​, ಹೌದು ಭಾರತದಿಂದ ಈ ಯುದ್ಧವನ್ನು ಮುಕ್ತಾಯಗೊಳಿಸಲು ಸಾಧ್ಯ. ಭಾರತದ ಮಧ್ಯಸ್ಥಿಕೆಯಲ್ಲಿ ಇದನ್ನು ಮಾಡಬಹುದು ಎಂಬ ತಿರ್ಮಾನಕ್ಕೆ ಉಕ್ರೇನ್​​ ಬಂದಿದೆ. ಉಕ್ರೇನ್-ರಷ್ಯಾ ಸಂಘರ್ಷದ ಮುಕ್ತಾಯದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಮೋದಿ ಮಾತ್ರ ಮಾಡಲು ಸಾಧ್ಯ ಎಂದು ಉಕ್ರೇನ್​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಈ ಶಾಂತಿ ಮಾತುಕತೆಯಲ್ಲಿ ಭಾರತದ ಮಧ್ಯಸ್ಥಿತಿಕೆ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಈ ಶಾಂತಿ ಮಾತುಕತೆಯನ್ನು ದೆಹಲಿ ಮಾಡಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ಈ ಶಾಂತಿ ಮಾತುಕತೆಯ ಸ್ವರೂಪವು ಉಕ್ರೇನ್‌ನ ಚೌಕಟ್ಟಿನೊಂದಿಗೆ ಹೊಂದಿಕೆಯಾಗಬೇಕು ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ಭೇಟಿ ನಂತರ ಸಂಘರ್ಷ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಯುದ್ಧವು ನಮ್ಮ ಭೂಮಿಯಲ್ಲಿದೆ… ನಮಗೆ ವೇದಿಕೆ ಇದೆ, ಅದು ಶಾಂತಿ ಶೃಂಗಸಭೆಯಾಗಿದೆ. ಪ್ರಧಾನಿ ಮೋದಿ ಅವರು ಶಾಂತಿ ಮಾತುಕತೆಗೆ ವೇದಿಕೆ ಸಿದ್ಧ ಮಾಡಬೇಕಿದೆ. ಅದು ಅವರಿಂದ ಮಾತ್ರ ಸಾಧ್ಯ. ಈ ಮೂಲಕ ಯುದ್ಧಕ್ಕೆ ಅವರೇ ಕೊನೆ ಹಾಡಬೇಕು ಎಂದು ಹೇಳಿದರು. ಇದೀಗ ಈ ಹೇಳಿಕೆ ಎಲ್ಲ ಕಡೆ ವೈರಲ್​​ ಆಗುತ್ತಿದೆ. ಹಾಗೂ ಚರ್ಚೆಗೆ ವೇದಿಕೆಯಾಗಿ ನಿಂತಿದೆ ಎಂದು ಹೇಳಿದರು. ಇದರ ಜತೆಗೆ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆಗಳನ್ನು ಮೊಟಕುಗೊಳಿಸುವ ಆರ್ಥಿಕ ಮತ್ತು ಕಾರ್ಯತಂತ್ರದ ನಿರ್ಬಂಧಗಳ ಬಗ್ಗೆ ಗಮನಿಸಬೇಕು.

ಇದನ್ನೂ ಓದಿ: ಅಕ್ಟೋಬರ್​ ಹಿಂದೂ ಪರಂಪರೆ ತಿಂಗಳು, ಆಸ್ಟ್ರೇಲಿಯಾ ಘೋಷಣೆ

ಇನ್ನು ಮುಂದಿನ ದಿನಗಳಲ್ಲಿ ಉಕ್ರೇನ್​​ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ ಏಕೆಂದರೆ, ಚಳಿಗಾಲ ಶುರುವಾಗಿದೆ. ಈಗಾಗಲೇ ರಷ್ಯಾ ಈ ಸಮಸ್ಯೆಯನ್ನು ಕೂಡ ಎದುರಿಸುತ್ತಿದೆ. ಮೋದಿ ಭೇಟಿಯ ನಂತರ ರಷ್ಯಾ ಕೂಡ ತಟಸ್ಥ ನೀತಿಯನ್ನು ಕಾಪಾಡಿಕೊಳ್ಳುತ್ತಿದೆ. ಇದರ ಜತೆಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇದೆ. ಒಂದು ವೇಳೆ ಹೀಗಿನ ಸರ್ಕಾರ ಹೋಗಿ ಡೊನಾಲ್ಡ್ ಟ್ರಂಪ್ ನಾಯಕ್ವ ಬಂದರೆ ಉಕ್ರೇನ್​​ ದೊಡ್ಡ ಸಮಸ್ಯೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Mon, 28 October 24

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ