AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೀಮಾ ಬಲೂಚ್ ಹತ್ಯೆಯಾದಾಗ ಕೆನಡಾ ಯಾಕೆ ಮೌನವಹಿಸಿತ್ತು? ಮಾನವ ಹಕ್ಕು ಸಂಸ್ಥೆ ಪ್ರಶ್ನೆ; ಯಾರಿದು ಕರೀಮಾ?

Baloch Human Rights Activists: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಹರ್ದೀಪ್ ಸಿಂಗ್ ನಿಜ್ಜರ್​ರ ಹತ್ಯೆ ವಿರುದ್ಧ ಭಾಷಣ ಮತ್ತು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಲೂಚಿಸ್ತಾನದ ಮಾನವ ಹಕ್ಕು ಹೋರಾಟಗಾರ್ತಿಯಾಗಿದ್ದ ಕರೀಮಾ ಬಲೂಚ್ ಅವರ ಹತ್ಯೆ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೋ ಮೌನ ವಹಿಸಿದ್ದು ಅಚ್ಚರಿ ಎನಿಸುತ್ತದೆ. ಕೆನಡಿಯನ್ ಸರ್ಕಾರದ ವೈರುದ್ಧ್ಯತೆ ಇಲ್ಲಿ ಗೋಚರವಾಗುತ್ತದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯಿಂದ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ವಿಚಾರದಲ್ಲಿ ಕೆನಡಾ ನಿಲುವು ಕೂಡ ಪ್ರಶ್ನಾರ್ಹವಾಗಿದೆ ಎಂದು ಬಲೂಚಿಸ್ತಾನ್ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಡಾ. ಜಾಫರ್ ಜಾವೇದ್ ಹೇಳಿದ್ದಾರೆ.

ಕರೀಮಾ ಬಲೂಚ್ ಹತ್ಯೆಯಾದಾಗ ಕೆನಡಾ ಯಾಕೆ ಮೌನವಹಿಸಿತ್ತು? ಮಾನವ ಹಕ್ಕು ಸಂಸ್ಥೆ ಪ್ರಶ್ನೆ; ಯಾರಿದು ಕರೀಮಾ?
ಕರೀಮಾ ಬಲೂಚ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2023 | 4:43 PM

Share

ಒಟ್ಟಾವ, ಸೆಪ್ಟೆಂಬರ್ 24: ಖಲಿಸ್ತಾನೀ ಪ್ರತ್ಯೇಕತಾವಾದಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್​ನನ್ನು (Hardeep Singh Nijjar) ಸಿಖ್ ಗುರುದ್ವಾರದ ಬಳಿ ಹತ್ಯೆಗೈಯಲಾದ ಘಟನೆಯನ್ನು ಕೆನಡಾ ಗಂಭೀರವಾಗಿ ಪರಿಗಣಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ದೊಡ್ಡ ಧ್ವನಿ ಎತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆನಡಾದ ಬಲೂಚ್ ಮಾನವ ಹಕ್ಕು ಸಮಿತಿ (Baloch Human Rights Coucil of Canada), ಕರೀಮಾ ಬಲೂಚ್ ಹತ್ಯೆ ಘಟನೆಯನ್ನು ಪ್ರಸ್ತಾಪಿಸಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತ ವಿರುದ್ಧ ಕ್ರಮ ಕೈಗೊಂಡಿರುವ ಕೆನಡಾ, ಕರೀಮಾ ಬಲೂಚ್ ಹತ್ಯೆ ಘಟನೆಯಲ್ಲಿ ಪಾಕಿಸ್ತಾನದ ಮೇಲೆ ಯಾಕೆ ಯಾವ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿ ಮಾನವ ಹಕ್ಕು ಸಂಸ್ಥೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ಪತ್ರ ಬರೆದಿದೆ.

‘ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಹರ್ದೀಪ್ ಸಿಂಗ್ ನಿಜ್ಜರ್​ರ ಹತ್ಯೆ ವಿರುದ್ಧ ಭಾಷಣ ಮತ್ತು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಲೂಚಿಸ್ತಾನದ ಮಾನವ ಹಕ್ಕು ಹೋರಾಟಗಾರ್ತಿಯಾಗಿದ್ದ ಕರೀಮಾ ಬಲೂಚ್ ಅವರ ಹತ್ಯೆ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೋ ಮೌನ ವಹಿಸಿದ್ದು ಅಚ್ಚರಿ ಎನಿಸುತ್ತದೆ. ಕೆನಡಿಯನ್ ಸರ್ಕಾರದ ವೈರುದ್ಧ್ಯತೆ ಇಲ್ಲಿ ಗೋಚರವಾಗುತ್ತದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯಿಂದ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ವಿಚಾರದಲ್ಲಿ ಕೆನಡಾ ನಿಲುವು ಕೂಡ ಪ್ರಶ್ನಾರ್ಹವಾಗಿದೆ’ ಎಂದು ಬಲೂಚಿಸ್ತಾನ್ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಡಾ. ಜಾಫರ್ ಜಾವೇದ್ ಹೇಳಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಹತ್ಯೆಗೆ ಕರೆ; ಗುರುದ್ವಾರದ ಪೋಸ್ಟರ್ ತೆಗೆಯಲು ಆದೇಶ

ಯಾರಿದು ಕರೀಮಾ ಬಲೂಚ್?

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನ್ ದೇಶಕ್ಕಾಗಿ ಹೋರಾಟ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ಪಾಕಿಸ್ತಾನ ಸೇನೆ ಸಾಕಷ್ಟು ಸಂಖ್ಯೆಯಲ್ಲಿ ಬಲೂಚಿಸ್ತಾನದಲ್ಲಿ ನಿಯೋಜಿತವಾಗಿದೆ. ಅಲ್ಲಿ ಹೇರಳವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುತ್ತಿದ್ದವರಲ್ಲಿ ಕರೀಮಾ ಬಲೂಚ್ ಒಬ್ಬಳು. ಆಜಾದ್ ಎಂಬ ಬಲೂಚ್ ಸ್ಟುಡೆಂಟ್ಸ್ ಆರ್ಗನೈಸೇಶನ್​ನ ಅಧ್ಯಕ್ಷೆಯಾಗಿ ಅವರು ಕಾನೂನು ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದಳು.

ಬಲೂಚಿ ವ್ಯಕ್ತಿಗಳ ಕೊಲೆ, ನಾಪತ್ತೆ ಘಟನೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಕರೀಮಾ ಬಲೂಚ್ ಅವರೆಯೇ ನಿಗೂಢವಾಗಿ ನಾಪತ್ತೆಯಾಗಿದ್ದರು. ಪಾಕಿಸ್ತಾನದಿಂದ ಬಹಿಷ್ಕೃತಗೊಂಡು ಕೆನಡಾದ ಟೊರಂಟೋದಲ್ಲಿ ಇದ್ದ ಕರೀಮಾ ಬಲೂಚ್ 2020ರ ಡಿಸೆಂಬರ್ 20ರಂದು ನಾಪತ್ತೆಯಾಗಿದ್ದರು. ಒಂದು ದಿನದ ಬಳಿಕ ಲೇಕ್ ಒಂಟಾರಿಯೋ ಬಳಿ ಆಕೆಯ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಪ್ರಧಾನಿ ಟ್ರುಡೊ ಹೇಳಿಕೆಯ ಹಿಂದೆ ಗುಪ್ತಚರ: ಅಮೆರಿಕ ರಾಯಭಾರಿ

ಆಕೆಯನ್ನು ಕೊಲೆ ಮಾಡಲಾಗಿದ್ದು ಪಾಕಿಸ್ತಾನದ ಕೈವಾಡ ಇದ್ದಿರಬಹುದು ಎಂಬ ಅನುಮಾನಗಳಿದ್ದವು. ಆದರೆ, ಕೆನಡಾದ ಅಧಿಕಾರಿಗಳು ಈ ಘಟನೆಯಲ್ಲಿ ಅನುಮಾನ ಪಡುವಂಥದ್ದು ಏನೂ ಇಲ್ಲ ಎಂದು ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ