ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯೊಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದರು. ಟ್ರಾನ್ಸ್‌ಜೆಂಡರ್ ಆಗಿದ್ದ 18 ವರ್ಷದ ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಈ ಕೃತ್ಯ ಎಸಗಿದ್ದಳು. ಶಾಲೆಯ ಮೇಲೆ ದಾಳಿ ನಡೆಸುವ ಮುನ್ನ ತನ್ನ ತಾಯಿ ಹಾಗೂ ಸಹೋದರನನ್ನೂ ಆಕೆ ಕೊಂದಿದ್ದಳು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೂಟ್‌ಸೆಲಾರ್ ಕೆನಡಾದ ಇತಿಹಾಸದಲ್ಲೇ ಅತಿ ಕೆಟ್ಟ ಸಾಮೂಹಿಕ ಹತ್ಯಾಕಾಂಡಕ್ಕೆ ಕಾರಣವಾದಳು.

ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್
ಗುಂಡು ಹಾರಿಸಿದ ಮಂಗಳಮುಖಿ

Updated on: Feb 12, 2026 | 9:53 AM

ಒಟ್ಟಾವಾ, ಫೆಬ್ರವರಿ 12: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Firing) ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದು ಅವರೆಲ್ಲರ ಮೇಲೆ ಗುಂಡು ಹಾರಿಸಿದ್ದು ಓರ್ವ ಮಂಗಳಮುಖಿ ಎಂಬುದು ತಿಳಿದುಬಂದಿದೆ. ಅದಕ್ಕಿಂತಲೂ ಭಯಾನಕ ವಿಚಾರವೇನೆಂದರೆ ಆಕೆ ಶಾಲೆಯ ಮೇಲೆ ದಾಳಿ ನಡೆಸುವ ಮುನ್ನ ತನ್ನ ತಾಯಿ ಹಾಗೂ ತನ್ನ ಸಹೋದರನ ಮೇಲೆ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಂದಿದ್ದಳು.

ಆಕೆಗಿನ್ನೂ 18 ವರ್ಷ ವಯಸ್ಸು, ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಆಕೆಯ ಹೆಸರು ತಾನು ಓದಿದ ಶಾಲೆಯ ಮೇಲೆಯೇ ಗುಂಡು ಹಾರಿಸಿದ್ದಾಳೆ. ಆದರೆ ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಹತ್ಯಾಕಾಂಡ ಇದಾಗಿದ್ದು ಆದರೆ ಈ ಘಟನೆಗೆ ಕಾರಣವೇ ಇಲ್ಲ.

ಬ್ರಿಟಿಷ್ ಕೊಲಂಬಿಯಾದ ಪೆಸಿಫಿಕ್ ಪ್ರಾಂತ್ಯದ 2,400 ಜನರಿರುವ ದೂರದ ಸಮುದಾಯವಾದ ಟಂಬ್ಲರ್ ರಿಡ್ಜ್‌ನಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೂಟ್‌ಸೆಲಾರ್ ಒಬ್ಬ ಟ್ರಾನ್ಸ್‌ಜೆಂಡರ್ ಆಗಿದ್ದು, ಆಕೆ ಮೊದಲು ಗಂಡಾಗಿ ಜನಿಸಿ ಬಳಿಕ ಹೆಣ್ಣಾಗಿ ಬದಲಾಗಿದ್ದಳು. ನಾಲ್ಕು ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದಿದ್ದಳು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ಗುಂಡು ಹಾರಿಸಿದ ಮಹಿಳೆ ಈ ಹಿಂದೆ ಬಂದೂಕು ಪರವಾನಗಿಯನ್ನು ಹೊಂದಿದ್ದರು, ಆದರೆ ಅದು ಅವಧಿ ಮೀರಿತ್ತು ಮತ್ತು ಆಯುಧಗಳನ್ನು ಆಕೆಯ ನಿವಾಸದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು . ಆದರೆ ನಂತರ ಅವುಗಳನ್ನು ಹಿಂತಿರುಗಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ರೂಟ್‌ಸೆಲಾರ್‌ ಮಾನಸಿಕ ಅಸ್ವಸ್ಥತೆಯಿದ ಬಳಲುತ್ತಿದ್ದ ಕಾರಣ, ಪೊಲೀಸರು ಆಕೆಯ ಮನೆಗೆ ಹವು ಬಾರಿ ಭೇಟಿ ನೀಡಿ ವಿಚಾರಸುತ್ತಲೇ ಇದ್ದರು. ದಾಳಿ ನಡೆದ ಶಾಲೆಗೆ ಒಮ್ಮೆ ಅವರು ಹಾಜರಾಗಿದ್ದರು ಆದರೆ ನಾಲ್ಕು ವರ್ಷಗಳ ಹಿಂದೆ ಶಾಲೆಯನ್ನು ತೊರೆದಿದ್ದಳು. ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 24 ಜನರು ಗಾಯಗೊಂಡಿದ್ದರು.

ರೂಟ್‌ಸೆಲಾರ್ ಮೊದಲು ತನ್ನ ತಾಯಿ, 39, ಮತ್ತು 11 ವರ್ಷದ ಮಲಸಹೋದರನನ್ನು ಕುಟುಂಬದ ಮನೆಯಲ್ಲಿ ಕೊಂದಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಅವಳು ಓದುತ್ತಿದ್ದ ಹತ್ತಿರದ ಶಾಲೆಯ ಮೇಲೆ ದಾಳಿ ಮಾಡಿದ್ದಾಳೆ. ಈ ಹಂತದಲ್ಲಿ ಯಾರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದಳ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಉದ್ದನೆಯ ಬ್ಯಾರೆಲ್ ಗನ್ ಮತ್ತು ಪಿಸ್ತೂಲ್ ಹೊಂದಿದ್ದ ಶೂಟರ್, ಹತ್ಯಾಕಾಂಡದ ನಂತರ ತಾನೂ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟಿದ್ದಾಳೆ.

ಕುಟುಂಬದ ಮತ್ತೊಬ್ಬ ಸದಸ್ಯರು ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಮನೆಯಲ್ಲಿ ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

 

Published On - 9:48 am, Thu, 12 February 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us