ಮಹಿಳೆಯರ ಶೂ ವಾಸನೆ ನೋಡುವುದೇ ಈತನ ಚಟ, ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಕೃತ್ಯ

ಮಲೇಷ್ಯಾದ ಶಾ ಅಲಂನಲ್ಲಿ ಮಹಿಳೆಯರ ಶೂ ವಾಸನೆ ನೋಡುವ ವ್ಯಕ್ತಿಯ ವಿಚಿತ್ರ ಚಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಓರ್ವ ಯುವತಿಯ ಶೂಗಳನ್ನು ತೆಗೆದು ವಾಸನೆ ನೋಡುತ್ತಾ, ವೀಡಿಯೋ ಮಾಡುತ್ತಿದ್ದ ಈತ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಇದನ್ನು 'ಫೆಟಿಷಿಸಂ' ಎನ್ನಲಾಗಿದ್ದು, ಮಲೇಷ್ಯಾದ ಹೊಸ ಸ್ಟಾಕಿಂಗ್ ಕಾಯ್ದೆಯಡಿ (ಸೆಕ್ಷನ್ 507ಎ) ಮೂರು ವರ್ಷ ಜೈಲು ಶಿಕ್ಷೆ ಎದುರಿಸುವ ಸಾಧ್ಯತೆಯಿದೆ. ಮಹಿಳೆಯರ ಸುರಕ್ಷತೆ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ಮಹಿಳೆಯರ ಶೂ ವಾಸನೆ ನೋಡುವುದೇ ಈತನ ಚಟ, ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಕೃತ್ಯ
ಶೂ ವಾಸನೆ ನೋಡುತ್ತಿರುವ ಯುವಕ

Updated on: Aug 07, 2026 | 11:50 AM

ಶಾ ಆಲಂ, ಆಗಸ್ಟ್​ 07: ಕಾಲೇಜು ವಿದ್ಯಾರ್ಥಿನಿ(Student)ಯೊಬ್ಬಳು ಕಳೆದ ಕೆಲವು ತಿಂಗಳುಗಳಿಂದ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ, ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂಬ ಭೀತಿಯಲ್ಲಿದ್ದಳು. ಆದರೆ, ತನ್ನ ಮನೆಯ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆಗೆ ಎದುರಾದ ಸತ್ಯ ಆಘಾತಕಾರಿ ಮಾತ್ರವಲ್ಲ, ಅತ್ಯಂತ ವಿಚಿತ್ರವಾಗಿತ್ತು.

ಯುವಕನೊಬ್ಬ ಅಪಾರ್ಟ್‌ಮೆಂಟ್ ಗ್ರಿಲ್ ಮೂಲಕ ಕೈಹಾಕಿ, ಆಕೆಯ ಶೂಗಳನ್ನು (Shoes) ಹೊರತೆಗೆದು ವಾಸನೆ ನೋಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಮಲೇಷ್ಯಾದ ಶಾ ಅಲಂನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನಸಿಕ ವೈಪರೀತ್ಯ ಮತ್ತು ಸೈಬರ್ ಅಪರಾಧದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ವಿಶ್ವವಿದ್ಯಾನಿಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಏಪ್ರಿಲ್ ತಿಂಗಳಿನಿಂದ ತನಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ನಂಬಿದ್ದಳು.

ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಪ್ಪು ಟಿ-ಶರ್ಟ್ ಧರಿಸಿದ್ದ ಯುವಕನೊಬ್ಬ ಬಂದು, ಶೂಗಳನ್ನು ಹಿಡಿದು ವಾಸನೆ ನೋಡುವ ದೃಶ್ಯ ವೈರಲ್ ಆಗಿದೆ. ಆತ ಅದೇ ವಿಶ್ವವಿದ್ಯಾನಿಲಯದ 20 ರಿಂದ 25 ವರ್ಷ ವಯಸ್ಸಿನ ಸಹ-ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಆರೋಪಿ ಕೇವಲ ಶೂ ಮೂಸಿನೋಡುವುದಷ್ಟೇ ಅಲ್ಲದೆ, ಆ ದೃಶ್ಯಗಳನ್ನು ಸ್ವತಃ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದದ್ದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿತು.

ಮತ್ತಷ್ಟು ಓದಿ: ಅಪ್ಪನ ಚಿತೆ ಉರಿಯುತ್ತಿದ್ದಾಗ ಇನ್ನೂ ಎಷ್ಟು ಟೈಮ್ ಬೇಕೆಂದು ವಿಡಿಯೋ ಕಾಲ್​ನಲ್ಲಿ ಕೇಳಿದ ಮಗಳು

ಶಾ ಅಲಂ ಪೊಲೀಸ್ ಅಧಿಕಾರಿ ಸರುದಿನ್ ಸಮಾಹ್ ಪ್ರಕಾರ, ಬಂಧಿತ ಯುವಕನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಹಾಗೂ ಕೃತ್ಯ ಎಸಗುವಾಗ ಆತ ಮದ್ಯ ಸೇವಿಸಿರಲಿಲ್ಲ. ಈ ರೀತಿಯ ವಿಚಿತ್ರ ನಡವಳಿಕೆಗಳು ಮಾನಸಿಕವಾಗಿ ‘ಫೆಟಿಷಿಸಂ’ ಆಗಿರಬಹುದು ಎಂದು ತಜ್ಞರು ಹೇಳಿದ್ದಾಗಿ ತಿಳಿಸಿದ್ದಾರೆ.

ಮಲೇಷ್ಯಾದಲ್ಲಿ ಮೇ 2023 ರಿಂದ ಅನುಷ್ಠಾನಕ್ಕೆ ಬಂದಿರುವ ‘ಸೆಕ್ಷನ್507 ಎ’ ಅಡಿಯಲ್ಲಿ, ಅನುಮತಿಯಿಲ್ಲದೆ ಯಾರನ್ನಾದರೂ ಹಿಂಬಾಲಿಸುವುದು , ಕಿರುಕುಳ ನೀಡುವುದು ಅಥವಾ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವುದು ಗಂಭೀರ ಅಪರಾಧ. ಈ ಕಾಯ್ದೆಯಡಿ ತಪ್ಪಿತಸ್ಥರೆಂದು ಸಾಬೀತಾದರೆ ಆರೋಪಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

ವಿದ್ಯಾರ್ಥಿಗಳ ಸುರಕ್ಷತೆ: ಈ ಘಟನೆಯ ನಂತರ ವಿಶ್ವವಿದ್ಯಾನಿಲಯದ ಆವರಣ ಮತ್ತು ಹಾಸ್ಟೆಲ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕಾವಲು ಹೆಚ್ಚಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಇಂಟರ್ನೆಟ್‌ನಲ್ಲಿ ಈ ವೀಡಿಯೊ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ವೈಯಕ್ತಿಕ ವಸ್ತುಗಳನ್ನು ಮುಟ್ಟುವುದು ಮತ್ತು ಖಾಸಗಿತನವನ್ನು ಹಾಳು ಮಾಡುವುದು ಮಾನಸಿಕ ಕಿರುಕುಳದ ಭಾಗವಾಗಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us