
ಬೀಜಿಂಗ್, ಆಗಸ್ಟ್ 30: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ(Flood)ದ ಬೆನ್ನಲ್ಲೇ, ನೈಋತ್ಯ ಚೀನಾದ ಕ್ಸಿಜಾಂಗ್ (ಟಿಬೆಟ್) ಸ್ವಾಯತ್ತ ಪ್ರದೇಶದ ಚೀನಾ-ನೇಪಾಳ ಗಡಿಯಲ್ಲಿರುವ ಗೈರಾಂಗ್ ಭೂ ಬಂದರು ಪ್ರದೇಶದಲ್ಲಿ ಸಂಭವಿಸಿದ ಭಾರಿ ಭೂಕುಸಿತ ಮತ್ತು ಹಿಮಕುಸಿತಕ್ಕೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 546 ಜನರು ನಾಪತ್ತೆಯಾಗಿದ್ದಾರೆ. ಪತ್ತೆಯಾಗದವರಲ್ಲಿ ಭಾರತ, ನೇಪಾಳ, ಅಮೆರಿಕ, ಬ್ರಿಟನ್ ಸೇರಿದಂತೆ 23 ದೇಶಗಳ ಒಟ್ಟು 261 ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂದು ಚೀನಾದ ಪ್ರಾದೇಶಿಕ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಭಾರತೀಯರ ವಿವರ: ಭಾರತದ 49 ಯಾತ್ರಿಕರು ನಾಪತ್ತೆಯಾಗಿದ್ದಾರೆ. ನೇಪಾಳ (104), ಲಾಟ್ವಿಯಾ (33), ಅಮೆರಿಕ (18), ಬ್ರಿಟನ್ (15), ಆಸ್ಟ್ರೇಲಿಯಾ (6), ಕೆನಡಾ (6), ದಕ್ಷಿಣ ಆಫ್ರಿಕಾ (4), ಜರ್ಮನಿ (3), ರಷ್ಯಾ (3), ಮಲೇಷ್ಯಾ (3), ಫ್ರಾನ್ಸ್ (2), ನೆದರ್‌ಲ್ಯಾಂಡ್ಸ್ (2), ನ್ಯೂಜಿಲೆಂಡ್ (2), ಐರ್ಲೆಂಡ್ (2), ಎಸ್ಟೋನಿಯಾ (2) ಹಾಗೂ ಸ್ಪೇನ್, ಪೋರ್ಚುಗಲ್, ಉಕ್ರೇನ್, ಫಿನ್‌ಲ್ಯಾಂಡ್, ಹಂಗೇರಿ, ಕಜಕಿಸ್ತಾನ್, ಲಿಥುವೇನಿಯಾದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ.
24 ಗಂಟೆಗಳ ತುರ್ತು ಹಾಟ್‌ಲೈನ್: ಸಂತ್ರಸ್ತರ ಕುಟುಂಬಗಳ ಸಂಪರ್ಕಕ್ಕಾಗಿ ಚೀನಾ ಸರ್ಕಾರ ಎರಡು ಇಂಗ್ಲಿಷ್ ಸಹಾಯವಾಣಿಗಳನ್ನು ಆರಂಭಿಸಿದೆ: 0086-891-6817165 ಮತ್ತು 0086-18308026705.
ಅಧ್ಯಕ್ಷ ಷಿ ಜಿನ್‌ಪಿಂಗ್ ತುರ್ತು ಸಭೆ , ಪ್ರಧಾನಿ ಲಿ ಕಿಯಾಂಗ್ ಭೇಟಿ
ಉನ್ನತ ಮಟ್ಟದ ಸಮಿತಿ ಸಭೆ: ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಚೀನಾ ಕಮ್ಯುನಿಸ್ಟ್ ಪಕ್ಷದ ಪೊಲಿಟ್‌ಬ್ಯೂರೋ ಸಭೆಯ ಅಧ್ಯಕ್ಷತೆ ವಹಿಸಿದ್ದ ಷಿ ಜಿನ್‌ಪಿಂಗ್, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಆದೇಶಿಸಿದರು. ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರು ಗೈರಾಂಗ್ ಕೌಂಟಿಗೆ ಖುದ್ದು ಭೇಟಿ ನೀಡಿ ಪರಿಹಾರ ಮತ್ತು ಸುರಕ್ಷತಾ ಕಾರ್ಯಗಳ ನೇತೃತ್ವ ವಹಿಸಿದ್ದಾರೆ.
ಮತ್ತಷ್ಟು ಓದಿ: ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರಿಗೆ ಶೋಕ ಸಂದೇಶ ಕಳುಹಿಸಿರುವ ಷಿ ಜಿನ್‌ಪಿಂಗ್, ಗಡಿಯಾಚೆಗಿನ ರಕ್ಷಣಾ ಕಾರ್ಯಾಚರಣೆ ಹಾಗೂ ತುರ್ತು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಕೈಲಾಸ-ಮಾನಸ ಸರೋವರ ಕಾರಿಡಾರ್: ಗೈರಾಂಗ್ ಗಡಿ ಮಾರ್ಗವು ನೇಪಾಳ ಮತ್ತು ಟಿಬೆಟ್ ನಡುವಿನ ಪ್ರಮುಖ ವ್ಯಾಪಾರ ಹಾಗೂ ಕೈಲಾಸ-ಮಾನಸ ಸರೋವರ ಯಾತ್ರೆಯ ಸಂಪರ್ಕ ಕೊಂಡಿಯಾಗಿದೆ. ದುರಂತದ ಸಮಯದಲ್ಲಿ ನೂರಾರು ವಿದೇಶಿ ಯಾತ್ರಿಕರು ಮತ್ತು ಪ್ರವಾಸಿಗರು ಈ ಮಾರ್ಗದಲ್ಲಿ ಚಲಿಸುತ್ತಿದ್ದರು.
ವಿಡಿಯೋ
चीन के शिज़ांग में भारी भूस्खलन से नेशनल हाईवे पूरी तरह मलबे में दब गया था। हाईवे को जल्द से जल्द साफ करने के लिए युद्धस्तर पर काम जारी है।
कुदरत के आगे सब बेबस… #China #Xizang #Tibet #Mudslide #Landslide #NaturalDisaster #BreakingNews #RoadBlocked pic.twitter.com/LiR4geoyFs
— Neeraj Raathi (@neeraj_raathi) August 30, 2026
ಎರಡನೇ ವಿಪತ್ತುಗಳ ಭೀತಿ: ಕಡಿದಾದ ಕಣಿವೆಗಳು, ತೀವ್ರ ಚಳಿ ಮತ್ತು ಹಿಮ ಸರೋವರಗಳ ಅಸ್ಥಿರತೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಭಾರಿ ಸವಾಲು ಎದುರಾಗಿದೆ. ಹೊಸ ಕೃತಕ ಸರೋವರಗಳು ಒಡೆಯುವ ಸಾಧ್ಯತೆಯಿರುವುದರಿಂದ ಸ್ಥಳದಲ್ಲಿದ್ದ ತುರ್ತು ರಕ್ಷಣಾ ತಂಡಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ