AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Plane Crash: ಚೀನಾ ಭೀಕರ ವಿಮಾನ ಅಪಘಾತ; ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಚೀನಾ

ಚೀನಾದಲ್ಲಿ ನಡೆದ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದರು. 132 ಜನರಿದ್ದ MU5735 ವಿಮಾನ ಪತನಗೊಂಡ ಸುದ್ದಿ ಕೇಳಿ ತೀವ್ರ ಶಾಕ್​ ಆಯಿತು ಮತ್ತು ನೋವಾಯಿತು ಎಂದು ಹೇಳಿದ್ದರು.

China Plane Crash: ಚೀನಾ ಭೀಕರ ವಿಮಾನ ಅಪಘಾತ; ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಚೀನಾ
ಚೀನಾ ರಾಯಭಾರಿ
TV9 Web
| Updated By: Lakshmi Hegde|

Updated on: Mar 22, 2022 | 4:22 PM

Share

ದೆಹಲಿ: ಚೀನಾದಲ್ಲಿ ನಿನ್ನೆ 132 ಪ್ರಯಾಣಿಕರು ಇದ್ದ ಬೋಯಿಂಗ್​ 737 ವಿಮಾನ ಪತನಗೊಂಡು (China Plane Crash) ಎಲ್ಲ ಪ್ರಯಾಣಿಕರೂ ಮೃತಪಟ್ಟಿದ್ದು, ಇತ್ತೀಚಿಗಿನ ಭೀಕರ ವಿಮಾನ ಅಪಘಾತಗಳಲ್ಲಿ ಒಂದು. ಕುನ್ಮಿಂಗ್​ ನಗರದಿಂದ ಗುವಾಂಗ್​ಝೌಗೆ ತೆರಳುತ್ತಿದ್ದ ವಿಮಾನ ಗುವಾಂಗ್ಸ್ಕಿ ಪ್ರದೇಶದ ವುಝೌ ಬಳಿ, ಪರ್ವತ ಪ್ರದೇಶದಲ್ಲಿ ವಾಯುಗಾಮಿ ಸಂಪರ್ಕ ಕಳೆದುಕೊಂಡು ಅದೇ ಜಾಗದಲ್ಲಿಯೇ ಅಪಘಾತಕ್ಕೀಡಾಗಿತ್ತು. ಅತ್ಯಂತ ವೇಗವಾಗಿ ಕೆಳಗೆ ಬಿದ್ದು, ಪರ್ವತಕ್ಕೆ ಅಪ್ಪಳಿಸಿದ ವಿಮಾನದಿಂದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ವಿಮಾನದ ಭಾಗಗಳಂತೂ ಚೂರುಚೂರಾಗಿ ಬಿದ್ದಿವೆ. 

ಚೀನಾದಲ್ಲಿ ನಡೆದ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದರು. 132 ಜನರಿದ್ದ MU5735 ವಿಮಾನ ಪತನಗೊಂಡ ಸುದ್ದಿ ಕೇಳಿ ತೀವ್ರ ಶಾಕ್​ ಆಯಿತು ಮತ್ತು ನೋವಾಯಿತು. ಅದರಲ್ಲಿದ್ದ ಪ್ರಯಾಣಿಕರ ಸ್ಥಿತಿ ಗೊತ್ತಿಲ್ಲ, ಅವರು ಬದುಕಿ ಬರಲಿ. ಏನೇ ಪರಿಸ್ಥಿತಿ ಎದುರಾದರೂ ಅದನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಈ ಟ್ವೀಟ್​ಗೆ ಭಾರತದಲ್ಲಿರುವ ಚೀನಾ ರಾಯಭಾರಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಸನ್​ ವೈಡಾಂಗ್​, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ನೋವು ವ್ಯಕ್ತಪಡಿಸಿ, ಸುರಕ್ಷತೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆಗಳು. ವಿಮಾನ ಅಪಘಾತದ ತನಿಖೆಗೆ ಚೀನಾ ಅಧ್ಯಕ್ಷರು ಆದೇಶಿಸಿದ್ದಾರೆ. ಆದರೆ ಯಾವುದೇ ಪ್ರಯಾಣಿಕರೂ ಬದುಕುಳಿದ ನಿರೀಕ್ಷೆಯಿಲ್ಲ. ಅವರ ಕುಟುಂಬಗಳಿಗೆ ನಮ್ಮ ಸಾಂತ್ವನಗಳು ಎಂದಿದ್ದಾರೆ.

ಭೀಕರ ವಿಮಾನ ಅಪಘಾತದ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನೋವು ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಎಂದು ಹೇಳಿರುವ ಅವರು ತನಿಖೆಗೆ ಆದೇಶಿಸಿದ್ದಾರೆ.  ಇನ್ನು ದುರಂತ ನಡೆದ ಬೆನ್ನಲ್ಲೇ ಚೀನಾ ಈಸ್ಟರ್ನ್​ ಏರ್​ಲೈನ್ಸ್​ ಸಂಸ್ಥೆ ತನ್ನ ವೆಬ್​ಸೈಟ್​​ನ್ನು ಕಪ್ಪು-ಬಿಳುಪಿನ ಬಣ್ಣಕ್ಕೆ ಬದಲಿಸಿ, ಶೋಕ ವ್ಯಕ್ತಪಡಿಸಿದೆ.  ಚೀನಾ ಈಸ್ಟರ್ನ್​ ಏರ್​ಲೈನ್ಸ್​ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಇದರ ವಿಮಾನಸೇವೆ ಇದೆ.

ಇದನ್ನೂ ಓದಿ: ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ