ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣವನ್ನು ಭಾರತ ತಿರಸ್ಕರಿಸಿದ ಬೆನ್ನಲ್ಲೇ ಮತ್ತಷ್ಟು ಹಕ್ಕು ಸಾಧಿಸಿದ ಚೀನಾ
ಕೌನ್ಸಿಲ್ನ ಭೌಗೋಳಿಕ ಹೆಸರುಗಳ ಆಡಳಿತದ ಸಂಬಂಧಿತ ಷರತ್ತುಗಳಿಗೆ ಅನುಗುಣವಾಗಿ, ಚೀನಾ ಸರ್ಕಾರದ ಸಮರ್ಥ ಅಧಿಕಾರಿಗಳು ಜಂಗ್ನಾನ್‌ನ ಕೆಲವು ಭಾಗಗಳ ಹೆಸರುಗಳನ್ನು ಪ್ರಮಾಣೀಕರಿಸಿದ್ದಾರೆ ಎಂದ ಚೀನಾ
ಬೀಜಿಂಗ್: ಅರುಣಾಚಲ ಪ್ರದೇಶದ (Arunachal Pradesh) ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ (China) ಪ್ರಯತ್ನವನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದ ನಂತರ, ಬೀಜಿಂಗ್ ಮಂಗಳವಾರ ಈ ಪ್ರದೇಶದ ಮೇಲೆ ತನ್ನ ಹಕ್ಕು ಇದೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ (Mao Ning), ಝಂಗ್ನಾನ್ (ಅರುಣಾಚಲ ಪ್ರದೇಶ) ಚೀನಾದ ಭೂಪ್ರದೇಶದ ಭಾಗವಾಗಿದೆ. ರಾಜ್ಯ ಕೌನ್ಸಿಲ್ನ ಭೌಗೋಳಿಕ ಹೆಸರುಗಳ ಆಡಳಿತದ ಸಂಬಂಧಿತ ಷರತ್ತುಗಳಿಗೆ ಅನುಗುಣವಾಗಿ, ಚೀನಾ ಸರ್ಕಾರದ ಸಮರ್ಥ ಅಧಿಕಾರಿಗಳು ಜಂಗ್ನಾನ್‌ನ ಕೆಲವು ಭಾಗಗಳ ಹೆಸರುಗಳನ್ನು ಪ್ರಮಾಣೀಕರಿಸಿದ್ದಾರೆ. ಇದು ಚೀನಾದ ಸಾರ್ವಭೌಮ ಹಕ್ಕುಗಳಲ್ಲಿದೆ ಎಂದಿದ್ದಾರೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ,ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದ್ದಾರೆ.
ಆವಿಷ್ಕಾರ ಮಾಡುವ ಹೆಸರಿನಿಂದಾಗಿ ನಿಜಸ್ಥಿತಿ ಬದಲಾಗುವುದಿಲ್ಲ ಎಂದು ಭಾರತ ಪ್ರತಿಕ್ರಿಯಿಸಿದ್ದು,ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಯಾವತ್ತಿಗೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ಈ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಏತನ್ಮಧ್ಯೆ, ಪ್ರದೇಶಗಳನ್ನು ಮರುನಾಮಕರಣ ಮಾಡುವ ಮೂಲಕ ಅರುಣಾಚಲ ಪ್ರದೇಶದ ಭಾರತೀಯ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ ಪ್ರಯತ್ನಗಳನ್ನು ಅಮೆರಿಕ ತೀವ್ರವಾಗಿ ವಿರೋಧಿಸುತ್ತದೆ ಶ್ವೇತಭವನ ಮಂಗಳವಾರ ತಿಳಿಸಿದೆ.
ಸ್ಟೇಟ್ ಕೌನ್ಸಿಲ್, ಚೀನಾ ಕ್ಯಾಬಿನೆಟ್ ಹೊರಡಿಸಿದ ಭೌಗೋಳಿಕ ಹೆಸರುಗಳ ನಿಯಮಗಳ ಪ್ರಕಾರ ಚೀನಾ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಚೀನಾದ ಲಿಪಿ, ಟಿಬೆಟಿಯನ್ ಮತ್ತು ಪಿನ್ಯಿನ್‌ಗಳಲ್ಲಿ ಬಿಡುಗಡೆ ಮಾಡಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: Supreme Court: ಕೇಂದ್ರ ಸರ್ಕಾರ ತನಿಖೆ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ, ವಿರೋಧ ಪಕ್ಷಗಳ ಅರ್ಜಿ ನಿರಾಕರಿಸಿದ ಸುಪ್ರೀಂ
ಸಚಿವಾಲಯವು ಭಾನುವಾರ 11 ಸ್ಥಳಗಳ ಹೆಸರನ್ನು ಘೋಷಿಸಿತು. ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು, ಎರಡು ನದಿಗಳು ಮತ್ತು ಇತರ ಎರಡು ಪ್ರದೇಶಗಳನ್ನು ಒಳಗೊಂಡಂತೆ ನಿಖರವಾದ ನಿರ್ದೇಶಾಂಕಗಳನ್ನು ಸಹ ನೀಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಸುದ್ದಿ ವರದಿಯ ಪ್ರಕಾರ ಸ್ಥಳಗಳ ಹೆಸರುಗಳು ಮತ್ತು ಅವುಗಳ ಅಧೀನ ಆಡಳಿತ ಜಿಲ್ಲೆಗಳ ವರ್ಗವನ್ನು ಸಹ ಪಟ್ಟಿ ಮಾಡಿದೆ. ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಇದು ಅರುಣಾಚಲ ಪ್ರದೇಶದಲ್ಲಿ ಸಚಿವಾಲಯವು ಘೋಷಿಸಿದ ಭೌಗೋಳಿಕ ಹೆಸರುಗಳ ಮೂರನೇ ಬ್ಯಾಚ್ ಆಗಿದೆ. ಸುದ್ದಿ ವರದಿಯ ಪ್ರಕಾರ, ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಬ್ಯಾಚ್ ಅನ್ನು 2017 ರಲ್ಲಿ ನೀಡಲಾಯಿತು ಮತ್ತು ಎರಡನೇ ಬ್ಯಾಚ್ 15 ಸ್ಥಳಗಳನ್ನು 2021 ರಲ್ಲಿ ಬಿಡುಗಡೆ ಮಾಡಲಾಯಿತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ