
ವಾಷಿಂಗ್ಟನ್ ಡಿಸಿ, (ಮಾರ್ಚ್ 14): ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 13ರಂದು ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಟ್ರಂಪ್ ಅವರನ್ನು ಭೇಟಿಯಾದ ನಾಲ್ಕನೇ ವಿದೇಶಿ ನಾಯಕ ಇವರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮನ್ನು ಭೇಟಿ ಮಾಡಿದ ಇತರ ವಿಶ್ವ ನಾಯಕರು ವಾಷಿಂಗ್ಟನ್ ಡಿಸಿಯಲ್ಲಿನ ಫೆಡರಲ್ ಕಟ್ಟಡಗಳ ಬಳಿ ಇರುವ ಟೆಂಟ್‌ಗಳು ಮತ್ತು ಗೋಡೆಬರಹಗಳನ್ನು ನೋಡುವುದು ನನಗೆ ಇಷ್ಟವಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗೇ, ಅಮೆರಿಕದ ರಾಜಧಾನಿಯನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದಾರೆ.
“ನಾವು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಮ್ಮಲ್ಲಿ ಅಪರಾಧ ನಡೆಯುವುದಿಲ್ಲ ಮತ್ತು ನಾವು ಅಪರಾಧವನ್ನು ಬೆಂಬಲಿಸುವುದಿಲ್ಲ. ನಾವು ಗೋಡೆಗಳ ಮೇಲಿನ ಬರಹವನ್ನು ತೆಗೆದುಹಾಕಲಿದ್ದೇವೆ ಮತ್ತು ನಾವು ಈಗಾಗಲೇ ಟೆಂಟ್ ಗಳನ್ನು ತೆಗೆದುಹಾಕುತ್ತಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಇಲ್ಲಿಯವರೆಗೆ ವಾಷಿಂಗ್ಟನ್ ಡಿಸಿಯ ಮೇಯರ್ ಮುರಿಯಲ್ ಬೌಸರ್ ರಾಜಧಾನಿಯನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.
ಇದನ್ನೂ ಓದಿ: Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್ ಟ್ರಂಪ್
“ಭಾರತದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷರು ಮುಂತಾದ ಜಾಗತಿಕ ನಾಯಕರು ನನ್ನನ್ನು ನೋಡಲು ಬಂದರು. ಅವರು ಒಳಗೆ ಬಂದಾಗ ನಾನು ರೂಟ್ ರನ್ ಮಾಡಿದ್ದೆ. ಅವರು ಟೆಂಟ್ ಗಳನ್ನು ನೋಡುವುದು ನನಗೆ ಇಷ್ಟವಿರಲಿಲ್ಲ. “ಅವರು ಗೋಡೆಬರಹವನ್ನು ನೋಡಬೇಕೆಂದು ನಾನು ಬಯಸಲಿಲ್ಲ. ರಸ್ತೆಗಳಲ್ಲಿನ ಮುರಿದ ತಡೆಗೋಡೆಗಳು ಮತ್ತು ಗುಂಡಿಗಳನ್ನು ಅವರು ನೋಡುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ, ನಾವು ಅದನ್ನು ಸುಂದರವಾಗಿ ಕಾಣುವಂತೆ ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.
US President Donald Trump says he ordered Washington, DC, to be cleaned to prevent Prime Minister @narendramodi from seeing tents, graffiti and potholes during his visit! pic.twitter.com/TDMAx3Jyfx
— Kanchan Gupta 🇮🇳 (@KanchanGupta) March 15, 2025
ಇದನ್ನೂ ಓದಿ: Putin Thanks PM Modi: ಪ್ರಧಾನಿ ಮೋದಿ, ಟ್ರಂಪ್ಗೆ ಧನ್ಯವಾದ ತಿಳಿಸಿದ ಪುಟಿನ್, ಉಕ್ರೇನ್ ಯುದ್ಧದ ಬಗ್ಗೆ ನಿಲುವೇನು?
ಟ್ರಂಪ್ ಶ್ವೇತಭವನದಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 1 ತಿಂಗಳೊಳಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪಿಎಂ ಮೋದಿ, ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ II ಅಮೆರಿಕಕ್ಕೆ ಭೇಟಿ ನೀಡಿದ್ದರು. ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಇಲ್ಲಿಯವರೆಗೆ ಆತಿಥ್ಯ ವಹಿಸಿರುವ ಇತರ ವಿದೇಶಿ ನಾಯಕರಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಕೂಡ ಸೇರಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ