Putin Thanks PM Modi: ಪ್ರಧಾನಿ ಮೋದಿ, ಟ್ರಂಪ್ಗೆ ಧನ್ಯವಾದ ತಿಳಿಸಿದ ಪುಟಿನ್, ಉಕ್ರೇನ್ ಯುದ್ಧದ ಬಗ್ಗೆ ನಿಲುವೇನು?
ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಷ್ಟ್ರ ನಾಯಕರಿಗೆ ಧನ್ಯವಾದ ಅರ್ಪಿಸಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಇಡೀ ಜಗತ್ತು ತೊಡಗಿಸಿಕೊಂಡಿದೆ. ಏತನ್ಮಧ್ಯೆ, ಗುರುವಾರ ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಜಾಗತಿಕ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಕೈವ್, ಮಾರ್ಚ್ 14: ಉಕ್ರೇನ್-ರಷ್ಯಾ ಯುದ್ಧ ನಡೆದು ಮೂರು ವರ್ಷಗಳಿಗೂ ಹೆಚ್ಚು ಸಮಯ ಕಳೆದಿದೆ. ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಿದ ನಂತರ ಈ ಸಂಘರ್ಷವನ್ನು ಪರಿಹರಿಸುವ ಪ್ರಯತ್ನಗಳು ತೀವ್ರಗೊಂಡಿವೆ ಮತ್ತು ಶೀಘ್ರದಲ್ಲೇ ಕದನ ವಿರಾಮಕ್ಕೆ ಒಪ್ಪಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಕದನ ವಿರಾಮ ಮಾತುಕತೆಗಳಲ್ಲಿ ಭಾರತದ ಪ್ರಧಾನಿ ಮೋದಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ಅಲ್ಲಗಲೆಯುವಂತಿಲ್ಲ. ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ಅಮೆರಿಕದ ಪ್ರಸ್ತಾಪಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದರು.
ಯಾವುದೇ ಷರತ್ತುಗಳಿಲ್ಲದೆ ಕದನ ವಿರಾಮ ಪ್ರಸ್ತಾವನೆಗೆ ರಷ್ಯಾ ಒಪ್ಪಿಕೊಳ್ಳಬೇಕೆಂದು ಅಮೆರಿಕ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ. ಕೀವ್‌ನ ಕದನ ವಿರಾಮ ಪ್ರಸ್ತಾಪದ ಕುರಿತು ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್-ರಷ್ಯಾ ಸಂಘರ್ಷವನ್ನು ಪರಿಹರಿಸಲು ಮಾಡಿದ ಪ್ರಯತ್ನಗಳಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಸೇರಿದಂತೆ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು.
ಗುರುವಾರ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗಿನ ಜಂಟಿ ಸಭೆಯಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾಪಗಳನ್ನು ರಷ್ಯಾ ಒಪ್ಪುತ್ತದೆ, ಆದರೆ ಈ ನಿಲುಗಡೆ ದೀರ್ಘಾವಧಿಯ ಶಾಂತಿಗೆ ಮತ್ತು ಬಿಕ್ಕಟ್ಟಿನ ಮೂಲ ಕಾರಣಗಳ ನಿರ್ಮೂಲನೆಗೆ ಕಾರಣವಾಗುತ್ತದೆ ಎಂಬ ಭರವಸೆಯೊಂದಿಗೆ ಮುಂದುವರೆಯಬೇಕಿದೆ ಎಂದು ಹೇಳಿದರು.
ಮತ್ತಷ್ಟು ಓದಿ: ಉಕ್ರೇನ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮಾತನಾಡಿದ್ದೇನೆ: ಡೊನಾಲ್ಡ್ ಟ್ರಂಪ್
ಚೀನಾದ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಸೇರಿದಂತೆ ತಮ್ಮ ಹೆಚ್ಚಿನ ಸಮಯವನ್ನು ಇದಕ್ಕಾಗಿ ನೀಡುತ್ತಿದ್ದಾರೆ ಮತ್ತು ಇದಕ್ಕಾಗಿ ನಾವು ಅವರೆಲ್ಲರಿಗೂ ಕೃತಜ್ಞರಾಗಿರುತ್ತೇವೆ ಏಕೆಂದರೆ ಈ ಪ್ರಯತ್ನವು ಒಂದು ದೊಡ್ಡ ಧ್ಯೇಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಭಾರತದ ನಿಲುವೇನು? ಭಾರತವು ‘ತಟಸ್ಥವಾಗಿಲ್ಲ ಮತ್ತು ಯಾವಾಗಲೂ ಶಾಂತಿಯ ಪರವಾಗಿರುತ್ತದೆ’ ಎಂದು ಹೇಳಿದೆ. ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದಾಗ, ‘ಭಾರತ ತಟಸ್ಥವಾಗಿಲ್ಲ’ ಎಂದು ಪುನರುಚ್ಚರಿಸಿದರು. ಭಾರತ ಶಾಂತಿಯ ಪರವಾಗಿದೆ. ‘ಇದು ಯುದ್ಧದ ಯುಗವಲ್ಲ ಎಂದು ನಾನು ಈಗಾಗಲೇ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಅಧ್ಯಕ್ಷ ಟ್ರಂಪ್ ತೆಗೆದುಕೊಂಡ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ. ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ‘ಇದು ಯುದ್ಧದ ಯುಗವಲ್ಲ, ಸಂವಾದ ಮತ್ತು ರಾಜತಾಂತ್ರಿಕತೆಯ ಯುಗ’ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಯಿತು. ಅವರು ಮಾಸ್ಕೋ ಮತ್ತು ಕೈವ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಇಬ್ಬರಿಗೂ ಇದೇ ರೀತಿಯ ಸಂದೇಶಗಳನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ