ಶಸ್ತ್ರಚಿಕಿತ್ಸೆ ವೇಳೆ ಜಪಾನ್​​ನಲ್ಲಿ 7.1 ತೀವ್ರತೆಯ ಭೂಕಂಪ, ವೈದ್ಯರು ರೋಗಿಯ ಜೀವ ಉಳಿಸಿದ್ಹೇಗೆ ನೋಡಿ

ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವೊಂದು ರೋಗಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ(Surgery) ನಡೆಸುತ್ತಿದ್ದಾಗ ಬೃಹತ್ ಭೂಕಂಪ ಸಂಭವಿಸಿದೆ. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಉಪಕರಣಗಳು ತೀವ್ರವಾಗಿ ನಲುಗುತ್ತಿದ್ದರೂ, ಧೈರ್ಯಗೆಡದ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶಸ್ತ್ರಚಿಕಿತ್ಸಾ ಟೇಬಲ್ ಹಿಡಿದುಕೊಂಡು ರೋಗಿಯ ಜೀವ ಉಳಿಸಿದ್ದಾರೆ. ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶಸ್ತ್ರಚಿಕಿತ್ಸೆ ವೇಳೆ ಜಪಾನ್​​ನಲ್ಲಿ 7.1 ತೀವ್ರತೆಯ ಭೂಕಂಪ, ವೈದ್ಯರು ರೋಗಿಯ ಜೀವ ಉಳಿಸಿದ್ಹೇಗೆ ನೋಡಿ
ಆಸ್ಪತ್ರೆ

Updated on: Aug 07, 2026 | 1:47 PM

ಟೋಕಿಯೊ, ಆಗಸ್ಟ್​ 07: ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವೊಂದು ರೋಗಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ(Surgery) ನಡೆಸುತ್ತಿದ್ದಾಗ ಬೃಹತ್ ಭೂಕಂಪ ಸಂಭವಿಸಿದೆ. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಉಪಕರಣಗಳು ತೀವ್ರವಾಗಿ ನಲುಗುತ್ತಿದ್ದರೂ, ಧೈರ್ಯಗೆಡದ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶಸ್ತ್ರಚಿಕಿತ್ಸಾ ಟೇಬಲ್ ಹಿಡಿದುಕೊಂಡು ರೋಗಿಯ ಜೀವ ಉಳಿಸಿದ್ದಾರೆ. ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ಏಕಾಏಕಿ ಭೂಮಿ ಕಂಪಿಸಿದ್ದು, ಕೊಠಡಿಯ ದೀಪಗಳು ಮಿನುಗುತ್ತಿದ್ದವು ಹಾಗೂ ಉಪಕರಣಗಳು ಅಕ್ಕಪಕ್ಕಕ್ಕೆ ಓಲಾಡಿದವು.

ಕಂಪನದ ರಭಸಕ್ಕೆ ಓರ್ವ ವೈದ್ಯರು ನೆಲಕ್ಕೆ ಬಿದ್ದರೂ, ಇತರ ಇಬ್ಬರು ಶಸ್ತ್ರಚಿಕಿತ್ಸಕರು ಆಪರೇಟಿಂಗ್ ಟೇಬಲ್ ಜಾರದಂತೆ ಗಟ್ಟಿಯಾಗಿ ಹಿಡಿದುಕೊಂಡರು. ಕಂಪನ ನಿಂತ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರೋಗಿಯನ್ನು ರಕ್ಷಿಸಿದರು.

ವಿಡಿಯೋ

ದಕ್ಷಿಣ ದ್ವೀಪದಲ್ಲಿ ಭೀಕರ ಕಂಪನ: ಜುಲೈ 28 ರಂದು ಜಪಾನ್‌ನ ದಕ್ಷಿಣ ದ್ವೀಪವಾದ ಕ್ಯುಶುದಲ್ಲಿ (Kyushu) ಸಂಭವಿಸಿದ 7,1 ತೀವ್ರತೆಯ ಭೀಕರ ಭೂಕಂಪಕ್ಕೆ ಕನಿಷ್ಠ 38 ಜನರು ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. 3,500ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, 29,000ಕ್ಕೂ ಹೆಚ್ಚು ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಜಪಾನ್‌ನ ಗಡಿ ದಾಟಿ ದಕ್ಷಿಣ ಕೊರಿಯಾದ ಕರಾವಳಿ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us