
ವಾಷಿಂಗ್ಟನ್, ಮಾರ್ಚ್ 24: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಲ್ಲಿ ಇದೀಗ ಗಮನ ಸೆಳೆಯುತ್ತಿರುವ ವ್ಯಕ್ತಿ ಅಮೆರಿಕದ ಪೀಟ್ ಹೆಗ್ಸೆತ್. ಇವರು ಡೊನಾಲ್ಡ್ ಟ್ರಂಪ್ (Donald Trump) ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಪೀಟ್ ಹೆಗ್ಸೆತ್ ಅವರೇ ಇರಾನ್ ಮೇಲೆ ದಾಳಿ ನಡೆಸೋಣ ಎಂದು ಟ್ರಂಪ್ ಕಿವಿಯೂದಿದ್ದಾರೆ ಎಂಬ ವಿಷಯ ಬಯಲಾಗಿದೆ. ಹೀಗಾಗಿ, ಈ ಪೀಟ್ ಹೆಗ್ಸೆತ್ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ.
ಇರಾನ್ ಮೇಲೆ ಯುದ್ಧ ಮಾಡೋಣ ಎಂದು ಮೊದಲು ಹೇಳಿದ್ದೇ ಪೀಟ್ ಹೆಗ್ಸೆತ್ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಈ ಯುದ್ಧದ ಹೊಣೆಯನ್ನು ಹೆಗ್ಸೆತ್ ಹೆಗಲಿಗೆ ಹಾಕಿರುವ ಟ್ರಂಪ್ ಅವರ ಹೇಳಿಕೆಯಿಂದ ಪೀಟ್ ಹೆಗ್ಸೆತ್ ಟೀಕೆಗೆ ಗುರಿಯಾಗಿದ್ದಾರೆ. ಇಂದು ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿ ರಾಷ್ಟ್ರೀಯ ಮಿಲಿಟರಿ ಮತ್ತು ಕಾನೂನು ಜಾರಿ ನಾಯಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯುಎಸ್ ಅಧ್ಯಕ್ಷ ಟ್ರಂಪ್, ಫೆಬ್ರವರಿ 28ರಂದು ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಲು ಕಾರಣವಾದ ಸಂದರ್ಭಗಳ ಬಗ್ಗೆ ಹೀಗೆ ಹೇಳಿದ್ದಾರೆ. “ಆ ದಿನ ನಾನು ಪೀಟ್‌ಗೆ ಕರೆ ಮಾಡಿದೆ. ನಾನು ಜನರಲ್ ಕೇನ್‌ಗೆ ಕರೆ ಮಾಡಿದೆ. ಈ ಬಗ್ಗೆ ಮಾತಾಡೋಣ ಎಂದು ಅವರನ್ನು ಕರೆದೆ. ಮಧ್ಯಪ್ರಾಚ್ಯದಲ್ಲಿ ನಮಗೆ ಒಂದು ಸಮಸ್ಯೆ ಇದೆ. ಇರಾನ್ 47 ವರ್ಷಗಳಿಂದ ಭಯೋತ್ಪಾದನೆಯ ಪೂರೈಕೆದಾರ ದೇಶವಾಗಿದೆ. ಆ ದೇಶ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದೆ. ಯಾವ ರೀತಿ ಈ ಸಮಸ್ಯೆಯನ್ನು ನಿವಾರಿಸಬಹುದು? ಎಂದು ಚರ್ಚಿಸಿದೆವು” ಎಂದಿದ್ದಾರೆ.
Trump blames Hegseth for the war: “Pete, I think you were the first one to speak up. You said, ‘Let’s do it.'” pic.twitter.com/QBGeFuhM1M
— Aaron Rupar (@atrupar) March 23, 2026
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆ? ಟ್ರಂಪ್ ಹೇಳಿದ್ದೇನು?
“ಆಗ ಪೀಟ್ ಹೆಗ್ಸೆತ್ ಅವರೇ ಮೊದಲು ಮಾತನಾಡಿದವರು. ಆಗ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಬಾರದು. ನಾವು ಅವರ ಮೇಲೆ ಯುದ್ಧ ಮಾಡೋಣ ಎಂದು ಹೇಳಿದರು ಎಂದು ನನಗೆ ನೆನಪು. ಅದಾದ ನಂತರ ನಾವು ಈ ಬಗ್ಗೆ ರಾತ್ರಿಯಿಡೀ ಚರ್ಚಿಸಿ ನಿರ್ಧಾರ ತೆಗೆದುಕೊಂಡೆವು” ಎಂದು ಟ್ರಂಪ್ ಹೇಳಿದ್ದಾರೆ.
.@SECWAR “Yesterday’s ceremony reminded us why we fight—not for nation-building or democracy promotion—but to CRUSH DIRECT THREATS to America, Americans, and our interests.
We fight to win, and we are winning. On our terms.
“My 13-year-old son popped into my office last night… pic.twitter.com/T4DdNvNOsC
— DOW Rapid Response (@DOWResponse) March 19, 2026
ಈ ಮೂಲಕ ಟೆಹ್ರಾನ್ ವಿರುದ್ಧದ ಮಿಲಿಟರಿ ದಾಳಿಗೆ ಬೆಂಬಲ ನೀಡಿದವರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮೊದಲಿನವರು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ