AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಕದನ ವಿರಾಮ ಬಯಸುತ್ತಿದ್ದಾರೆ, ಇರಾನ್ ಅಮೆರಿಕದ ಷರತ್ತಿಗೆ ಒಪ್ಪುವುದು ಅನುಮಾನ; ಇಸ್ರೇಲ್ ಅಭಿಮತ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಒಪ್ಪಂದ ಬಯಸುತ್ತಿದ್ದಾರೆ, ಆದರೆ ಇರಾನ್ ಅಮೆರಿಕದ ಕದನ ವಿರಾಮದ ಷರತ್ತುಗಳಿಗೆ ಒಪ್ಪುವುದು ಅನುಮಾನ ಎಂದು ಇಸ್ರೇಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 3 ಹಿರಿಯ ಇಸ್ರೇಲಿ ಅಧಿಕಾರಿಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಲ್ಲಿಸಲು ಇರಾನ್ ಜೊತೆ ರಾಜತಾಂತ್ರಿಕ ಒಪ್ಪಂದವನ್ನು ಅನುಸರಿಸುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿದ್ದಾರೆ. ಆದರೆ, ಇದು ಯಶಸ್ವಿಯಾಗುವುದು ಅನುಮಾನ, ಇರಾನ್ ಅಮೆರಿಕದ ಪ್ರಮುಖ ಷರತ್ತುಗಳನ್ನು ಒಪ್ಪುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಕದನ ವಿರಾಮ ಬಯಸುತ್ತಿದ್ದಾರೆ, ಇರಾನ್ ಅಮೆರಿಕದ ಷರತ್ತಿಗೆ ಒಪ್ಪುವುದು ಅನುಮಾನ; ಇಸ್ರೇಲ್ ಅಭಿಮತ
Iran War
ಸುಷ್ಮಾ ಚಕ್ರೆ
|

Updated on: Mar 24, 2026 | 5:46 PM

Share

ಜೆರುಸಲೇಂ, ಮಾರ್ಚ್ 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)  ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ನಿಲ್ಲಿಸಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಅಮೆರಿಕ ಏಪ್ರಿಲ್ 9ರೊಳಗೆ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ. ಆದರೆ, ಹೊಸ ಮಾತುಕತೆಗಳಲ್ಲಿ ಹಾಕಲಾದ ಷರತ್ತುಗಳನ್ನು ಒಪ್ಪಲು ಇರಾನ್ ಒಪ್ಪುವುದು ಅನುಮಾನ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.

ಫೆಬ್ರವರಿ 28ರಂದು ಇರಾನ್ ವಿರುದ್ಧ ಯುಎಸ್- ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭವಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಅತ್ಯಂತ ಮಾರಕ ಘರ್ಷಣೆಗಳಲ್ಲಿ ಒಂದಾಗಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್‌ನಲ್ಲಿ ಸುಮಾರು 1,500 ಸಾವುಗಳು ವರದಿಯಾಗಿವೆ. ಗಲ್ಫ್ ರಾಷ್ಟ್ರಗಳಲ್ಲೂ ಸಾವುಗಳು ಉಂಟಾಗಿವೆ. ಬಿಕ್ಕಟ್ಟಿನ ಹೊರತಾಗಿಯೂ, ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಮಾತುಕತೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಯುಎಸ್ ಮತ್ತು ಇರಾನ್ ಮಧ್ಯಪ್ರಾಚ್ಯದಲ್ಲಿ ಹಗೆತನವನ್ನು ನಿಲ್ಲಿಸುವ ಉತ್ತಮ ಮತ್ತು ಉತ್ಪಾದಕ ಮಾತುಕತೆಯಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು.

ಇದನ್ನೂ ಓದಿ: ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದೆ ಎಲ್​ಪಿಜಿ ಹೊತ್ತ 2 ಹಡಗುಗಳು

ಆದರೆ, ಇರಾನ್ ಈ ಹೇಳಿಕೆಯನ್ನು ನಿರಾಕರಿಸಿತ್ತು. ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಹೇಳಿತ್ತು. ಇಂಧನದ ಬೆಲೆಯಲ್ಲಿ ಕಡಿಮೆ ಮಾಡಲು ಅಮೆರಿಕ ಈ ರೀತಿಯ ಹೇಳಿಕೆ ನೀಡುತ್ತಿದೆ ಎಂದು ಇರಾನ್ ಆರೋಪಿಸಿತ್ತು.

ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳಲ್ಲಿ ನಿಕಟವಾಗಿ ಸಮನ್ವಯಗೊಂಡಿವೆ ಎಂದು ಟ್ರಂಪ್ ಹೇಳಿದ್ದರು. “ಸಂಬಂಧವು ತುಂಬಾ ಒಳ್ಳೆಯದು. ನಾವು ಹೆಚ್ಚು ಕಡಿಮೆ ಒಂದೇ ರೀತಿಯ ವಿಷಯಗಳನ್ನು ಬಯಸುತ್ತೇವೆ, ನಾವಿಬ್ಬರೂ ಗೆಲುವು ಬಯಸುತ್ತೇವೆ. ಆ ಗೆಲುವು ನಮ್ಮ ಬಳಿ ಇದೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್

ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳು ತೈಲ ಬೆಲೆಗಳನ್ನು ಸುಮಾರು ಶೇ. 50ರಷ್ಟು ಹೆಚ್ಚಿಸಿವೆ. ಇದು ಜಾಗತಿಕ ಆರ್ಥಿಕ ಆಘಾತದ ಕಳವಳಗಳನ್ನು ಹೆಚ್ಚಿಸಿದೆ. ಈ ಹೋರಾಟವು ಈಗಾಗಲೇ ದೇಶಗಳಲ್ಲಿ 2,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಹೆಚ್ಚಿನ ಸಾವುನೋವುಗಳು ಇರಾನ್ ಮತ್ತು ಲೆಬನಾನ್‌ನಲ್ಲಿ ವರದಿಯಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us