AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್

ಇರಾನ್ ಜೊತೆ ಉತ್ಪಾದಕ ಮಾತುಕತೆ ನಡೆಯುತ್ತಿದ್ದು, ಸಂಘರ್ಷಕ್ಕೆ ತೆರೆ ಬೀಳುವ ಸಾಧ್ಯತೆಯಿದೆ ಎಂಬ ಸುಳಿವು ನೀಡುವ ಪೋಸ್ಟ್ ಅನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದರು. ಅಲ್ಲದೆ, ಇರಾನ್ ಮೇಲಿನ ದಾಳಿಯನ್ನು 5 ದಿನಗಳವರೆಗೆ ಮುಂದೂಡಿರುವುದಾಗಿಯೂ ಅವರು ಘೋಷಿಸಿದ್ದರು. ಹೀಗಾಗಿ, ಕದನವಿರಾಮ ಉಂಟಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ನಿರಾಕರಿಸಿದೆ. ಅಮೆರಿಕದ ಜೊತೆ ಯಾವ ಮಾತುಕತೆಗಳೂ ನಡೆದಿಲ್ಲ ಎಂದು ಇರಾನ್ ಸ್ಪಷ್ಟಡಿಸಿದೆ.

ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್
Us President Trump
ಸುಷ್ಮಾ ಚಕ್ರೆ
|

Updated on:Mar 23, 2026 | 7:03 PM

Share

ಟೆಹ್ರಾನ್, ಮಾರ್ಚ್ 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಜೊತೆ ‘ಪ್ರೊಡಕ್ಟಿವ್ ಮಾತುಕತೆ’ ನಡೆಸಿದ್ದೇವೆ ಎಂಬ ಹೇಳಿಕೆಯನ್ನು ಇರಾನ್ ತಳ್ಳಿಹಾಕಿದೆ. ಇಂಧನದ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಅಮೆರಿಕ ಈ ರೀತಿಯ ಹೇಳಿಕೆ ನೀಡಿದೆ ಎಂದು ಇರಾನ್ ಟೀಕಿಸಿದೆ. ಇರಾನ್ ಮೇಲೆ ನಡೆಸಲು ಯೋಚಿಸಲಾಗಿದ್ದ ಮಿಲಿಟರಿ ದಾಳಿಗಳಿಗೆ ವಿರಾಮ ನೀಡುವುದಾಗಿ ಟ್ರಂಪ್ ಘೋಷಿಸಿದ ಸ್ವಲ್ಪ ಸಮಯದ ನಂತರ ಇರಾನ್ ರಾಯಭಾರ ಕಚೇರಿ ಈ ಹೇಳಿಕೆ ಬಿಡುಗಡೆ ಮಾಡಿದೆ.

“ಇರಾನ್‌ನ ದೃಢ ಎಚ್ಚರಿಕೆಯ ನಂತರ ಟ್ರಂಪ್ ನಮ್ಮ ದೇಶದ ಮೇಲೆ ದಾಳಿ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇರಾನ್‌ನ ಇಂಧನ ಮೂಲಸೌಕರ್ಯದ ಮೇಲೆ ಯಾವುದೇ ಯುಎಸ್ ದಾಳಿ ನಡೆದರೂ ಅದು ಇಡೀ ಪ್ರದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಇದಾದ ನಂತರವೇ ಟ್ರಂಪ್ ಹಿಂದೆ ಸರಿದು ಇರಾನ್ ಮೇಲಿನ ದಾಳಿಯನ್ನು ಮುಂದೂಡಲು ಆದೇಶ ಹೊರಡಿಸಿದ್ದಾರೆ” ಎಂದು ಇರಾನ್​ನ ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ಟ್ರಂಪ್ ಅವರ ಈ ಹೇಳಿಕೆಗಳು ಇಂಧನದ ಬೆಲೆಗಳನ್ನು ಕಡಿಮೆ ಮಾಡುವ ಮತ್ತು ಮುಂದಿನ ದಾಳಿಗೆ ಸಮಯವನ್ನು ಮಾಡಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದ್ದು, ಇರಾನ್ ಮತ್ತು ಅಮೆರಿಕದ ನಡುವೆ ಪ್ರಸ್ತುತ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಹೇಳಿದೆ.

ಇದರ ನಡುವೆ, ಇಸ್ರೇಲಿನ ಸೈನ್ಯವು ಇಂದು ಇರಾನ್​ನಲ್ಲಿ ಮತ್ತೊಂದು ದಾಳಿಯನ್ನು ಪ್ರಾರಂಭಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:03 pm, Mon, 23 March 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ