AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್‌ನವರನ್ನು ಆ ದೇವರೇ ಕಾಪಾಡಬೇಕು ಎಂದು ಹೆಚ್​ಡಿಕೆ ಟಾಂಗ್; ನಾನಂತೂ ಶ್ರೀರಾಮಚಂದ್ರನಂತೆ ಏಕಪತ್ನಿ ವ್ರತಸ್ಥ ಎಂದ ಕಾಂಗ್ರೆಸ್​​ ಶಾಸಕ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕ ಶಾಸಕರ ಬಗ್ಗೆ ನೀಡಿದ 'ಎರಡನೇ ಮದುವೆ' ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇದನ್ನು ತೀವ್ರವಾಗಿ ಖಂಡಿಸಿದರೆ, ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ಹಾಗೂ ಜಲವಿವಾದಗಳ ಕುರಿತು ಪಾಟೀಲ್ ಮಾತನಾಡಿದ್ದು, ರಾಜಕೀಯ ವಲಯದಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿವೆ.

ಕಾಂಗ್ರೆಸ್‌ನವರನ್ನು ಆ ದೇವರೇ ಕಾಪಾಡಬೇಕು ಎಂದು ಹೆಚ್​ಡಿಕೆ ಟಾಂಗ್; ನಾನಂತೂ ಶ್ರೀರಾಮಚಂದ್ರನಂತೆ ಏಕಪತ್ನಿ ವ್ರತಸ್ಥ ಎಂದ ಕಾಂಗ್ರೆಸ್​​ ಶಾಸಕ
ಹೆಚ್​​ಡಿಕೆ, ಡಿಕಶಿ, ಕಾಂಗ್ರೆಸ್​​ ಶಾಸಕImage Credit source: Google
Anil Kalkere
| Edited By: |

Updated on:Sep 26, 2026 | 7:35 PM

Share

ಬೆಂಗಳೂರು, ಸೆ.26: ಉತ್ತರ ಕರ್ನಾಟಕ ಭಾಗದ ನಾಯಕರು ಹಾಗೂ ಶಾಸಕರು ಬೆಂಗಳೂರಿಗೆ ಬಂದು ನೆಲೆಯೂರುತ್ತಾರೆ. ಕೆಲ ಶಾಸಕರು ಎರಡನೇ ಮದುವೆಯಾಗಿ ಇಲ್ಲೇ ಇರುತ್ತಾರೆ, ಅದಕ್ಕೆ ದಾಖಲೆಗಳಿವೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದೆ. ಸಿಎಂ ಅವರ ಈ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಇತ್ತ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಡಿಕೆಶಿ ಹೇಳಿಕೆಗೆ ಬೆಂಗಳೂರಿನಲ್ಲಿ ಕಿಡಿಕಾರಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಸದನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಈ ರೀತಿಯ ಹೇಳಿಕೆ ಕೊಟ್ಟಿದ್ದಾರಲ್ಲಾ, ಕಾಂಗ್ರೆಸ್‌ನವರನ್ನು ಆ ದೇವರೇ ಕಾಪಾಡಬೇಕು, ಎಂಥ ಮುಖ್ಯಮಂತ್ರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಸ್ವತಃ ಕಾಂಗ್ರೆಸ್ ಶಾಸಕರಿಗೇ ಅನ್ನಿಸಬೇಕು” ಎಂದು ಲೇವಡಿ ಮಾಡಿದರು. “ಸಿಎಂ ನೀಡಿದ ಈ ಹೇಳಿಕೆ ವಿರುದ್ಧ ಪಕ್ಷಭೇದ ಮರೆತು ರಾಜ್ಯದ ಎಲ್ಲಾ 224 ಶಾಸಕರು ಪ್ರತಿಭಟನೆ ಮಾಡಬೇಕಿತ್ತು. ಕಾಂಗ್ರೆಸ್ ಶಾಸಕರಂತೂ ಈ ವಿಚಾರವಾಗಿ ಪ್ರತಿಭಟಿಸಬೇಕಿತ್ತು. ಸಿಎಂ ಯಾವ ಆಯಾಮದಲ್ಲಿ ಈ ರೀತಿ ಮಾತನಾಡಿದ್ದಾರೋ ಅವರನ್ನೇ ಕೇಳಬೇಕು” ಎಂದು ವಾಗ್ದಾಳಿ ನಡೆಸಿದರು.

ನಾನಂತೂ ಶ್ರೀರಾಮಚಂದ್ರನಂತೆ ಏಕಪತ್ನಿ ವ್ರತಸ್ಥ: ಶಾಸಕ ಯಶವಂತರಾಯಗೌಡ ಪಾಟೀಲ್

ಇತ್ತ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್, “ಸಿಎಂ ಅವರು ಯಾವ ಆಂಗಲ್‌ನಲ್ಲಿ ಹಾಗೆ ಹೇಳಿದ್ದಾರೋ ಅವರನ್ನೇ ಕೇಳಿ. ನನ್ನ ಬಗ್ಗೆ ಮಾತ್ರ ನಾನು ಹೇಳುತ್ತೇನೆ— ನಾನಂತೂ ಏಕಪತ್ನಿ ವ್ರತಸ್ಥ. ಶ್ರೀರಾಮಚಂದ್ರನಂತೆ, ನನ್ನ ತಂದೆಯಂತೆ ನಾನು ಬದುಕಿದ್ದೇನೆ. ಸಿಎಂ ಅವರ ಪ್ರಕಾರ ಕೆಲವರು ಎರಡು ಮದುವೆಯಾಗಿರಬಹುದು, ಆದರೆ ನಾನು ಆ ಕೆಟಗರಿಯಲ್ಲಿ ಬರಲ್ಲ!” ಎಂದು ಹಾಸ್ಯದ ಧಾಟಿಯಲ್ಲಿ ಸ್ಪಷ್ಟನೆ ನೀಡಿದರು. “ಬೆಂಗಳೂರು ಯಾವ ರೀತಿ ಬೆಳೆಯುತ್ತಿದೆ ಮತ್ತು ಉತ್ತರ ಕರ್ನಾಟಕದಿಂದ ಜನರು ಹೇಗೆ ಬಂದು ಸೆಟಲ್ ಆಗುತ್ತಿದ್ದಾರೆ ಎಂಬುದನ್ನು ಹೇಳುವ ಭರದಲ್ಲಿ ಸಿಎಂ ಈ ರೀತಿ ಮಾತನಾಡಿದ್ದಾರೆ” ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ‘ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ’: ತೀವ್ರ ಕುತೂಹಲ ಮೂಡಿಸಿದ ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆ

ಇದೇ ವೇಳೆ ವಿವಿಧ ರಾಜಕೀಯ ವಿಷಯಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ್ ಸುದೀರ್ಘವಾಗಿ ಮಾತನಾಡಿದರು, “ಕೆಲವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವುದು ಸರಿಯಲ್ಲ. ಸರ್ಕಾರಕ್ಕೆ ಬರುವ ಒಟ್ಟು ತೆರಿಗೆಯಲ್ಲಿ ಬೆಂಗಳೂರಿನ ಪಾಲು ಹೆಚ್ಚಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದಾಗ ಸೀಮಾಂಧ್ರ ಭಾಗದಲ್ಲಿ ಅಧಿಕಾರ ಮಾಡಿದವರು ಎಂತಹ ಆರ್ಥಿಕ ಸಂಕಷ್ಟ ಎದುರಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಇರುವುದರಿಂದ ಬೆಂಗಳೂರು ಬೆಳೆದಿದೆ, ಬೆಂಗಳೂರಿನಿಂದ ಕರ್ನಾಟಕ ಅಭಿವೃದ್ಧಿಯಾಗಿದೆ” ಎಂದರು. “ಬಸವಸಾಗರ (ನಾರಾಯಣಪುರ) ಹಾಗೂ ಆಲಮಟ್ಟಿ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುವಂತೆ ಅಲ್ಲಿನ ಸಚಿವರು ಮತ್ತು ಶಾಸಕರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿದೆ. ಕುಡಿಯುವ ನೀರಿನ ವಿಚಾರ ಬಂದಾಗ ನಾವೆಲ್ಲಾ സഹೋದರ ರಾಜ್ಯಗಳು. ಹಿಂದೆ ನಾವು ಮಹಾರಾಷ್ಟ್ರದಿಂದ ಭೀಮಾನದಿಗೆ ನೀರು ಬಿಡಿಸಿಕೊಂಡಿದ್ದೆವು. ಆದರೆ ತೆಲಂಗಾಣದವರು ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Sat, 26 September 26

Follow Us
Anil Kalkere
Anil Kalkere
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್