El Nino: ನಿರೀಕ್ಷಿತ ಎಲ್ ನಿನೊ ಬರಲಿದೆ ಎಂದು ಘೋಷಿಸಿದ ಅಮೆರಿಕ, ಹವಾಮಾನ ಬದಲಾವಣೆಯ ಬಗ್ಗೆ ಹೆಚ್ಚಿದ ಆತಂಕ
ಸಾಮಾನ್ಯವಾಗಿ ಜಾಗತಿಕ ತಾಪಮಾನವನ್ನು ಸ್ವಲ್ಪ ಕಡಿಮೆ ಮಾಡುವ ಲಾ ನಿನಾ ಹವಾಮಾನದ ಮೂರು ವರ್ಷಗಳ ಮಾದರಿಯ ನಂತರ ಬಿಸಿಯಾದ ಎಲ್ ನಿನೊ ಮತ್ತೆ ಚುರುಕಾಗಿದೆ ಎಂದು ಯುಎಸ್ ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ ಹವಾಮಾನ ಮುನ್ಸೂಚನೆ ಕೇಂದ್ರ ಗುರುವಾರ ಹೇಳಿದೆ.
ಎಲ್ ನಿನೊ (El Nino) ಮರಳಿ ಬಂದಿದ್ದು ಈ ವರ್ಷದ ಕೊನೆಯಲ್ಲಿ ಹವಾಮಾನದ (weather) ಬದಲಾವಣೆಗೆ ಇವು ಕಾರಣವಾಗಲಿದೆ. ಉಷ್ಣವಲಯದ ಚಂಡಮಾರುತಗಳು ದುರ್ಬಲ ಪೆಸಿಫಿಕ್ ದ್ವೀಪಗಳ ಕಡೆಗೆ ತಿರುಗಲಿದ್ದು ದಕ್ಷಿಣ ಅಮೆರಿಕಾದಲ್ಲಿ ಭಾರೀ ಮಳೆ ಮತ್ತು ಆಸ್ಟ್ರೇಲಿಯಾದಲ್ಲಿ ಬರಗಾಲವನ್ನುಂಟು ಮಾಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಜಾಗತಿಕ ತಾಪಮಾನವನ್ನು ಸ್ವಲ್ಪ ಕಡಿಮೆ ಮಾಡುವ ಲಾ ನಿನಾ (La Nina) ಹವಾಮಾನದ ಮೂರು ವರ್ಷಗಳ ಮಾದರಿಯ ನಂತರ ಬಿಸಿಯಾದ ಎಲ್ ನಿನೊ ಮತ್ತೆ ಚುರುಕಾಗಿದೆ ಎಂದು ಯುಎಸ್ ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ ಹವಾಮಾನ ಮುನ್ಸೂಚನೆ ಕೇಂದ್ರ ಗುರುವಾರ ಹೇಳಿದೆ.
ಎಲ್ ನಿನೊ ದಕ್ಷಿಣ ಅಮೆರಿಕಾದ ಕರಾವಳಿಯ ಸಮೀಪ ಪೂರ್ವ ಪೆಸಿಫಿಕ್‌ನಲ್ಲಿ ಅಸಾಧಾರಣವಾಗಿ ಬೆಚ್ಚಗಿನ ನೀರಿನಿಂದ ಹುಟ್ಟುತ್ತದೆ ಮತ್ತು ಸಾಮಾನ್ಯವಾಗಿ ಪೂರ್ವ ಮಾರುತಗಳ ನಿಧಾನಗತಿ ಅಥವಾ ಹಿಮ್ಮುಖ ಬೀಸುವ ಗಾಳಿಯೊಂದಿಗೆ ಇರುತ್ತದೆ. ಮೇ ತಿಂಗಳಲ್ಲಿ ಉಷ್ಣ ವಲಯದ ಪೆಸಿಫಿಕ್ ಮಹಾಸಾಗರದಾದ್ಯಂತ ಸರಾಸರಿಗಿಂತ ಹೆಚ್ಚಿನ ಸಮುದ್ರದ ಮೇಲ್ಮೈ ತಾಪಮಾನವು ಬಲಗೊಂಡಿದ್ದರಿಂದ ದುರ್ಬಲ ಎಲ್ ನಿನೊ ಉಂಟಾಗಿದೆ ಎಂದು ಹವಾಮಾನ ಮುನ್ಸೂಚನೆ ಕೇಂದ್ರ ಹೇಳಿದೆ.
2016 ರಲ್ಲಿ ಎಲ್ ನಿನೊ ಕಾರಣ ಜಗತ್ತಿನಲ್ಲಿ ತಾಪಮಾನ ತೀವ್ರವಾಗಿತ್ತು. ಹವಾಮಾನ ಬದಲಾವಣೆಯಿಂದಾಗಿ ಇದು 2023 ಅಥವಾ 2024 ಗರಿಷ್ಠ ಮಟ್ಟವನ್ನು ತಲುಪಬಹುದು
ಬಂತು ಬಂತು ಎಲ್ ನಿನೊ
ಎಲ್ ನಿನೊ ಪ್ರಾರಂಭವಾಗಿದೆ ಎಂದು ದೃಢೀಕರಣಕ್ಕಾಗಿ ಹೆಚ್ಚಿನ ತಜ್ಞರು NOAA ಮತ್ತು ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ (BOM) ಈ ಎರಡು ಏಜೆನ್ಸಿಗಳ ಮಾಹಿತಿ ನೋಡುತ್ತಾರೆ. ಎಲ್ ನಿನೊವನ್ನು ಘೋಷಿಸಲು ಎರಡು ಏಜೆನ್ಸಿಗಳು ವಿಭಿನ್ನ ಮೆಟ್ರಿಕ್‌ಗಳನ್ನು ಬಳಸುತ್ತವೆ. ಪೂರ್ವ ಮತ್ತು ಮಧ್ಯ ಉಷ್ಣ ವಲಯ ಪೆಸಿಫಿಕ್‌ನಲ್ಲಿನ ಸಮುದ್ರದ ಉಷ್ಣತೆಯು ಹಿಂದಿನ ತಿಂಗಳು ಸಾಮಾನ್ಯಕ್ಕಿಂತ 0.5 ಸೆಲ್ಸಿಯಸ್ (0.9 ಫ್ಯಾರನ್‌ಹೀಟ್) ಹೆಚ್ಚಿದ್ದರೆ, ಮೂರು ತಿಂಗಳ ಅವಧಿಯಲ್ಲಿ ಹೊಂದಿರುವ ಇದು ಸತತವಾಗಿ ಮುಂದುವರಿದಿದೆ ಅಥವಾ ಮುಂದುವರಿಯುವ ನಿರೀಕ್ಷೆಯನ್ನು ಹೊಂದಿರುವಾಗ NOAA ಎಲ್ ನಿನೊ ಇದೆ ಎಂದು ಹೇಳುತ್ತದೆ. ಏಜೆನ್ಸಿಯು ಬೀಸುವ ಗಾಳಿ ಮತ್ತು ಮೋಡದ ಪದರಗಳು ದುರ್ಬಲಗೊಳ್ಳುವುದನ್ನು ಸಹ ಗಣನೆಗೆ ತೆಗದುಕೊಳ್ಳುತ್ತದೆ.
ಅದೇ ವೇಳೆ ಆಸ್ಟ್ರೇಲಿಯಾದ BOM ಪೂರ್ವ ಪೆಸಿಫಿಕ್ 0.8C (1.5F) ಪ್ರಮುಖ ಪ್ರದೇಶಗಳು ಸರಾಸರಿಗಿಂತ ಬೆಚ್ಚಗಿರುವುದುನ್ನ ನೋಡಿ ಇದನ್ನು ನಿರ್ಣಯಿಸುತ್ತದೆ.
ಮಂಗಳವಾರ, ಆಸ್ಟ್ರೇಲಿಯಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವರ್ಷ ಎಲ್ ನಿನೊ ಅಭಿವೃದ್ಧಿಯ ಶೇ 70 ಸಾಧ್ಯತೆಯನ್ನು ಗಮನಿಸಿದೆ. ಎಲ್ ನಿನೊ ಮತ್ತಷ್ಟು ಶಕ್ತಿಯುತವಾಗುವ ಶೇ 56 ಸಾಧ್ಯತೆಗಳಿವೆ ಎಂದು NOAA ಹೇಳಿದೆ.
ಇದು ಪ್ರಪಂಚದಾದ್ಯಂತ ಬರದಿಂದ ಚಂಡಮಾರುತದವರೆಗೆ – ಹೆಚ್ಚು ತೀವ್ರವಾದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಂಸ್ಥೆ ಹೇಳಿದೆ.
ಕೃಷಿ ಮೇಲೆ ಪರಿಣಾಮ
ಎಲ್ ನಿನೊದಿಂದ ಉಂಟಾದ ಬಿಸಿ, ಶುಷ್ಕ ಹವಾಮಾನದ ಆರಂಭಿಕ ಚಿಹ್ನೆಗಳು ಏಷ್ಯಾದಾದ್ಯಂತ ಆಹಾರ ಉತ್ಪಾದಕರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ ಅಮೇರಿಕನ್ ಬೆಳೆಗಾರರು ತೀವ್ರ ಬರಗಾಲದ ಪರಿಣಾಮವನ್ನು ನಿವಾರಿಸಲು ಹವಾಮಾನದ ವಿದ್ಯಮಾನದಿಂದ ಭಾರೀ ಬೇಸಿಗೆಯ ಮಳೆಯನ್ನು ನಿರೀಕ್ಷಿಸುತ್ತಿದ್ದಾರೆ.ಎಲ್ ನಿನೊ ಚಳಿಗಾಲದ ಬೆಳೆ ಉತ್ಪಾದನೆಯು ಆಸ್ಟ್ರೇಲಿಯಾದಲ್ಲಿ ದಾಖಲೆಯ ಗರಿಷ್ಠ ಮಟ್ಟದಿಂದ ಶೇ 34ರಷ್ಟು ಕುಸಿಯಲು ಕಾರಣವಾಗಬಹುದು. ಇಂಡೋನೇಷ್ಯಾ, ಮಲೇಷ್ಯಾದಲ್ಲಿ ಪಾಮ್ ಎಣ್ಣೆ ಮತ್ತು ಅಕ್ಕಿ ಉತ್ಪಾದನೆಯ ಮೇಲೆಯೂ ಇದು ಪರಿಣಾಮ ಬೀರಬಹುದು. ಮಲೇಷ್ಯಾ ಮತ್ತು ಮತ್ತು ಥೈಲ್ಯಾಂಡ್ ವಿಶ್ವದ ಪಾಮ್ ಎಣ್ಣೆಯ ಶೇ 80 ಅನ್ನು ಪೂರೈಸುತ್ತದೆ.
ತನ್ನ ಬೇಸಿಗೆಯ ಬೆಳೆಗಾಗಿ ಮಾನ್ಸೂನ್ ಮಳೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ದೇಶ ಭಾರತ. ಎಲ್ ನಿನೊದಿಂದ ಉಂಟಾಗುವ ಪರಿಣಾಮಗಳನ್ನು ಇಂಡಿಯನ್ ನಿನೊ ಮೂಲಕ ಸರಿದೂಗಿಸಬಹುದು, ಆದರೂ ದೇಶದ ವಾಯುವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ