Russia: ರಷ್ಯಾದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ, 6 ಜನ ಸಾವು, ಇಬ್ಬರಿಗೆ ಗಾಯ

ಸ್ಫೋಟಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 6 ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯ ರಷ್ಯಾದ ಸಮಾರ ಪ್ರದೇಶದಲ್ಲಿ ನಡೆದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ಇಂದು ವರದಿ ಮಾಡಿವೆ.

Russia: ರಷ್ಯಾದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ, 6 ಜನ ಸಾವು, ಇಬ್ಬರಿಗೆ ಗಾಯ
ರಷ್ಯಾ

Updated on: Jul 07, 2023 | 6:24 PM

ಮಾಸ್ಕೋ : ಸ್ಫೋಟಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 6 ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯ ರಷ್ಯಾದ ಸಮಾರ ಪ್ರದೇಶದಲ್ಲಿ ನಡೆದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ಇಂದು ವರದಿ ಮಾಡಿವೆ. ಚಾಪಯೆವ್ಸ್ಕ್ ನಗರದ ಪ್ರಾಮ್ಸಿಂಟೆಜ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು RIA ನೊವೊಸ್ಟಿ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಕಾರ್ಖಾನೆಯಲ್ಲಿ ದುರಸ್ತಿ ಕೆಲಸದ ಸಮಯದಲ್ಲಿ ಉಪಕರಣಗಳನ್ನು ಕಿತ್ತುಹಾಕಿದ ಪರಿಣಾಮವಾಗಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಪ್ರಾಮ್ಸಿಂಟೆಜ್ ರಷ್ಯಾ ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಕೈಗಾರಿಕಾ ಸ್ಫೋಟಕಗಳ ಮುಖ್ಯ ತಯಾರಕರಲ್ಲಿ ಒಬ್ಬರು.

ಇದರಲ್ಲಿ ಕಂಪನಿಯು 1,300 ಜನರನ್ನು ನೇಮಿಸಿಕೊಂಡಿದೆ ಮತ್ತು ಅದರ ವೆಬ್‌ಸೈಟ್ ಪ್ರಕಾರ ಇದು ಗಣಿಗಾರಿಕೆ ಮತ್ತು ತೈಲ, ಅನಿಲ ವಲಯವನ್ನು ಪೂರೈಸುತ್ತದೆ. 1997 ರಲ್ಲಿ ಈ ಕಾರ್ಖಾನೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದರ ಸ್ಥಾವರವು 1911ಹಿಂದಿನದ್ದು, ಇದನ್ನು ತ್ಸಾರ್ ನಿಕೋಲಸ್ II ಸ್ಥಾಪಿಸಿದ್ದು.

ಇದನ್ನೂ ಓದಿ: Russia: ವಾಪಸ್ ಹೊರಟ ವ್ಯಾಗ್ನರ್ ಗ್ರೂಪ್, ಬಂಡಾಯ ಶಮನವಾಯಿತೇ?

ಕಳೆದ ತಿಂಗಳು ಇಂತಹದೇ ಘಟನೆ ಮಾಸ್ಕೋದ ಆಗ್ನೇಯದಲ್ಲಿ ನಡೆದಿತ್ತು. ಟಾಂಬೋವ್ ಪ್ರದೇಶದಲ್ಲಿನ ಗನ್‌ಪವರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಜನ ಸಾವನ್ನಪ್ಪಿದರು. ರಷ್ಯಾ ಒಂದು ಕಡೆ ಉಕ್ರೇನ್ ಜತೆಗೆ ಯುದ್ಧ ಮಾಡುತ್ತಿದೆ, ಇನ್ನೊಂದು ಕಡೆ ಇಂತಹ ಘಟನೆಗಳಯ ನಡೆಯುತ್ತಿದೆ. ಇದರ ಜತೆಗೆ ಇಂತಹ ಹೊಸ ಕಾರ್ಖಾನೆಗಳ ಸ್ಥಾಪನೆಗೂ ಮುಂದಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us