ಎರಡನೇ ಡೋಸ್​ ಕೊರೊನಾ ಲಸಿಕೆ ಪಡೆಯುವುದು ತಡವಾದರೆ ಶೇ.300ರಷ್ಟು ಪ್ರತಿಕಾಯಗಳು ವೃದ್ಧಿಯಾಗುತ್ತವೆ: ಅಧ್ಯಯನ

ಮೊದಲ ಡೋಸ್ ಲಸಿಕೆ ಪಡೆದ ನಂತರ ದೇಹದ ರೋಗ ನಿರೋಧಕ ಶಕ್ತಿಗೆ ಒಗ್ಗಿಕೊಳ್ಳಲು ಹೆಚ್ಚು ಸಮಾಯಾವಕಾಶ ಕೊಡುವುದು ಒಳ್ಳೆಯದು. ಹೀಗೆ ಮಾಡಿದಾಗ ದೇಹದಲ್ಲಿ ಕೊವಿಡ್ 19 ವೈರಾಣು ವಿರುದ್ಧ ಹೋರಾಡಲು ಉತ್ಪತ್ತಿಯಾಗುವ ಪ್ರತಿಕಾಯಗಳ ಪ್ರಮಾಣ ಶೇ.20ರಿಂದ ಶೇ.300ರಷ್ಟು ಹೆಚ್ಚುತ್ತದೆ.

ಎರಡನೇ ಡೋಸ್​ ಕೊರೊನಾ ಲಸಿಕೆ ಪಡೆಯುವುದು ತಡವಾದರೆ ಶೇ.300ರಷ್ಟು ಪ್ರತಿಕಾಯಗಳು ವೃದ್ಧಿಯಾಗುತ್ತವೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us
Skanda
|

Updated on: May 21, 2021 | 11:10 AM

ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದ್ದು, ಕೊರೊನಾ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಹತ್ತು ಹಲವು ವೈದ್ಯಕೀಯ ಸೌಲಭ್ಯಗಳ ಕೊರತೆ ತಲೆದೋರಿದೆ. ಮೊದಲ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪಡೆಯುವುದಕ್ಕೂ ಲಸಿಕೆ ಸಿಗದಂತಾಗಿರುವ ಕಾರಣ ಅನೇಕರು ತಮಗೆ ನೀಡಲಾದ ಪ್ರಥಮ ಡೋಸ್ ವ್ಯರ್ಥವಾಗಬಹುದೆಂಬ ಚಿಂತೆಗೀಡಾಗಿದ್ದಾರೆ. ಆದರೆ, ಈ ಚಿಂತೆಯನ್ನು ಕಡಿಮೆ ಮಾಡುವಂತಹ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದ್ದು, ಎರಡು ಡೋಸ್​ಗಳ ನಡುವಿನ ಅಂತರ ಹೆಚ್ಚಿದಷ್ಟೂ ಪರಿಣಾಮ ಜಾಸ್ತಿ ಎಂದು ತಿಳಿಸಿದೆ.

ಕೆಲವು ರಾಷ್ಟ್ರಗಳು ಲಸಿಕೆ ವಿತರಣೆಗೆ ಪೂರಕವಾಗುವಂತೆ ಎರಡು ಡೋಸ್​ಗಳ ನಡುವಿನ ಅಂತರವನ್ನು ಎರಡು, ಮೂರು ಪಟ್ಟು ಹಿಗ್ಗಿಸಿದ್ದವಾದರೂ ಲಸಿಕೆ ಪೂರೈಸುವ ಉದ್ದೇಶದಿಂದ ಹೀಗೆ ಮಾಡುವುದು ಸರಿಯಲ್ಲ ಎಂಬ ವಾದಗಳು ಕೇಳಬಂದಿದ್ದವು. ಆದರೆ, ಈಗ ಅಧ್ಯಯನಕಾರರೇ ಅಂತರ ಹೆಚ್ಚಿಸುವುದನ್ನು ಅನುಮೋದಿಸಿದ್ದು ಈ ತೆರನಾದ ಕ್ರಮವು ಕೊರೊನಾ ಲಸಿಕೆಯ ಸುಲಭ ವಿತರಣೆಗೆ ಸಹಕಾರಿಯಾಗುವುದರ ಜತೆಗೆ ಲಸಿಕೆ ಪಡೆದವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಮೊದಲ ಡೋಸ್ ಲಸಿಕೆ ಪಡೆದ ನಂತರ ದೇಹದ ರೋಗ ನಿರೋಧಕ ಶಕ್ತಿಗೆ ಒಗ್ಗಿಕೊಳ್ಳಲು ಹೆಚ್ಚು ಸಮಾಯಾವಕಾಶ ಕೊಡುವುದು ಒಳ್ಳೆಯದು. ಹೀಗೆ ಮಾಡಿದಾಗ ದೇಹದಲ್ಲಿ ಕೊವಿಡ್ 19 ವೈರಾಣುವಿನ ವಿರುದ್ಧ ಹೋರಾಡಲು ಉತ್ಪತ್ತಿಯಾಗುವ ಪ್ರತಿಕಾಯಗಳ ಪ್ರಮಾಣ ಶೇ.20ರಿಂದ ಶೇ.300ರಷ್ಟು ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಎಲ್ಲಾ ಲಸಿಕೆಗಳ ವಿಚಾರದಲ್ಲೂ ಈ ಅಂಶ ಸತ್ಯವೆಂದು ಸಾಬೀತಾದರೆ ಭಾರತ ಸೇರಿದಂತೆ ಲಸಿಕೆ ಕೊರತೆ ಎದುರಿಸುತ್ತಿರುವ ಎಲ್ಲಾ ರಾಷ್ಟ್ರಗಳಿಗೂ ಪರಿಸ್ಥಿತಿ ನಿಭಾಯಿಸುವುದು ಸುಲಭವಾಗಲಿದೆ.

ಆದರೆ, ಹೆಚ್ಚು ಜನ ಸಂಖ್ಯೆಯುಳ್ಳ ರಾಷ್ಟ್ರಗಳಲ್ಲಿ ಹೀಗೆ ಅಧಿಕ ಅಂತರವನ್ನು ನೀಡುವುದು ಆರೋಗ್ಯದ ದೃಷ್ಟಿಯಲ್ಲಿ ಕೊಂಚ ಅಪಾಯಕಾರಿಯೇ ಆಗಿದ್ದು, ಕಡಿಮೆ ಪ್ರದೇಶದಲ್ಲಿ ಹೆಚ್ಚು ಜನ ವಾಸಿಸುವಾಗ ಮೊದಲ ಡೋಸ್ ಪಡೆದವರಿಗೆ ಮತ್ತೆ ಕೊರೊನಾ ತಗುಲಿ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಕೇವಲ ಮೊದಲ ಡೋಸ್​ ಒಂದರಿಂದ ದೇಹ ಕೊರೊನಾ ವೈರಾಣು ವಿರುದ್ಧ ಸಶಕ್ತ ಹೋರಾಟ ನಡೆಸುವುದು ಕಷ್ಟವಾದ್ದರಿಂದ ಹೆಚ್ಚು ಅಂತರ ಕೊಟ್ಟು ಅಪಾಯಕ್ಕೆ ಸಿಲುಕಿಸುವುದು ಒಳ್ಳೆಯದಲ್ಲ ಎಂದು ಕೆಲ ತಜ್ಞರು ಎಚ್ಚರಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಕೆಲ ತಜ್ಞರು ಎರಡನೇ ಡೋಸ್ ಪಡೆಯುವ ಅವಧಿ ವಿಸ್ತರಿಸುವುದರಿಂದ ಆ ಸಂದರ್ಭದಲ್ಲಿ ಉಳಿದವರಿಗೆ ಮೊದಲ ಡೋಸ್ ನೀಡಿಕೊಳ್ಳಬಹುದು. ಏನೂ ಕೊಡದೇ ಇರುವುದಕ್ಕಿಂತ ಒಂದು ಡೋಸ್ ಲಸಿಕೆಯನ್ನಾದರೂ ನೀಡಿ ದೇಹದಲ್ಲಿ ಪ್ರತಿಕಾಯ ಸೃಷ್ಟಿಸಲು ಸಹಕರಿಸುವುದು ಉತ್ತಮ. ಅಲ್ಲದೇ, ತಡವಾದಷ್ಟೂ ಎರಡನೇ ಡೋಸ್ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳುತ್ತಿರುವಾಗ ಭಯ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

(Extending interval time between two doses of covid 19 vaccine boost immunity in body says study)

ಇದನ್ನೂ ಓದಿ: ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್​ಗೂ ಎರಡನೇ ಡೋಸ್​ಗೂ ನಡುವೆ 12-16 ವಾರಗಳ ಅವಧಿ; ಪದೇಪದೆ ಯಾಕೆ ಬದಲಾವಣೆ? 

ಕೋವಿಡ್- 19 ಲಸಿಕೆ ಸೃಷ್ಟಿಸಿದ ನವ ಶತಕೋಟ್ಯಧಿಪತಿಗಳು; ಇವರ ಆಸ್ತಿ ಮೌಲ್ಯ 1930 ಕೋಟಿ ಯುಎಸ್​ಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್