AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್- 19 ಲಸಿಕೆ ಸೃಷ್ಟಿಸಿದ ನವ ಶತಕೋಟ್ಯಧಿಪತಿಗಳು; ಇವರ ಆಸ್ತಿ ಮೌಲ್ಯ 1930 ಕೋಟಿ ಯುಎಸ್​ಡಿ

ಕೋವಿಡ್ 19 ಲಸಿಕೆಯ ಬೌದ್ಧಿಕ ಆಸ್ತಿಯನ್ನು ತೆಗೆದುಹಾಕಬೇಕು. ಮುಂದುವರಿಯುತ್ತಿರುವ ದೇಶಗಳಿಗೆ ಅದು ಸಿಗಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಈ ಮಧ್ಯೆ ಲಸಿಸಿಕೆಯಿಂದಲೇ ಶ್ರೀಮಂತರಾದ ಕನಿಷ್ಠ 9 ಮಂದಿ ಶತಕೋಟ್ಯಧಿಪತಿಗಳ ಮಾಹಿತಿ ಇಲ್ಲಿದೆ.

ಕೋವಿಡ್- 19 ಲಸಿಕೆ ಸೃಷ್ಟಿಸಿದ ನವ ಶತಕೋಟ್ಯಧಿಪತಿಗಳು; ಇವರ ಆಸ್ತಿ ಮೌಲ್ಯ 1930 ಕೋಟಿ ಯುಎಸ್​ಡಿ
ಕೊವಿಡ್ 19 ಲಸಿಕೆ ಪ್ರಾತಿನಿಧಿಕ ಚಿತ್ರ
Srinivas Mata
|

Updated on:May 20, 2021 | 9:14 PM

Share

ಕೋವಿಡ್- 19 ಲಸಿಕೆಗಳಿವೆಯಲ್ಲಾ ಇವುಗಳ ವ್ಯವಹಾರದಿಂದ ಕನಿಷ್ಠ 9 ಮಂದಿ ಶತಕೋಟ್ಯಧಿಪತಿಗಳಾಗಿದ್ದಾರೆ. ಈ ಬಗ್ಗೆ ಕ್ಯಾಂಪೇನ್ ಗುಂಪೊಂದು ಗುರುವಾರ ಹೇಳಿದ್ದು, ಲಸಿಕೆ ತಂತ್ರಜ್ಞಾನದ ಮೇಲಿನ ಏಕಸ್ವಾಮ್ಯ ಹತೋಟಿಯನ್ನು ಕೊನೆಗೊಳಿಸುವಂತೆ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ಸ್ ಗೆ ಹೇಳಿವೆ. ಪೀಪಲ್ ವ್ಯಾಕ್ಸಿನ್ ಅಲೈಯನ್ಸ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಒಂಬತ್ತು ಮಂದಿ ಶತಕೋಟ್ಯಧಿಪತಿಗಳು ಸೇರಿ ನಿವ್ವಳ ಸಂಪತ್ತಿನ ಮೌಲ್ಯ 1930 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ. ಆ ಮೊತ್ತದಲ್ಲಿ ಕಡಿಮೆ ಆದಾಯದ ದೇಶದಲ್ಲಿ 1.3 ಬಾರಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಬಹುದು ಎಂದಿದೆ. ಕೋವಿಡ್ ಲಸಿಕೆ ಮೇಲೆ ಪೇಟೆಂಟ್ ಮತ್ತು ಪ್ರಾಪರ್ಟಿ ಹಕ್ಕನ್ನು ಕೊನೆಗೊಳಿಸಬೇಕು ಎಂದು ವಿವಿಧ ಸಂಸ್ಥೆಗಳ ಒಕ್ಕೂಟಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜಾಲಗಳು ಅಭಿಯಾನ ನಡೆಸುತ್ತಿವೆ. ಅಂದ ಹಾಗೆ ಇಲ್ಲಿ ನೀಡಿರುವ ಅಂಕಿ- ಅಂಶ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇರುವ ಡೇಟಾ ಎಂದು ಸಹ ಅವುಗಳು ಹೇಳಿವೆ.

ಕೊರೊನಾ ಲಸಿಕೆ ಮೇಲೆ ಹಕ್ಕು ಹೊಂದಿ, ದೊಡ್ಡ ಲಾಭ ಮಾಡಿರುವ ಫಾರ್ಮಾಸ್ಯುಟಿಕಲ್ಸ್ ಕಂಪೆನಿಗಳ ಮನುಷ್ಯ ಮುಖಗಳು ಈ ಶತಕೋಟ್ಯಧಿಪತಿಗಳು ಎಂದು ಆಕ್ಸ್​ಫಾಮ್​ನ ಅನ್ನಾ ಮೆರಿಯಟ್ ಹೇಳಿದ್ದಾರೆ. ಹೊಸದಾಗಿ ಸಿರಿವಂತರಾದವರು ಒಂದು ಕಡೆಯಾಯಿತು. ಇದರ ಜತೆಗೆ, ಎಂಟು ಮಂದಿ ಅದಾಗಲೇ ಶ್ರೀಮಂತರಿದ್ದವರ ಸಂಪತ್ತಿನಲ್ಲಿ 3220 ಕೋಟಿ ಅಮೆರಿಕನ್ ಡಾಲರ್ ಈ ಲಸಿಕೆ ಕಾರಣಕ್ಕೇ ಜಾಸ್ತಿ ಆಗಿದೆ. ಕೊರೊನಾ ಲಸಿಕೆ ಮೂಲಕ ಶತಕೋಟ್ಯಧಿಪತಿಯಾದವರ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿ ಇರುವವರು ಮಾಡೆರ್ನಾದ ಸಿಇಒ ಸ್ಟೆಫಾನಿ ಬಾನ್ಸೆಲ್ ಮತ್ತು BioNTechನ ಉಗುರ್ ಸಾಹಿನ್ ಇದ್ದಾರೆ. ಇತರ ಮೂವರು ಹೊಸ ಶತಕೋಟ್ಯಧಿಪತಿಗಳೆಂದರೆ ಚೀನೀ ಲಸಿಕೆ ಕಂಪೆನಿಯಾದ CanSino ಬಯಾಲಾಜಿಕ್ಸ್​ ಸಹ ಸಂಸ್ಥಾಪಕರು.

ಜಿ- 20 ಜಾಗತಿಕ ಆರೋಗ್ಯ ಸಮಾವೇಶ ಶುಕ್ರವಾರ ಇರುವ ಹಿನ್ನೆಲೆಯಲ್ಲಿ ಕೋವಿಡ್- 19 ಲಸಿಕೆಗೆ ತಾತ್ಕಾಲಿಕವಾಗಿಯಾದರೂ ಬೌದ್ಧಿಕ ಆಸ್ತಿ ಹಕ್ಕು ತೆಗೆಯಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಹೀಗೆ ತೆಗೆಯುವುದರಿಂದ ಮುಂದುವರಿಯುತ್ತಿರುವ ದೇಶಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಲಸಿಕೆ ದೊರೆಯುವ ವಿಚಾರದಲ್ಲಿ ಇರುವ ಅಸಮಾನತೆ ನಿವಾರಣೆ ಆಗುತ್ತದೆ ಎಂದಿದೆ. ಅಮೆರಿಕ ದೇಶ ಹಾಗೂ ಪೋಪ್ ಫ್ರಾನ್ಸಿಸ್ ಕೂಡ ಬೌದ್ಧಿಕ ಆಸ್ತಿ ರಕ್ಷಣೆಯಿಂದ ಕೊರೊನಾ ಲಸಿಕೆಯನ್ನು ಜಾಗತಿಕವಾಗಿ ಮುಕ್ತಗೊಳಿಸಬೇಕು ಎಂಬುದನ್ನು ಬೆಂಬಲಿಸುತ್ತಿದ್ದಾರೆ.

ಇನ್ನು ಕೆಲವು ನಿರ್ದಿಷ್ಟ ಲಸಿಕೆಗಳ ಮೇಲೆ ಬೌದ್ಧಿಕ ಆಸ್ತಿ ನಿಯಮಗಳ ಮೇಲಿನ ನಿರ್ಬಂಧವನ್ನು ತೆಗೆಯಬೇಕು ಹಾಗೂ ಕೊರೊನಾ ಮಧ್ಯೆ ಆಫ್ರಿಕಾಗೆ ಹಣಕಾಸು ನೆರವು ಒದಗಿಸಬೇಕು ಎಂದು ಪ್ಯಾರಿಸ್ ಸಮಾವೇಶದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಆಯೋಗವು ಬುಧವಾರ ವಿಶ್ವ ವಾಣಿಜ್ಯ ಒಕ್ಕೂಟದಲ್ಲಿ ರಚನಾತ್ಮಕವಾಗಿ ಮಾತನಾಡಿದ್ದಾರೆ.

ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿಯುವುದಕ್ಕೆ ತೆರಿಗೆದಾರರ ಭಾರೀ ಮೊತ್ತ ಕಾರಣ. ಕೊರೊನಾ ಎರಡನೇ ಮತ್ತು ಮೂರನೇ ಅಲೆಯಲ್ಲಿ ಖಾಸಗಿ ವ್ಯಕ್ತಿಗಳು ಕೋಟ್ಯಂತರ ಮೊತ್ತವನ್ನು ನಗದು ಮಾಡಿಕೊಳ್ಳುವುದಕ್ಕೆ ಬಿಡುವುದು ಸರಿಯಲ್ಲ ಎಂದು ಗ್ಲೋಬಲ್ ಜಸ್ಟಿಸ್ ನೌನಲ್ಲಿ ಹಿರಿಯ ಪಾಲಿಸಿ ಮತ್ತು ಕ್ಯಾಂಪೇನ್ಸ್ ಮ್ಯಾನೇಜರ್ ಹೈದಿ ಚೌ ಹೇಳಿದ್ದಾರೆ. ಇದರ ಮೂಲಕ ಬಿಲಿಯನೇರ್ ಡೇಟಾ ವಿಶ್ಲೇಷಿಸಲು ಅನುಕೂಲವಾಗುತ್ತದೆ. ಭಾರತದಲ್ಲಿ ಪ್ರತಿದಿನ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಲಕ್ಷಾಂತರ ಮಂದಿಗೆ ಲಸಿಕೆ ಅಗತ್ಯ ಇರುವ ಚಿಕಿತ್ಸೆ ಬೇಕಿರುವುದರಿಂದ ದೊಡ್ಡ ಫಾರ್ಮಾಗಳ ಬಿಲಿಯನೇರ್​ಗಳ ಸಂಪತ್ತು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಉತ್ಪಾದಕರಿಂದ ಲಸಿಕೆ ಉತ್ಪಾದನೆ ಹೆಚ್ಚು ಮಾಡುವುದಕ್ಕೆ ಪೇಟೆಂಟ್ ಸಂರಕ್ಷಣೆ ಒಂದೇ ಒಂದು ಮಾತ್ರ ಅಡ್ಡಿ ಅಲ್ಲ. ಆದರ ಜತೆಗೆ ಉತ್ಪಾದನಾ ಸ್ಥಳ, ಕಚ್ಚಾ ವಸ್ತುಗಳ ಸರಬರಾಜು, ಅರ್ಹತೆ ಇರುವ ವ್ಯಕ್ತಿಗಳು ಇತ್ಯಾದಿ ಸಹ ಮುಖ್ಯವಾಗುತ್ತದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತರನ್ನೂ ಮೀರಿಸಿದ ಗೌತಮ್ ಅದಾನಿ; ಇವರ ಮುಂದೆ ಬೆಜೋಸ್, ಮಸ್ಕ್ ಕೂಡ ಮಸುಕು

(Atleast 9 people become billionaires by covid- 19 vaccine according to report by group of organisations)

Published On - 9:12 pm, Thu, 20 May 21

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?