Fact Check: ‘ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ’ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ಫೇಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 10, 2024 | 11:07 AM

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ನೈಜ್ಯ ಚಿತ್ರವಲ್ಲ, AI ಉಪಕರಣಗಳ ಸಹಾಯದಿಂದ ಇದನ್ನು ರಚಿಸಲಾಗಿದೆ ಎಂದು ಕಂಡುಕೊಂಡಿದೆ. ಈ ಪೋಸ್ಟ್​ನ ನಿಜಾಂಶ ತಿಳಿಯಲು ನಾವು ಮೊದಲು ಫೋಟೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಆಗ ಈ ಫೋಟೋದಲ್ಲಿ ಕೆಲವು ಕೊರತೆಗಳು ಕಂಡುಬಂದವು.

Fact Check: ‘ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ’ ಎಂದು ಮಕ್ಕಳು ಪೋಸ್ಟರ್ ಹಿಡಿದಿರುವ ಈ ಫೋಟೋ ಫೇಕ್
ಬಾಂಗ್ಲಾದೇಶ ಗಲಭೆ
Follow us on

ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಮತ್ತು ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ಶೋಷಣೆ ಮತ್ತು ಹಿಂಸಾಚಾರದ ಘಟನೆಗಳ ನಡುವೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಇಬ್ಬರು ಮಕ್ಕಳು ಅಳುತ್ತಿರುವ ದೃಶ್ಯ ಕಂಡು ಇದರಲ್ಲಿದೆ. ಚಿತ್ರದಲ್ಲಿ ಮಕ್ಕಳು “ಬಾಂಗ್ಲಿಯಾದೇಶಿ ಹಿಂದೂಗಳನ್ನು ಉಳಿಸಿ” ಎಂದು ಬರೆದಿರುವ ಫಲಕವನ್ನು ಹಿಡಿದಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಡಿಸೆಂಬರ್ 3, 2024 ರಂದು ಈ ಫೋಟೋವನ್ನು ಹಂಚಿಕೊಂಡು, “ಬಾಂಗ್ಲಾದೇಶಿ ಹಿಂದೂಗಳನ್ನು ಕಾಪಾಡಿ” ಎಂದು ಹ್ಯಾಶ್​ಟ್ಯಾಗ್ ಹಾಕಿ ಈ ಫೋಟೋವನ್ನು ಎಲ್ಲರೂ ಸ್ಟೇಟಸ್ ಹಾಕಿಕೊಳ್ಳಿ ಎಂದು ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ನೈಜ್ಯ ಚಿತ್ರವಲ್ಲ, AI ಉಪಕರಣಗಳ ಸಹಾಯದಿಂದ ಇದನ್ನು ರಚಿಸಲಾಗಿದೆ ಎಂದು ಕಂಡುಕೊಂಡಿದೆ. ಈ ಪೋಸ್ಟ್​ನ ನಿಜಾಂಶ ತಿಳಿಯಲು ನಾವು ಮೊದಲು ಫೋಟೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಆಗ ಈ ಫೋಟೋದಲ್ಲಿ ಕೆಲವು ಕೊರತೆಗಳು ಕಂಡುಬಂದವು. ಇಲ್ಲಿರುವ ಮಗುವಿಗೆ ಒಂದು ಕೈಯಲ್ಲಿ 6 ಬೆರಳುಗಳಿದ್ದಂತಿದೆ. ಅಲ್ಲದೆ, ಮಕ್ಕಳು ಹಿಡಿದಿರುವ ಫಲಕದಲ್ಲಿ ಬಾಂಗ್ಲಾದೇಶಿ ಮತ್ತು ಹಿಂದೂಗಳ ಕಾಗುಣಿತ ತಪ್ಪಾಗಿದೆ. ಮಕ್ಕಳ ಮುಖವೂ ಕೃತಕವಾಗಿ ಕಾಣುತ್ತದೆ. ಹೀಗಾಗಿ ಈ ಫೋಟೋ AI ರಚಿತವಾಗಿರಬಹುದು ಎಂಬ ಅನುಮಾನ ಬಂತು.

ಇದಕ್ಕಾಗಿ ನಾವು AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್‌ನೊಂದಿಗೆ ಈ ಫೋಟೋವನ್ನು ಪರಿಶೀಲಿಸಿದ್ದೇವೆ. ಇದರಲ್ಲಿ AI ನಿಂದ ಈ ಫೋಟೋವನ್ನು ರಚಿಸುವ ಸಂಭವನೀಯತೆ 99.9 ಪ್ರತಿಶತ ಎಂದು ಹೇಳಲಾಗಿದೆ. ಇನ್ನಷ್ಟು ಖಚಿತ ಮಾಹಿತಿಗಾಗಿ AI ಇಮೇಜ್ ಡಿಟೆಕ್ಷನ್ ಟೂಲ್ ಸೈಟ್ ಇಂಜಿನ್‌ನೊಂದಿಗೆ ನಾವು ಈ ಫೋಟೋವನ್ನು ಪರಿಶೀಲಿಸಿದ್ದೇವೆ. ಇಲ್ಲಿ ಕೂಡ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 99 ಪ್ರತಿಶತ ಎಂದು ಹೇಳಿದೆ.

ಖಾಸಗಿ ವೆಬ್​ಸೈಟ್ ಕೂಡ ಈ ಕುರಿತು ವರದಿ ಮಾಡಿದ್ದು, ಅವರು ಎಐ ತಜ್ಞ ಅಂಶ್ ಮೆಹ್ರಾ ಬಳಿ ಈ ಫೋಟೋದ ಬಗ್ಗೆ ಪಡೆದ ಮಾಹಿತಿಯನ್ನು ಹಂಚಿಕೊಂಡಿದೆ. ಅಂಶ್ ಮೆಹ್ರಾ ಕೂಡ ಈ ವೈರಲ್ ಫೋಟೋವನ್ನು ಎಐ ರಚಿಸಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಮಕ್ಕಳ ಈ ಫೋಟೋವನ್ನು AI ನಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಬಾಂಗ್ಲಾದೇಶಕ್ಕೆ ಭಾರತದ ಸಂದೇಶ:

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಭಾರತದ ಕಳವಳವನ್ನು ಢಾಕಾಗೆ ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ಅವರೊಂದಿಗಿನ ಸಭೆಯಲ್ಲಿ ಮಿಶ್ರಿ ಅವರು ಬಾಂಗ್ಲಾದಲ್ಲಿನ ಧಾರ್ಮಿಕ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳು ವಿಷಾದನೀಯ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರ ಸಮಸ್ಯೆಯ ಕುರಿತು ಮಾತನಾಡಿದ ಮಿಶ್ರಿ, ‘‘ನಾವು ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸಿದ್ದೇವೆ. ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದವುಗಳು ಸೇರಿದಂತೆ ನಮ್ಮ ಕಳವಳಗಳನ್ನು ನಾನು ತಿಳಿಸಿದ್ದೇನೆ. ನಾವು ಸಾಂಸ್ಕೃತಿಕ ಮತ್ತು ಧಾರ್ಮಿಕ ಆಸ್ತಿಗಳ ಮೇಲಿನ ದಾಳಿಯ ವಿಷಾದನೀಯ ಘಟನೆಗಳ ಬಗ್ಗೆಯೂ ಚರ್ಚಿಸಿದ್ದೇವೆ’’ ಎಂದಿದ್ದಾರೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ